Advertisement

ಎರ‌ಡು ಬಾರಿ ಸರ್ವೇ: ರೈತ ತಬ್ಬಿಬ್ಬು

01:36 PM May 19, 2019 | Naveen |

ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲೂಕಿನ ಧರಂಪುರ ಗ್ರಾಮದ ಹೊಲದ ಸರ್ವೇ ಮಾಡಲು ನಿಯುಕ್ತಿಗೊಂಡ ಅಧಿಕಾರಿ ಬದಲಿಗೆ ಬೇರೊಬ್ಬ ಅಧಿಕಾರಿ ಸರ್ವೇ ಮಾಡಿ 12 ಸಾವಿರ ರೂ. ರೈತರಿಂದ ವಸೂಲಿ ಮಾಡಿಕೊಂಡು ಹೋಗಿದ್ದ ಕುರಿತು ಜಿಲ್ಲಾಡಳಿತಕ್ಕೆ ಗ್ರಾಮಸ್ಥರು ದೂರು ಸಲ್ಲಿಸಿದ ಮರುದಿನವೇ ಮತ್ತೂಮ್ಮೆ ಸರ್ವೇ ನಡೆದಿದೆ.

Advertisement

ಗ್ರಾಮದ ರೈತರು ಜಮೀನು ಅಳೆಯಲು ಈ ಹಿಂದೆಯೇ ಶುಲ್ಕವನ್ನು ಕಟ್ಟಿದ್ದರು. ಅಳತೆ ಮಾಡಬೇಕಿದ್ದ ಸಿಬ್ಬಂದಿ ಬದಲಿಗೆ ಬೇರೊಬ್ಬರು ಅಳೆದು ರೈತರಿಂದ ಹಣ ಪಡೆದಿರುವ ಕುರಿತು ಗ್ರಾಮಸ್ಥರು ಅಪರ ಜಿಲ್ಲಾಧಿಕಾರಿಗಳಿಗೆ ಶುಕ್ರವಾರ ದೂರು ನೀಡಿದ್ದರು.

ದೂರು ನೀಡಿದ ಮರುದಿನವೇ ಮತ್ತಿಬ್ಬರು ಸಿಬ್ಬಂದಿ ಬೆಳಗ್ಗೆ ಗ್ರಾಮಕ್ಕೆ ಭೇಟಿ ನೀಡಿ ಹೊಲ ಅಳೆದುಕೊಡುತ್ತೇವೆ ಎಂದು ಬಂದಿದ್ದು ರೈತ ಸಣ್ಣ ಹಣಮಂತ ಮತ್ತು ಶಂಕ್ರಪ್ಪರನ್ನು ತಬ್ಬಿಬ್ಟಾಗುವಂತೆ ಮಾಡಿತು. ಬಳಿಕ ಅಧಿಕಾರಿಗಳು ಸಮಜಾಯಿಸಿ ನೀಡಿ ಹೊಲವನ್ನು ಅಳೆದರು ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ಅಮಾಯಕರನ್ನು ಯಾಮಾರಿಸಬೇಡಿ
ಅಮಾಯಕ ರೈತರನ್ನು ಸರ್ವೇ ಸಿಬ್ಬಂದಿ ಯಾಮಾರಿಸುತ್ತಿದ್ದು, ಹೆಚ್ಚಿನ ಹಣ ನೀಡದವರಿಗೆ ಸುಖಾ ಸುಮ್ಮನೆ ಟಿಪ್ಪಣಿ ಇಲ್ಲ, ಅಕಾರಬಂದ್‌ ಇಲ್ಲ ಎಂದು ಹೇಳಿ ಕಾಲಹರಣ ಮಾಡುತ್ತಿದ್ದಾರೆ. ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಬಂದು ಸರ್ವೇ ಮಾಡಬೇಕು. ಆದರೆ ಹಣಕ್ಕಾಗಿ ಇಲ್ಲದ ನೆಪ ಹೇಳಿ ಮೂರು ವರ್ಷಗಳಿಂದ ಸರ್ವೆ ಮಾಡದೇ ಸತಾಯಿಸುತ್ತಿದ್ದಾರೆ. ಅದೇ ಹಣ ಕೊಟ್ವರೆ ವಾರದೊಳಗೆಯೇ ಕೆಲಸವಾಗುತ್ತದೆ. ಹಣ ಕೊಡದಿದ್ದರೆ ವರ್ಷಗಟ್ಟಲೇ ಸತಾಯಿಸುತ್ತಾರೆ. ಇದು ನಿಲ್ಲಬೇಕು. ರೈತರಿಗೆ ಕಿರುಕುಳ ನೀಡಿದಲ್ಲಿ ಮುಂದೆ ಹಂತ ಹಂತವಾಗಿ ಹೋರಾಟ ರೂಪಿಸಲಾಗುವುದು.
ಟೋಕ್ರೆ ಕೋಲಿ,
ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ
Advertisement

Udayavani is now on Telegram. Click here to join our channel and stay updated with the latest news.

Next