ಶಿವಮೊಗ್ಗ: ತಾಯಿಯ ಅಂತ್ಯ ಸಂಸ್ಕಾರಕ್ಕೆ ಜಮೀನಿನಲ್ಲಿ ಅವಕಾಶ ನೀಡಬೇಕು ಎಂದು ತಂದೆಯ ಮನೆ ಎದುರು ಮಗ ಪ್ರತಿಭಟನೆ ನಡೆಸುತ್ತಿದ್ದ ಪ್ರಕರಣ ಇದೀಗ ಸುಖಾಂತ್ಯಗೊಂಡಿದೆ.
ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಹೆದ್ದಾರಿಪುರ ಗ್ರಾ ಪಂ ವ್ಯಾಪ್ತಿಯ ಯಡಗುಡ್ಡೆ ಗ್ರಾಮದ ನಾಗರಾಜ್ ಎಂಬವರ ಮೊದಲ ಪತ್ನಿ ನಾಗರತ್ನ (50) ಶುಕ್ರವಾರ ಕ್ಯಾನ್ಸರ್ ನಿಂದಾಗಿ ಮೃತಪಟ್ಟಿದ್ದರು. ಆದರೆ ಪತ್ನಿಯ ಅಂತ್ಯಸಂಸ್ಕಾರಕ್ಕೆ ಜಾಗ ಕೊಡುವುದಿಲ್ಲ ಎಂದು ನಾಗರಾಜ್ ಮನೆಬಾಗಿಲು ಹಾಕಿಕೊಂಡು ರಾತ್ರಿಯಿಡಿ ಮನೆಯೊಳಗೆ ಕುಳಿತಿದ್ದರು.
ಆದರೆ ಇಂದು ಬೆಳಗ್ಗೆ ಊರಿನ ಪ್ರಮುಖರು ರಾಜಿ ಪಂಚಾಯಿತಿ ನಡೆಸಿ ನಾಗರಾಜ್ ಗೆ ಬುದ್ದಿ ಹೇಳಿದ ಬಳಿಕ ತನ್ನ ಜಮೀನನಲ್ಲೇ ತನ್ನ ಮೊದಲ ಪತ್ನಿ ನಾಗರತ್ನ ಅಂತ್ಯ ಸಂಸ್ಕಾರಕ್ಕೆ ನಾಗರಾಜ್ ಒಪ್ಪಿಗೆ ಸೂಚಿಸಿದ್ದಾರೆ.
ಇದರಂತೆ ಇಂದು ಮಧ್ಯಾಹ್ನ ನಾಗರಾಜ್ ಜಮೀನಿನಲ್ಲಿಯೇ ನಡೆದ ನಾಗರತ್ನ ಅಂತ್ಯ ಸಂಸ್ಕಾರ ನಡೆದಿದೆ.
ನಾಗರಾಜ್ ಹಾಗೂ ನಾಗರತ್ನಗೆ 30 ವರ್ಷದ ಹಿಂದೆ ವಿವಾಹವಾಗಿತ್ತು. ಆದರೆ 10 ವರ್ಷ ಹಿಂದೆ ನಾಗರತ್ನ ಪತಿಯನ್ನು ತೊರೆದು ತವರು ಸೇರಿದ್ದಳು. ಕಳೆದ ಕೆಲ ವರ್ಷದಿಂದ ಕ್ಯಾನ್ಸರ್ ಗೆ ತುತ್ತಾಗಿದ್ದ ನಾಗರತ್ನ ನಿನ್ನೆ ಮೃತಪಟ್ಟಿದ್ದರು.
ಸಂಪೂರ್ಣ ವಿವರ:ತಾಯಿಯ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡದ ತಂದೆ: ರಾತ್ರಿಯಿಡಿ ಮನೆಯ ಮುಂದೆ ಶವವಿಟ್ಟು ಕಾದ ಮಗ