Advertisement

Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ

01:17 PM Oct 29, 2024 | Team Udayavani |

ಯಾದಗಿರಿ: ಯಾದಗಿರಿಯಲ್ಲಿ ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ ಎಂದು ಸಚಿವ ಶರಣಬಸಪ್ಪ ಗೌಡ ದರ್ಶನಾಪುರ ಸ್ಪಷ್ಟನೆ ನೀಡಿದ್ದಾರೆ.

Advertisement

ವಕ್ಫ್ ಬೋರ್ಡ್ ಸುದ್ದಿ ವಿಚಾರವಾಗಿ ಯಾದಗಿರಿಯಲ್ಲಿ‌ ಜಿಲ್ಲಾ ಉಸ್ತುವಾರಿ ಸಚಿವ ದರ್ಶನಾಪುರ ಹೇಳಿಕೆ ನೀಡಿದ್ದು, ಬಿಜೆಪಿ ಅವರಿಗೆ ಮಾಡೋಕೆ ಬೇರೆ ಕೆಲಸ ಇಲ್ಲ, ಬೆಂಕಿ ಹಚ್ಚುವ ಗುಣ ಅವರು ಮೊದಲಿನಂದಲೂ ಅನುಸರಿಸಿಕೊಂಡು ಬರುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ವಕ್ಫ್ ಬೋರ್ಡ್ ರೈತರ ಭೂಮಿಯನ್ನು ವರ್ಗಾಯಿಸಿದರೆ ಅದಕ್ಕೆ ಸೂಕ್ತವಾದ ಕ್ರಮ ಕೋರ್ಟ್ ನಿರ್ಧರಿಸಲಿದೆ.

ಯಾದಗಿರಿಯಲ್ಲಿ ಸಾವಿರಕ್ಕೂ ಹೆಚ್ಚು ಎಕರೆ ಭೂಮಿ ರೈತರ ಹೆಸರಿನಿಂದ ವಕ್ಫ್ ಬೋರ್ಡ್ ಗೆ ವರ್ಗಾವಣೆ ಎನ್ನಲಾದ ಸುದ್ದಿ ಸುಳ್ಳೆಂದು ಸಚಿಚ ಶರಣಬಸಪ್ಪ ದರ್ಶನಾಪುರ ಅವರು ಅಲ್ಲಗಳೆದರು.

ಯಾದಗಿರಿ ಜಿಲ್ಲೆಯಲ್ಲಿ ಆ ತರ ಘಟನೆ ನಡೆದರೆ ಮೊದಲು ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ನಾನೇ ಸ್ವತಃ ತಿಳಿಸುತ್ತೇನೆ ಎಂದರು ಸಚಿವರು ಹೇಳಿದರು.

Advertisement

ಊಹಾಪೋಹಗಳು, ಗಾಳಿಯಲ್ಲಿ ಗುಂಡು ಹಾರೊಸುವುದು ಬಿಜೆಪಿಯವರ ಹಾಗೂ ಅವರ ಕೃಪಾಪೋಷಿತ ವ್ತಕ್ತಿಗಳಿಂದ ರಾಜ್ಯ ಸರ್ಕಾರದ ಮೇಲೆ ಆರೋಪಗಳು ನಡೆಯುತ್ತಿವೆ‌ ಎಂದರು.

ಸತ್ಯಸತ್ಯತೆಗಳು ಕೋರ್ಟ್ ತೀರ್ಮಾನ ಮಾಡಲಿದೆ. ವಿಜಯಪುರದಲ್ಲಿ ಹಿಂದೆ ಹಾಗೂ ಈಗ ಬಿಜೆಪಿಯ ಶಾಸಕರೇ ಇದ್ದಾರೆ. ಹಿಂದೆ ಬಿಜೆಪಿಯವರದ್ದೆ ಸರ್ಕಾರ ಇತ್ತಲ್ವ ಆಗ ಯಾವುದೇ ರೈತರ ಭೂಮಿ ವರ್ಗಾವಣೆ ಆಗಲಿಲ್ಲವೇ, ಬಿಜೆಪಿ ಅವರಿಗೆ ರೈತರ ಭೂಮಿ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ ಎಂದು ಹೇಳಿದರು.

ಬಿಜೆಪಿಯಲ್ಲಿ ಆರೋಪಗಳ ಮಾಡುವ ವ್ಯಕ್ತಿಗಳೆ ತುಂಬಿದ್ದಾರೆ ಹೊರತು ಸ್ಪಷ್ಟತೆ ನೀಡುವ ಧೈರ್ಯ ಯಾರಿಗೂ ಇಲ್ಲ ಎಂದರು.

ಇದನ್ನೂ ಓದಿ: Hubballi: ವಕ್ಫ್ ಗೊಂದಲ ರಾಜ್ಯ ಸರ್ಕಾರದ ನಿರ್ವಹಣಾ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆ: ಶೆಟ್ಟರ್

Advertisement

Udayavani is now on Telegram. Click here to join our channel and stay updated with the latest news.

Next