Advertisement

ದೇಶದ ಪ್ರಗತಿಯಲ್ಲಿ ಆರ್ಥಿಕ ಗಣತಿ ಪಾತ್ರ ಮುಖ್ಯ

11:04 AM Jun 19, 2019 | Team Udayavani |

ಯಾದಗಿರಿ: ಆರ್ಥಿಕ ಚಟುವಟಿಕೆಗಳಲ್ಲಿ ಆರ್ಥಿಕ ಗಣತಿಯು ದೇಶದ ಪ್ರಗತಿಯಲ್ಲಿ, ರಾಷ್ಟ್ರೀಯ ತಲಾದಾಯ ಮತ್ತು ಜಿಡಿಪಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ ಹೇಳಿದರು.

Advertisement

ನಗರದ ಎನ್‌.ವಿ.ಎಮ್‌ ಹೋಟೆಲ್ ಸಭಾಂಗಣದಲ್ಲಿ ಇತ್ತೀಚೆಗೆ ಸಾಮಾನ್ಯ ಗ್ರಾಹಕರ ಸೇವಾ ಕೇಂದ್ರ ಜಿಲ್ಲಾ ವ್ಯವಸ್ಥಾಪಕರು ಹಾಗೂ ಗ್ರಾಮ ಮಟ್ಟದ ಮೇಲ್ವಿಚಾರಣಾಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 7ನೇ ಆರ್ಥಿಕ ಗಣತಿಯು ಜೂನ್‌ 15ರಿಂದ ಸೆಪ್ಟೆಂಬರ್‌ 15ರ ವರೆಗೆ 3 ತಿಂಗಳ ಕಾಲ ನಡೆಯಲಿದೆ. ಕಾಮನ್‌ ಸರ್ವೀಸ್‌ ಸೆಂಟರ್‌ನವರು ಮೊದಲನೆಯ ಹಂತದ ಗಣತಿ ಮಾಡುವರು. ಎರಡನೆಯ ಹಂತದ ಮೇಲ್ವಿಚಾರಣೆಯನ್ನು ಕೈಗಾರಿಕಾ ಇಲಾಖೆ, ಸಾಂಖ್ಯೀಕ ಇಲಾಖೆ ಹಾಗೂ ಎನ್‌.ಎಸ್‌.ಎಸ್‌.ಓ ಅಧಿಕಾರಿಗಳು ಮಾಡುವರು. ವಿವಿಧ ಇಲಾಖೆ ಅಧಿಕಾರಿಗಳು ಆರ್ಥಿಕ ಗಣತಿಗೆ ಸಹಕಾರ ನೀಡಬೇಕು ಎಂದು ಸೂಚಿಸಿದರು.

ಜಿಲ್ಲಾ ಸಾಂಖ್ಯೀಕ ಇಲಾಖೆ ಅಧಿಕಾರಿ ಸುನೀಲ ಬಿಸ್ವಾಸ್‌ ಮಾತನಾಡಿ, ಕೇಂದ್ರ ಸರಕಾರದ ರಾಷ್ಟ್ರೀಯ ಮಾದರಿ ಸಮೀಕ್ಷೆಯ ಕಾರ್ಯಾಲಯದಿಂದ ಆರ್ಥಿಕ ಗಣತಿಯನ್ನು ಮೊದಲ ಬಾರಿಗೆ ಕಾಮನ್‌ ಸರ್ವೀಸ್‌ ಸೆಂಟರ್‌ನವರಿಗೆ ವಹಿಸಲಾಗಿದೆ. ಈ ಗಣತಿಯ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳಲು ಕಾರ್ಯಾಗಾರದಲ್ಲಿ ನೀಡಿದ ಪುಸ್ತಕವನ್ನು ಸರಿಯಾಗಿ ಓದಬೇಕು. ಏಕೆಂದರೆ ಈ ಗಣತಿಯಲ್ಲಿ ಸಂಬಂಧಪಟ್ಟ ಗಣತಿದಾರರು ಮೇಲೆ ನೀವು ಮೇಲ್ವಿಚಾರಣೆ ಮಾಡಿ ಪ್ರತಿದಿನ ಗಣತಿ ಕಾರ್ಯ ಮುಗಿದ ನಂತರ ಸಾಯಂಕಾಲ ಮಾಹಿತಿಗಳು ಪರಿಶೀಲನೆ ಮಾಡಬೇಕು. ಮುಂದಿನ ದಿನ ಯಾವ ಗ್ರಾಮಕ್ಕೆ ಹೋಗಬೇಕೆಂಬುದರ ಕುರಿತು ಪ್ರವಾಸ ಕಾರ್ಯವನ್ನು ನಿಗದಿಪಡಿಸಬೇಕು ಎಂದು ಹೇಳಿದರು.

ಈ ಗಣತಿಯ ಕಾರ್ಯದಲ್ಲಿ ಗಣತಿದಾರರ ಉದ್ಯಮಿಗಳ ಬಗ್ಗೆ ಮತ್ತು ನೋಂದಣಿ ಸಂಖ್ಯೆ ಬಗ್ಗೆ ಸಂಬಂಧಪಟ್ಟ ಉದ್ಯಮಿದಾರರಿಂದ ಮಾಹಿತಿ ಸಂಗ್ರಹಣೆ ಸಮಯದಲ್ಲಿ ಸಂಶಯ ಇರಬಹುದು. ಆದ್ದರಿಂದ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸರಕಾರದಿಂದ ಸಮನ್ವಯ ಸಮಿತಿಯ ರಚನೆಯಾಗಿದೆ. ಸದರಿ ಸಮಿತಿಯ ಸಭೆ ಶೀಘ್ರದಲ್ಲಿ ಕರೆಯಲಾಗುವುದು. ಸದರಿ ಸಭೆಯಲ್ಲಿ ಸಂಬಂಧಪಟ್ಟ ಜಿಲ್ಲೆಯ ಎಲ್ಲಾ ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು, ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕರು, ಕಾರ್ಮಿಕ ಇಲಾಖೆ ಉಪ ನಿರ್ದೇಶಕರು, ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಸಹಕಾರ ಸಂಘ ಮತ್ತು ಪೊಲೀಸ್‌ ಅಧೀಕ್ಷಕರು ಇವರಿಂದ ನಿಮಗೆ ಸಹಕರಿಸಲು ಮಾನ್ಯ ಜಿಲ್ಲಾಧಿಕಾರಿಗಳಿಂದ ನಿರ್ದೇಶನ ಜಾರಿ ಮಾಡಲಾಗುವುದು. ಪ್ರಯುಕ್ತ ಪ್ರತಿಯೊಂದು ಮನೆ, ಕೈಗಾರಿಕೆಗೆೆ ಭೇಟಿ ನೀಡಿ ಮೊಬೈಲ್ ಆ್ಯಪ್‌ ಮೂಲಕ ಮಾಹಿತಿಯನ್ನು ಸಂಗ್ರಹಿಸಲು ಗಣತಿದಾರರಿಗೆ ಶೀಘ್ರದಲ್ಲಿ ತರಬೇತಿಯನ್ನು ನೀಡಲು ಕಾಮನ್‌ ಸರ್ವೀಸ್‌ ಸೆಂಟರ್‌ ವ್ಯವಸ್ಥಾಪಕರಿಗೆ ತಿಳಿಸಿದರು.

Advertisement

ಜಿಲ್ಲಾ ಸಾಂಖ್ಯೀಕ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ಅ. ನಾಗೂರು ಮಾತನಾಡಿ, ಈ ಆರ್ಥಿಕ ಗಣತಿಯು ದೇಶದ ಭೌಗೋಳಿಕ ಗಡಿಯೊಳಗೆ ನೆಲೆಗೊಂಡು ಸ್ವಂತ ಉಪಯೋಗಕಲ್ಲದ ವಸ್ತುಗಳ ಉತ್ಪಾದನೆ ವಿತರಣೆ ಮಾಡಲು ಅಥವಾ ಸೇವೆ ಇತ್ಯಾದಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿರುವ ಉದ್ಯಮಗಳ ಘಟಕಗಳ ಪೂರ್ಣ ಎಣಿಕೆಯಾಗಿರುತ್ತದೆ. ಈ ಗಣತಿಯಲ್ಲಿ ಸಂಘಟಿತ ಮತ್ತು ಅಸಂಘಟಿತ ವಲಯಗಳ ಎಲ್ಲಾ ಉದ್ಯಮಗಳ ಗಣತಿಯನ್ನು ಮಾಡಲಾಗುತ್ತದೆ ಎಂದು ಹೇಳಿದರು.

ಎನ್‌.ಎಸ್‌.ಎಸ್‌.ಒ ಅಧಿಕಾರಿ ಮಹಾದೇವಪ್ಪ ಗಣತಿಯ ಪ್ರಾಮುಖ್ಯತೆ ಕುರಿತು ಮಾಹಿತಿ ನೀಡಿದರು. ಕಾಮನ್‌ ಸರ್ವೀಸ್‌ ಸೆಂಟರ್‌ ಜಿಲ್ಲಾ ವ್ಯವಸ್ಥಾಪಕ ವೈಜನಾಥ ರೆಡ್ಡಿ ಪಾಟೀಲ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next