Advertisement

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನಾಲ್ಕು ಕೇಂದ್ರ

06:29 PM Jun 24, 2020 | Naveen |

ಯಡ್ರಾಮಿ: ಜೂನ್‌ 25ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ತಾಲೂಕಿನ ಪರೀಕ್ಷಾ ಕೇಂದ್ರಗಳಲ್ಲಿ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಒಟ್ಟು ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ 1443 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

Advertisement

ಯಡ್ರಾಮಿ ಕೇಂದ್ರದಲ್ಲಿ 486 ವಿದ್ಯಾರ್ಥಿಗಳು, ಮಳ್ಳಿ ಕೇಂದ್ರದಲ್ಲಿ 295 ವಿದ್ಯಾರ್ಥಿಗಳು, ಇಜೇರಿ ಕೇಂದ್ರದಲ್ಲಿ 342 ವಿದ್ಯಾರ್ಥಿಗಳು, ಆಲೂರು ಕೇಂದ್ರದಲ್ಲಿ 312 ವಿದ್ಯಾರ್ಥಿಗಳು ಸೇರಿದಂತೆ 1443 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪ್ರತಿ ಕೇಂದ್ರದಲ್ಲಿ ಎರಡು ಕೋವಿಡ್‌ ವಿಶೇಷ ಬ್ಲಾಕ್‌ಗಳನ್ನು ತೆರೆದಿದ್ದು, ಸಿಸಿ ಕ್ಯಾಮೆರಾ ಅಳವಡಿಕೆ, ಎರಡು ಡಿಜಿಟಲ್‌ ಥರ್ಮಲ್‌ ಸ್ಕ್ರೀನಿಂಗ್‌ ಕೇಂದ್ರಗಳನ್ನು ತೆರೆಯಲಾಗಿದೆ. ಸಾನಿಟೈಸರ್‌ ವ್ಯವಸ್ಥೆ ಜೊತೆಗೆ ಪ್ರತಿ ವಿದ್ಯಾರ್ಥಿಗೆ ಎರಡು ಮಾಸ್ಕ್ ವಿತರಿಸಲಾಗುತ್ತಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆರೋಗ್ಯ ಇಲಾಖೆ, ಗ್ರಾ.ಪಂ, ಪೊಲೀಸ್‌ ಇಲಾಖೆ ಸಹಕಾರ ಕೋರಿದ್ದೇವೆ. ಪರೀಕ್ಷೆ ಸುಸೂತ್ರವಾಗಿ ಸಾಗಲು ಪಾಲಕರು-ಪೋ‚ಷಕರ ಸಹಕಾರ ಅಗತ್ಯವಾಗಿದೆ.
ಪ್ರಭುಗೌಡ ದೇಸಾಯಿ, ಇಸಿಒ,
ತಾಲೂಕು ನೋಡಲ್‌ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next