Advertisement
ಪ್ರತಿಬಾರಿಯೂ ಜಿಲ್ಲೆಯ ಹತ್ತನೇ ತರಗತಿ ಫಲಿತಾಂಶ ಸುಧಾರಣೆಯೇ ಶಿಕ್ಷಣ ಇಲಾಖೆಗೆ ತಲೆ ನೋವಾಗಿದ್ದು, ಫಲಿತಾಂಶ ಚೇತರಿಕೆ ದೊಡ್ಡ ಸವಾಲಾಗಿ ಕಾಡುತ್ತಿದೆ. ಫಲಿತಾಂಶದಲ್ಲಿ ಹೆಚ್ಚಿನ ಸಾಧನೆ ಮಾಡುವುದಕ್ಕೆ ಶಿಕ್ಷಣ ಇಲಾಖೆ ಪ್ರಸಕ್ತ ವರ್ಷವೂ ಹಲವು ಆಯಾಮಗಳಲ್ಲಿ ಸಜ್ಜಾಗಿದೆ. ಪ್ರಮುಖವಾಗಿ ಜಿಲ್ಲೆಯ 227 ಪ್ರೌಢಶಾಲೆಗಳ ಮಕ್ಕಳನ್ನು ಮೂರು ವಿಧಗಳಲ್ಲಿ ವಿಂಗಡಿಸಿ ತೀರಾ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ 83 ತೀವ್ರ ನಿಗಾ ಕಲಿಕಾ ಕೇಂದ್ರ ಸ್ಥಾಪಿಸಲಾಗಿದ್ದು, ಇದರಲ್ಲಿ ಕಲಿಕೆಯಲ್ಲಿ ಹಿಂದುಳಿದ 2600ರಷ್ಟು ಮಕ್ಕಳನ್ನು ಗುರುತಿಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಸೇರಿದಂತೆ ಇತರೆ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಲಾಗುತ್ತಿದೆ. ಪ್ರೌಢಶಾಲೆಗಳಲ್ಲಿ ಬೆಳಗ್ಗೆ ಒಂದು ಗಂಟೆ ಹೆಚ್ಚುವರಿ ಬೋಧನೆ ಹಾಗೂ ಸಂಜೆ ಒಂದು ಗಂಟೆ ಗುಂಪು ಚರ್ಚೆ, ಗಣಿತ, ವಿಜ್ಞಾನ, ಇಂಗ್ಲಿಷ್ ಹಾಗೂ ಸಮಾಜಶಾಸ್ತ್ರ ವಿಷಯಗಳ ಕುರಿತು ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ವಿಶೇಷ ಉಪನ್ಯಾಸ ಕೊಡಿಸಲಾಗುತ್ತಿದೆ. ತಿಂಗಳಿಗೊಮ್ಮೆ ಕಿರು ಪರೀಕ್ಷೆ, ವಿಷಯ ಮನದಟ್ಟಾಗುವಂತೆ ಮರಳಿ ಮರಳಿ ಕಲಿಸುವುದು ಅಲ್ಲದೇ ಬೀದರನ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದಿಂದ 43 ಸ್ಥಳಗಳಲ್ಲಿ ಪರೀಕ್ಷಾಪೂರ್ವ ಸಿದ್ಧತೆ ಮತ್ತು ಭಯ ಹೋಗಲಾಡಿಸಲು ಪ್ರೇರಣಾ ಕಮ್ಮಟ ಶಿಬಿರ, ನಿವೃತ್ತ ನ್ಯಾ| ಶಿವರಾಜ ಪಾಟೀಲ ಸಹಯೋಗದಲ್ಲಿ ಹೋಬಳಿ ಮಟ್ಟದಲ್ಲಿ ನುರಿತ ತಜ್ಞರಿಂದ ಮಕ್ಕಳ ಮನೋಬಲ ಹೆಚ್ಚಿಸಲು ಉಪನ್ಯಾಸ, ಕೊನೆ ಹಂತದ ವಿದ್ಯಾರ್ಥಿಗಳನ್ನು ಶಿಕ್ಷಕರು ದತ್ತು ಪಡೆದು ಪುನರಾವರ್ತನೆ ಮಾಡಿಸುವುದು, ತಿಂಗಳಿಗೊಮ್ಮೆ ಮಕ್ಕಳ ಫಲಿತಾಂಶದ ಕುರಿತು ಶಿಕ್ಷಕರ ಕಾರ್ಯಾಗಾರ, ಹಾಜರಾತಿ ಕಡಿಮೆಯಾಗದಂತೆ ಮಕ್ಕಳ ಮನೆಗೆ ಭೇಟಿ ನೀಡಿ ಪಾಲಕರಲ್ಲಿ ಜಾಗೃತಿ ಹೀಗೆ ಹಲವು ಪ್ರಯೋಗಗಳ ಮೂಲಕ ಶಿಕ್ಷಣ ಮಟ್ಟ ಸುಧಾರಣೆಗೆ ಹಲವಾರು ಕ್ರಮ ವಹಿಸಲಾಗುತ್ತಿದೆ ಎನ್ನುತ್ತಾರೆ ಜಿಲ್ಲಾ ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿ ಡಾ| ಮಲ್ಲಪ್ಪ ಯರಗೋಳ.
Related Articles
Advertisement
ಆವರ್ಷದಲ್ಲಿ ಶೇ.74.84ರಷ್ಟು ಫಲಿತಾಂಶ ಬಂದಿದ್ದರಿಂದ ಜಿಲ್ಲೆ 16ನೇ ಸ್ಥಾನಕ್ಕೆ ಂದಿತ್ತು. ಆದರೆ, 2017-18ರ ಶೈಕ್ಷಣಿಕ ವರ್ಷದಲ್ಲಿ ಪರೀಕ್ಷೆಗೆ 12776 ವಿದ್ಯಾರ್ಥಿಗಳು ಹಾಜರಾಗಿದ್ದರು. ಇವರಲ್ಲಿ ಕೇವಲ 4734 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರಿಂದ ಜಿಲ್ಲೆಯ ಫಲಿತಾಂಶ ಶೇ. 37.05ರಷ್ಟಾಗಿ 34ನೇ ಸ್ಥಾನಕ್ಕೆ ಕುಸಿದಿತ್ತು. ಪ್ರಸ್ತುತ 2019-20ರಲ್ಲಿ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಣ ಇಲಾಖೆ ಆದ್ಯತೆ ನೀಡಿದೆ. ಅದಕ್ಕೆ ತಕ್ಕಂತೆ ಶಿಕ್ಷಕರು ಶ್ರಮಪಡುತ್ತಿದ್ದಾರೆ.
ಎಸ್‌ಎಸ್‌ಎಲ್‌ಸಿ ಫಲಿತಾಂಶ ವೃದ್ಧಿಸುವ ದೃಷ್ಟಿಯಿಂದ ಸಾಕಷ್ಟುಕಾರ್ಯ ಯೋಜನೆ ಹಾಕಿಕೊಳ್ಳಲಾಗಿದೆ. 10ನೇ ತರಗತಿ ಮಕ್ಕಳನ್ನು 3 ಹಂತಗಳಲ್ಲಿ ವಿಂಗಡಿಸಲಾಗಿದೆ. ಕೊನೆ ಹಂತದ ಮಕ್ಕಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ನಿತ್ಯ ವಿಶೇಷ ತರಗತಿ, ಸಂಜೆ ಗುಂಪು ಚರ್ಚೆ ಸೇರಿದಂತೆ ಹಲವು ಕ್ರಮ ಕೈಗೊಂಡು ಶ್ರಮಿಸಲಾಗುತ್ತಿದೆ. ಈ ಬಾರಿ ಕನಿಷ್ಠ 20ರಿಂದ 25ರಷ್ಟು ಫಲಿತಾಂಶ ಚೇತರಿಕೆಯಾಗುವ ಗುರಿಯಿಟ್ಟುಕೊಂಡು ಶ್ರಮಿಸಲಾಗುತ್ತಿದೆ. ಸಕ್ರೆಪ್ಪಗೌಡ,
ಸಾರ್ವಜನಿಕ ಶಿಕ್ಷಣ
ಇಲಾಖೆ ಉಪನಿರ್ದೇಶಕರು ಅನೀಲ ಬಸೂದೆ