Advertisement
ಜಿಲ್ಲೆಯಲ್ಲಿ ಅಗತ್ಯ ವಸ್ತುಗಳು ಸೇರಿದಂತೆ ದಿನಸಿ ವ್ಯಾಪಾರ, ತರಕಾರಿ, ಕೃಷಿ ಚಟುವಟಿಕೆಗಳ ಸಾಮಗ್ರಿ, ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಉಪಕರಣಗಳ ಮಳಿಗೆ ಆರಂಭವಾಗಿರುವುದರಿಂದ ರಸ್ತೆಯಲ್ಲಿ ಜನರ ಓಡಾಟ ಕಂಡು ಬರುತ್ತಿದೆ. ಇದೀಗ ಕೈಗಾರಿಕೆ ವಲಯಕ್ಕೂ ಶೇ.50ರಷ್ಟು ಸಿಬ್ಬಂದಿ ಬಳಸಿಕೊಂಡು ಕಾರ್ಯನಿರ್ವಹಿಸುವ ಅವಕಾಶ ಸಿಕ್ಕಿದ್ದು, ಜಿಲ್ಲೆಯ ರೈಸ್‌ಮಿಲ್, ದಾಲ್‌ಮಿಲ್, ಕಾಟನ್‌ಮಿಲ್‌ಗಳು ಆರಂಭ ವಾಗಲಿವೆ. ಬೇಸಿಗೆ ದಿನವಾಗಿದ್ದರಿಂದ ಮನೆ ನಿರ್ಮಾಣದ ಕಾಮಗಾರಿಗಳು ಎಲ್ಲೆಡೆ ಸಾಗಿದ್ದು, ಜನರು ಕಬ್ಬಿಣದ ವಸ್ತುಗಳು ಸೇರಿದಂತೆ ಇತರೆ ಉಪಕರಣ ಖರೀದಿಸಲು ಹಾರ್ಡ್‌ವೇರ್ ಅಂಗಡಿಗಳ ಎದುರು ಜಮಾವಣೆಗೊಳ್ಳುತ್ತಿದ್ದು, ಸಾಮಾಜಿಕ ಅಂತರ ಗಾಳಿಗೆ ತೂರಲಾಗುತ್ತಿದೆ.
Advertisement
ಸಾಮಾಜಿಕ ಅಂತರ ಕಾಪಾಡದೆ ಎಡವಟ್ಟು
01:56 PM Apr 30, 2020 | Naveen |
Advertisement
Udayavani is now on Telegram. Click here to join our channel and stay updated with the latest news.