ಸಿದ್ದಾಪುರ: ಯಡಮೊಗೆ ಗ್ರಾಮದ ಉಪ್ಪಿನಮಕ್ಕಿ ಎಂಬಲ್ಲಿ ಅವಿನಾ ಎಂಬುವವರ ಅಡಿಕೆ ತೋಟದಲ್ಲಿ ಅಡಿಕೆ ಕೊಯ್ಯುತ್ತಿರುವಾಗ ಉಪ್ಪಿನಮಕ್ಕಿ ರವೀಂದ್ರ(32) ಅವರು ಮಾ.31ರಂದು ಆಕಸ್ಮಿಕವಾಗಿ ಆಯಾತಪ್ಪಿ ಮರದಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.
Advertisement
ರವೀಂದ್ರ ಅವರನ್ನು ಕೂಡಲೆ ಕೋಟೇಶ್ವರದ ಖಾಸಗಿ ಆಸ್ಪತ್ರಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುದ್ದಾಗಿ ಸಹೋದರ ಸುರೇಂದ್ರ ನಾಯ್ಕ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.