Advertisement

ಯಡ್ನೂರಪ್ಪ-ಈಶ್ವರಪ್ಪ ಕುಚುಕು ಅಂತ ಬಿಜೆಪಿ ಬಿಲ್ಡ್‌ ಮಾಡ್ತಾರಂತೆ

06:25 AM May 21, 2017 | |

ಈಶ್ವರಪ್‌ನೋರು ರಾಯಣ್ಣುಂದು ಬ್ರಿಗೇಡ್‌ ಮಾಡಿ ನಾನೂ ಅಪ್ಪಂಗೆ ಹುಟ್ಟಿರೋದು ಅಂತ ಅವಾಜ್‌ ಹಾಕಾªಗ, ಇದೇ ಯಡ್ನೂರಪ್ಪ, ಆಯ್ತು ಬುಡು ನಂಗೂ ಗೊತ್ತದೆ, ನಾವು ಹಂಗೆಯಾ ಹುಟ್ಟಿರೋದು, ಲಾಸ್ಟ್‌ ಎಲೆಕ್ಷನ್ಯಾಗೆ ಈಶ್ವರಪ್ಪ ಅಂಡ್‌ ಗ್ಯಾಂಗು ಮೂರೆ°à ಪ್ಲೇಸ್‌ ಹೋಗಿದ್ರು ಗೊತ್ತದಾ ಅಂತಾ ಕಿಚಾಯ್ಸಿದ್ರು. 

Advertisement

ಅಮಾಸೆ: ನಮಸ್ಕಾರ ಸಾ……
ಚೇರ್ಮನ್ರು: ಏನಾÉ ಅಮಾಸೆ,ಎಲ್‌Yಲಾ ಹೊಂಟೆ
ಅಮಾಸೆ: ಏನಿಲ್ಲಾ ಸಾ…, ನಿನ್ನೆ ಮೊನ್ನೆಗಂಟಾ “ಯಾರು ತಿಳಿಯರು ನಿನ್ನ ಭುಜ ಬಲದ ಪರಾಕ್ರಮಾ’ ಅಂತಾ ಬಾಯ್ಗೆ ಬಂದಂಗೆ ಬಯ್ದಾಡ್‌ಕೊಂಡ್‌ ಎಗರಾಡ್ತಿದ್ದ ಯಡ್ನೂರಪ್‌ನೋರು- ಈಶ್ವರಪ್‌ನೋರು ಈಗ “ಕುಚುಕು,ಕುಚುಕು, ಕುಚುಕು, ನೀ ಚೆಡ್ಡಿ ದೋಸ್ತು ಕಣೋ ಕುಚುಕು’ ಅಂತ ಸಯಾಮಿ ಸಿಸುಗಳಂಗೆ ಒಂದಾಗವ್ರಂತೆ. ಅದೇ ಖುಸೀಲಿ ನಮ್‌ ಊರ್‌ಗೆ ಬರ ಪ್ರವಾಸ ಬತ್ತಾವ್ರಂತೆ. ಅನಂತ್‌ಕುಮಾರುÅ, ಸದಾನಂದಗೌಡ್ರು, ಶೋಭಕ್ಕ ನೋರು ಅವ್ರಂತೆ ಅದ್ಕೆ ನೋಡುಮಾ ಅಂತ ಹೊಂಟಿವ್ನಿ

ಚೇರ್ಮನ್ರು: ಬರ ಪ್ರವಾಸಾನಾ, ಮಳೆ ಬೀಳ್ಳೋವಾಗಾ ಅದೆಂತದ್ಲಾ ಬರ ಪ್ರವಾಸ. ಕೊಡೆ ಹಿಡ್‌ಕೊಂಡ್‌ ಬರೋದಾ ಬರ ಪ್ರವಾಸ್ಕೆ. ಅದ್ಕೆàನ್‌ ಟೈಮು ಟೇಬಲ್ಲು ಇಲ್ವಾ. ಅವ್ರಗೇನೋ ಕೇಮಿಲ್ಲ ಬತ್ತಾವೆÅ, ನಿನೆYàನು ಕೇಮಿಲ್ವೇನÉ, ಅವ್ರ ನೋಡಾಕ್‌ ಕೆಲ್ಸ ಬಿಟ್ಟು ಹೊಂಟಿದಿಯಾ.

ಅಮಾಸೆ: ಹಂಗಲ್ಲಾ ಸಾ…,ಈಶ್ವರಪ್‌ನೋರು ರಾಯಣ್ಣುಂದು ಬ್ರಿಗೇಡ್‌ ಮಾಡಿ ನಾನೂ ಅಪ್ಪಂಗೆ ಹುಟ್ಟಿರೋದು ಅಂತ ಅವಾಜ್‌ ಹಾಕಾªಗ, ಇದೇ ಯಡ್ನೂರಪ್ಪ, ಆಯ್ತು ಬುಡು ನಂಗೂ ಗೊತ್ತದೆ, ನಾವು ಹಂಗೆಯಾ ಹುಟ್ಟಿರೋದು, ಲಾಸ್ಟ್‌ ಎಲೆಕ್ಷನ್ಯಾಗೆ ಈಶ್ವರಪ್ಪ ಅಂಡ್‌ ಗ್ಯಾಂಗು ಮೂರೆ°à ಪ್ಲೇಸ್‌ ಹೋಗಿದ್ರು ಗೊತ್ತದಾ ಅಂತಾ ಕಿಚಾಯ್ಸಿದ್ರು. ಅದ್ಕೆ  ಈಶ್ವರಪ್‌ನೋರು, ಆಯ್ತು ಲಾಸ್ಟ್‌ ಎಲೆಕ್ಷನ್ಯಾಗೆ ಯಡಿಯೂಪ್‌ನೋರು ಕಟ್ಟಿದ್‌ ಕೆಜಿಪಿ ಏನ್‌ ಸಾಧನೆ ಮಾಡು¤ ಗೊತ್ತದೆ ಅಂತ ತಿರಿಗಿಸಿ ಟ್ಟಿದ್ರು. ಹಂಗೆಲ್ಲಾ ಬೈಯ್ದಾಡಿಕೊಂಡೋರು ಈಗ್‌ ಹೆಂಗ್‌ ಕುಚುಕು ಕುಚುಕು ಅಂತ ಬತ್ತಾವೆÅ ಅಂತ ನೋಡುಮಾ ಅಂತ ಹೋಯ್ತಿದೀನಿ ಅಷ್ಟೇಯಾ. ಅವ್ರು ಬರ ಪ್ರವಾಸ್ಕ್ ಬತ್ತೀಲ್ಲ ಅಂಬೋದು ನಂಗೂ ಗೊತ್ತೈತೆ. ಹೆಸ್ರು ಬರ ಪ್ರವಾಸ ಅಂತ, ಬರಿ¤ರೋದು ಬಿಜೆಪಿ ಬಿಲ್ಡಪ್‌ಗೆ.

ಚೇರ್ಮನ್ರು: ರಾಜಕೀಯ್ದಾಗೆ ಅವೆಲ್ಲಾ ಕಾಮನ್‌ ಕಣಾÉ ಅಮಾಸೆ. ಆಸೆಂಬ್ಲಿ, ಬೆಂಗಳೂರ್‌ ಕಾರ್ಪೊರೇಷನ್‌ ಮೀಟಿಂಗ್‌ನ್ಯಾಗೆ ಏನೇನ್‌ ನಡೀತೈತೆ ಟಿವಿಯಾಗ್‌ ನೋಡಿಲ್ವಾ, ಒಬ್ಬರ್‌ಗೊಬ್ರು ಹೊಯ್‌ಕೈ ಅಂತ ಗಲಾಟೆ  ಮಾಡಿ ಆಮೇಲೆ ಆಚೆ ಬಂದು  ಬ್ರದರ್‌ ಹೆಂಗೆ ಅಂತ ಕಣ್‌ ಮಿಟಿಕ್ಸಿ ರಾತ್ರಿ ಒಂದೇ ಟೇಬಲ್‌ನ್ಯಾಗೆ ಕೂತ್ಕೊಂಡು ಎಣ್ಣೆ ಹಾಕಲ್ವಾ. ಯಡ್ನೂರಪ್ಪ- ಈಶ್ವರಪ್ಪ ಕಥೇನ ಹಂಗೇ ಬಿಡ್ಲಾ. ರಾಜಕೀಯೊªàರು ಹೊರಗೆ ಕುಸ್ತಿ, ಒಳಗೆ ದೋಸ್ತಿ ಅಂತ ಎಲಿÅಗೂ ಗೊತ್ತೈತೆ. ಆಯ್ತು, ಬರ ನೋಡಕಲ್ಲಾ ಬತ್ತೀರೋದು ಬಿಲ್ಡಪ್ಪು ಅಂದ್ಯಲ್ಲಾ, ಅದೇನಾÉ ಬಿಲ್ಡಪ್ಪು,ಅದ್ಯಾಕ್ಲ ಬೇಕು.

Advertisement

ಅಮಾಸೆ:ಹಂಗಲ್ಲಾ ಸಾ…ಬಿಜೆಪಿ ಬಿಲ್ಡ್‌ ಮಾಡೋಕೆ ಬತ್ತಾವ್ರಂತೆ.
ಚೇರ್ಮನ್ರು: ಹಂಗಾದ್ರೆ ಬಿಜೆಪಿ ಇನ್ನೂ ಬಿಲ್ಡ್‌ ಆಗಿಲ್ವಾ.

ಅಮಾಸೆ: ಅಯ್ಯೋ ಸಾ.. ಇನ್ನೊಂದ್‌ ವರ್ಷಕೆ ಎಲೆಕ್ಷನ್‌ ಐತಲ್ಲಾ ಅದ್ಕೆ ಪಕ್ಸಾನಾ ಕಟ್‌ಬೇಕಲ್ವೇ ಅದ್ಕೆ ಎಲ್ರೂ ಒಟ್‌ಗಿದೀವಿ ಅಂತ ಜಂಬೋಜೆಟ್‌ ಪ್ರವಾಸ ಬತ್ತಾವೆÅ

ಚೇರ್ಮನ್ರು: ಹೌದಾ, ಅದೇ ನಾನ್‌ ಹೇಳಿಲ್ವಾ ಇದೆಲ್ಲಾ ನಮ್‌ ಚಿಂದೋಡಿ ಲೀಲಕ್ಕನಾ ನಾಟ್ಕದ ಕಂಪನಿ ತರಾ ಅಮಾಸೆ. ಹೌದ್ಲಾ, ಯಡ್ನೂರಪ್ನೊàರು ಅದೇನೋ ದಲಿತ್ರ ಮನ್ಯಾಗಾ ನಾಸ್ಟಾ ಮಾಡಾಕ್‌ ಬತ್ತೀವಿ ಅಂತ ಬಂದು, ಐನೋರ್‌ ಹೋಟ್ಲಾಗೆ ಇಡ್ಲಿ, ಪೊಂಗಲ್‌ ತರಿ ತಿಂದ್ರತೆ. ದಲಿತ್ರ ಮನ್ಯಾಗ ಪಲಾವ್‌ ತಿನ್‌ಲಿಲ್ವಂತೆ ಯಾಕ್ಲಾ
ಅಮಾಸೆ: ಹಂಗೇನಿಲ್ಲ ತಗಳಿ. ಬೆಳ್‌ ಬೆಳಗ್ಗೆ ಪಲಾವ್‌ ತಿಂದ್ರೆ ಆಗಾಕಿಲ್ಲ. ಸಾಫ್ಟ್ ಫ‌ುಡ್‌ ತಿನ್ನಿ, ಇಲ್ಲಾಂದ್ರೆ ಮಾತ್ರೆ ತಕ್ಕೊಬೇಕಾ ಯ್ತದೆ ಅಂತ ಡಾಕುಟುರು ಹೇಳಿದ್ರಂತೆ. ಅದ್ಕೆ ಐನೋರು ಹೋಟಿÉಂದ ಇಡ್ಲಿ ಪೊಂಗಲ್‌ ತರಿÕದ್ರಂತೆ. ಜತೆಗ್‌ ಬಿಸ್ಲೆರಿ ವಾಟರುÅ ಇರ್ಲಿ ಅಂತ ತರ್ಕೊಂಡ್ರಂತೆ. ಎಷ್ಟಾದ್ರೂ ವಯಾÕತ್ತಲ್ಲಾ.

ಚೇರ್ಮನ್ರು: ಆ ಭಾಗ್ಯಕ್ಕೆ ದಲಿತರ ಮನ್ಯಾಗ್‌ ನಾಸ್ಟಾ ಮಾಡೋಕ್‌ ಯಾಕ್‌ ಬರಬೇಕಿತ್ತು. ಐಬಿನ್ಯಾಗೇ ಕೂತ್ಕೊಂಡ್‌ ಐನೋರ್‌ ಹೋಟ್ಲು ಇಡ್ಲಿ-ಪೊಂಗಲ್‌ ತಿನ್‌ಬೇಕಿತ್ತಲ್ವಾ
ಅಮಾಸೆ: ಇದೂ ಒಂದರಾ ಬಿಲ್ಡಪ್ಪೇ ಸಾ. ನಾವ್‌ ಜಾತಿ-ಗೀತಿ ನೋಡಾ ಕಿಲ್ಲಾ ಅಂತ ಪೇಪರೊ°àರ್‌ ಹತ್ರ ಬಿಲ್ಡಪ್‌ ಕೊಟ್ಟವೆÅ. ನೀವ್‌ ಅದೆ°ಲ್ಲಾ ಸೀರಿ ಯಾಗ್‌ ತಕೋಬಾರ್ಧು, ಹೊಟ್ಟೆಗಾಕ್ಕೋಬೇಕು.

ಚೇರ್ಮನ್ರು: ಆಯ್ತು ಬುಡ್ಲಾ ಇವ್ರ ಕಥೆ ಇಷ್ಟೆಯಾ. ಅದೇನಾ ಮೊನ್ನೆ ಅಂಬರೀಷಣ್ಣೋರ್‌ ಮನೇಗಂಟಾ ಸಿದ್ದರಾಮಣ್ಣೋರು, ಪರಮೇಶ್ವರಪ್ಪನೋರು ಹೋಗಿ ಮಾತಾಡಿ ಬಂದವರಲ್ಲಾ, ಏನ್‌ ಕಥೆ.
ಅಮಾಸೆ: ಮಂತೆ, ಎಷ್ಟಾದ್ರೂ ಮಂಡ್ಯದ ಗಂಡು ಅಲ್ವ ನಮ್‌ ಅಂಬರೀಷನ್ನೋರು, ಅಂತ ಸಿನಿಮಾ ದ್ಯಾಗೆ ಯೆ ಕುತ್ತೇ ಕನ್ವರ್‌ಲಾಲ್‌ ಬೋಲೋ ಅಂತ ಹೇಳಿದ್ರೆ ಟಾಕೀಸ್‌ ಫ‌ುಲ್‌ ಸಿಳ್ಳೇನೇ ಅಲ್ವಾ. ಈಗ್ಲೂ ಅವ್ರು ಮಂಡ್ಯದಾಗೆ ಹೀರೋನೆ. ಎಸ್‌.ಎಂ. ಕ್ರಿಷ್ಣ ಣ್ಣೋರು ಕಮಲ ಪಕ್ಸಾ ಸೇರ್‌ª ಮ್ಯಾಕೆ ಮಂಡ್ಯದಾಗೆ ಯಾರ್‌ ಅವೆ ಕಾಂಗ್ರೆಸ್‌ ಪಾಲ್ಟಿಗೆ. ರಮ್ಯ ಮೇಡಂ ಈಗೇನಿದ್ರು ಎಐಸಿಸಿ ಲೆವಲ್ಲು. ಇಲ್ಲೆಲ್ಲಾ ಬಂದು ಚಿಲ್ಟಾ- ಪಲ್ಟಾಗಳ ಜತೆ ಸೇರಾಕಿಲ್ಲಾ. ಮಂಡ್ಯ ಜನಾನೇ ಬಾರಮ್ಮಿ ಅಂತ ಕರೆದ್ರೆ, ಎಂಪಿ ಎಲೆಕ್ಸನ್‌ ಟೈಮ್ಗೆ ಆಯ್ತು ನೋಡುಮಾ ಅಂತ ಹೇಳವ್ರಂತೆ, ಇಲ್ಲಾಂದ್ರೆ, ರಾಜ್ಯಸಭೆ ಎಂಟ್ರಿ ಕೊಟ್ಟು ಆಮ್ಯಾಕೆ ಇತ್ತಾಲ್ಗೆ ವಿಸಿಟಿಂಗ್‌ ಪ್ರೊಫೆಸರ್‌ ಆಗಿ ಬಂದೋಯ್ತಾರೆ ಅಷ್ಟೆ. ಇನ್ನು, ನಾಗ್‌ಮಂಗಲ್ದ ಚೆಲುವಣ್ಣಾ ತೆನೆ ಇಳಿ ಬಂದ್ರೂ ಅಂಬರೀಷ್‌ಗೆ ಸರಿಸಾಟೀನಾ. ಅದ್ಕೆ, ಸಿದ್‌ರಾಮಣ್ಣೋರು ಮೊದು ಹೋಗಿ ಆಯ್ತಪ್ಪ ರೆಬಲ್‌ಸ್ಟಾರು ನೀ ಹೇಳಗೆ ಆಗ್ಲಿ ಎಲ್ಲೂ ಹೋಬೇಡಾ ಅಂದ್ರಂತೆ. 

ಚೇರ್ಮನ್ರು: ಅದ್ಕೆ ಅಂಬರೀಷಣ್ಣ  ಏನಂದ್ರಂತೆ
ಅಮಾಸೆ: ಏನಂತಾರೆ ಸಾ..ಆಯ್ತು ಬುಡ್ರಿ. ಮಿನಿಸ್ಟರ್‌ಗಿರಿ ಯಿಂದ ಹೇಳೆª ಕೇಳೆª ತೆಗೆದ್‌ಬಿಟ್ರಿ.  ಈಗ್‌  ಮನೆಗಂಟಾ ಬಂದೀದಿರಿ, ಒಂದ್‌ ಪೆಗ್‌ ಹಾಕಿ ಹೋಗಿ ಅಂದ್ರಂತೆ. ಅದ್ಕೆ ಸಿದ್ರಾಮಣ್ಣೋರು, ಇಲ್ಲಾ ಅಂಬರೀಸ್‌ ನಾನು ತಕ್ಕೋಳ್ಳೋದು ಬಿಟ್‌ ಬಿಟ್ಟಿàವ್ನಿ . ಬೇಕಾದ್ರೆ ಜಾರ್ಜು, ಎಂ.ಬಿ.ಪಾಟೀಲÅನ್ನಾ ಕೇಳಿ ಅಂದ್ರಂತೆ. ಪಕ್‌ದಲ್ಲೇ ಇದ್ದ ಇಬ್ರೂ ತಲೆ ಅಲ್ಲಾಡಿÕದ್ರಂತೆ.  ಆಮ್ಯಾಕೆ, ಆಯ್ತು ಬಿಡಿ ನೀವ್ಯಾರೂ ಚಾರ್ಚ್‌ ಆಗಲ್ಲ ಅಂತ ಅಂಬರೀಷನ್ನೋರೇ ಅವ್ರ ಬ್ರ್ಯಾಂಡ್‌ ತಕ್ಕೊಂಡು ಸಿಎಂ ಹೆಗ್ಲ ಮ್ಯಾಲೆ ಕೈ ಹಾಕಿ ಬುಲ್‌ ಬುಲ್‌ ನಾ ಹೋಗೋಕಿಲ್ಲ ಅಂತ ಪ್ರಾಮಿಸ್ಸು ಮಾಡಿದ್ರಂತೆ.

ಚೇರ್ಮನ್ರು: ಅದ್ಸರಿ ಕಣ. ಸಿದ್ದರಾಮಣ್ಣೋರು ಹೋಗಿ ಬಂದ್‌ಮ್ಯಾಲೆ ಪರಮೇಶ್ವರಣ್ಣೋರು ಯಾಕ್‌ ಹೋದ್ರು.
ಅಮಾಸೆ: ಸಾ, ಅಷ್ಟು ಗೊತ್ತಾಗಾಕಿಲ್ವಾ. ಸಿದ್ದರಾಮಣ್ಣೋರು ಸಿಎಂ. ಪರಮೇಶ್ವರಣ್ಣೋರು ಕೆಪಿಸಿಸಿ ಪ್ರಸಿಡೆಂಟು. ಹೈಕಮಾಂಡ್‌ನ್ಯಾಗೆ ಅಂಬರೀಷ್‌ ಹೊಂಟೋಯ್ತಿದ್ರು ನಾ ಹೋಗಿ ಕಾಂಗ್ರೆಸ್‌ನ್ಯಾಗೆ ಉಳ್‌ಸೆª ಅಂತ ಸಿದ್ದರಾಮಣ್ಣೋರು ಹೋಗಿ ಬಿಲ್ಡಪ್‌ ಕೊಟ್ರೆ ಹೆಂಗೆ ಅಂತ ಟೆನ್ಸನ್‌ ಮಾಡಿಕೊಂಡ ಪರಮೇಶ್ವರಣ್ಣೋರು ನಂದೂ ಒಂದು  ಇರ್ಲಿ ಗೋವಿಂದಾ ಅಂತ, ಅಂಬರೀಷಣ್ಣೋರ ಮನ್ಯಾಗ್‌ ಹೋಗಿ ನೀ ಎಲ್ಲೂ ಹೋಗ್‌ಬ್ಯಾಡಾ ಕಾಂಗ್ರೆಸ್‌ನ್ಯಾಗೆ ಇರಣ್ಣಾ ಅಂತ ಹೇಳಿದ್ರಂತೆ. ಅದ್ಕೆ ಅಂಬರೀಷಣ್ಣೋರು, ಕಮಲ ಪಕ್ಸದೋರು, ಗೌಡ್ರ ಪಕ್ಸದೋರು ಬಾ…ಬಾ…ಅಂತಾವೆÅ. ಆದ್ರೂ ನೀವು- ಸಿಎಂ ಮನೆಗಂಟಾ ಬಂದು ಹೇಳಿದ್ರಿ ಅಂತ ನಾನೂ ಎಲ್ಲೂ ಹೋಗಲ್ಲ, ಅಂತ ಬಾಸೆ ಕೊಟ್ರಂತೆ. ಆಗ, ಏನಾರಾ ತಕೋತೀರಾ ಅಂತ ಪರಮೇಶ್ವರಣ್ಣೋರೂ° ಅಂಬರೀಷಣ್ಣಾ ಕೇಳಿದ್ರಂತೆ, 
ಛೇ ಛೇ ನಂಗೆ ಅಭ್ಯಾಸ ಇಲ್ಲ ಅಂತ ಪರಮೇಶ್ವರಣ್ಣೋರು ವಾಪಸ್‌ ಬಂದ್ರಂತೆ.

ಅಯ್ಯೋ, ನಾನ್‌ ಮರ್ತೇ ಹೋದೆ ಸಾ…ಬರ ಪ್ರವಾಸ್ಕೆ ಬಂದಿರೋ ಯಡ್ನೂರಪ್ಪ- ಈಶ್ವರಪ್ನೊàರ್ನ ನೋಡ್ಕಂಡು ಹಟ್ಟಿಗೆ ಬೋಟಿ   ತಕ್ಕೊಂಡ್‌ ಹೋಗ್ಬೇಕು. ಮನೆಯವ್ಳು ರಾತ್ರಿನೇ ದೋಸೆಗೆ ರುಬ್ಬಿಟ್ಟವೆÉ. ದೋಸೆ ಜತೆY ಬೋಟಿಧಿ ಗೊಜ್ಜು ಮಾಡಿ ತಿನ್‌ಬೇಕಂತೆ ಬತ್ತೀನಿ ಸಾ….

– ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next