Advertisement

ಸಂವಿಧಾನ ಬದ್ಧ ಮೀಸಲಾತಿ ಜಾರಿಗೆ ಒತ್ತಾಯ

04:34 PM Jun 19, 2019 | Team Udayavani |

ಯಾದಗಿರಿ: ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ ಶೇ. 7.5 ಮೀಸಲಾತಿ ನೀಡುವ ಬೇಡಿಕೆಗೆ ಸರ್ಕಾರದ ಸ್ಪಂದಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಹೈಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಅಧ್ಯಕ್ಷ ನಂದಕುಮಾರ ಪಾಟೀಲ ತಿಳಿಸಿದರು.

Advertisement

ನಗರದ ವಾಲ್ಮೀಕಿ ಭವನದನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ಗುರು ಪೀಠದ ಜಗದ್ಗುರು ಪ್ರಸನ್ನಾನಂದ ಶ್ರೀಗಳು ಕಳೆದ 10 ದಿನಗಳಿಂದ ರಾಜನಹಳ್ಳಿಯಿಂದ ವಿಧಾನಸೌಧವರೆಗೆ ಹಮ್ಮಿಕೊಂಡ ಪಾದಯಾತ್ರೆ ನಡೆಸುತ್ತಿದ್ದರೂ ಸರ್ಕಾರದಿಂದ ಪ್ರತಿಕ್ರಿಯಿ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈಗಾಗಲೇ ಸಮುದಾಯಕ್ಕೆ ವಿವಿಧ ರಂಗಗಳಲ್ಲಿ ಶೇ. 7.5 ರಷ್ಟು ಮೀಸಲಾತಿ ಒದಗಿಸಲಾಗಿದೆ, ಆದರೇ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮಾತ್ರ ಮೀಸಲಾತಿ ಒದಗಿಸದೇ ದುರ್ಬಲಗೊಳಿಸುವ ಹುನ್ನಾರ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೂಜ್ಯ ವಾಲ್ಮೀಕಿ ಆಶ್ರಮದ ವರದಾನೇಶ್ವರ ಶ್ರೀಗಳು ಮಾತನಾಡಿ, ಸರ್ಕಾರ ಸಮಾಜದ ಮೇಲೆ ಕಾಳಜಿ ಇದ್ದರೆ ಸಂವಿಧಾನ ಬದ್ಧವಾದ ಮೀಸಲಾತಿಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ವಾಲ್ಮೀಕಿ ಸಮಾಜ ಜಿಲ್ಲಾಧ್ಯಕ್ಷ ಮರೆಪ್ಪ ನಾಯಕ ಮಗದಂಪೂರ ಮಾತನಾಡಿ, ಸರ್ಕಾರ ಜೂನ್‌ 21ರೊಳಗೆ ಸ್ಪಂದಿಸದಿದ್ದಲ್ಲಿ ಚಂಡರಕಿ ಗ್ರಾಮಕ್ಕೆ ಮುಖ್ಯಮಂತ್ರಿ ಬರುವ ವೇಳೆ ವಿರೋಧ ವ್ಯಕ್ತಪಡಿಸಲಾಗುವುದು ಎಂದರು. ಜೂ. 25ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಈಗಾಗಲೇ ನಿರ್ಣಯಿಸಲಾಗಿದೆ ಎಂದರು.

Advertisement

ಈ ವೇಳೆ ಗೌಡಪ್ಪಗೌಳ ಆಲ್ದಾಳ, ಭೀಮರಾಯ ಠಾಣಗುಂದಿ, ಶರಣಪ್ಪ ಜಾಕನಳ್ಳಿ, ಚಂದ್ರಕಾಂತ ಹತ್ತಿಕುಣಿ, ಮೋನಪ್ಪ ನಾಯಕ ಹಳಿಗೇರಾ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next