Advertisement

ಅನುಮತಿ ಇಲ್ಲದೆ ರಸ್ತೆ, ಚರಂಡಿ ನಿರ್ಮಾಣ

04:03 PM May 03, 2019 | Team Udayavani |

ಯಾದಗಿರಿ: ಖಾಸಗಿ ವ್ಯಕ್ತಿಗೆ ಸಂಬಂಧಿಸಿದ ಹೊಲದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಿರುವ ಲೋಕೋಪಯೋಗಿ ಇಲಾಖೆ ಜೆಇ ಗುರುನಾಥ ಮತ್ತು ಎಇಇ ನಾಗಪ್ಪ ಎನ್ನುವ ಅಧಿಕಾರಿಗಳ ವಿರುದ್ಧ ಭೂಮಾಲಿಕ ಉಮೇಶ ಕೆ. ಮುದ್ನಾಳ ಯಾದಗಿರಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

ಯಾದಗಿರಿ ತಾಲೂಕಿನ ಮುದ್ನಾಳ ಗ್ರಾಮದ ಹೊರವಲಯದಲ್ಲಿ ಕಳೆದ ಫೆಬ್ರವರಿಯಲ್ಲಿ ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಅನುಮತಿಯಿಲ್ಲದೇ ಹೊಲದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಿದ್ದಾರೆಂದು ಎಂದು ದೂರಿದ್ದಾರೆ.

ತಮ್ಮ ಹೊಲದ ಸರ್ವೇ ನಂ: 249/1ರಲ್ಲಿ ಅಧಿಕಾರಿಗಳು ಹೊಲದ ಜಾಗೆಯನ್ನು ಅತಿಕ್ರಮಿಸಿ ರಸ್ತೆ ಮತ್ತು ಚರಂಡಿ ನಿರ್ಮಿಸಲು ಮುಂದಾಗಿದ್ದರು, ಆಗ ಪೊಲೀಸರ ಬಳಿ ದೂರು ನೀಡಲಾಗಿತ್ತು, ಅಧಿಕಾರಿಗಳನ್ನು ಠಾಣೆಗೆ ಕರೆಯಿಸಿ ಕಾಮಗಾರಿಯನ್ನು ಮಾಡದಂತೆ ಹೇಳಲಾಗಿತ್ತು. ಆದರೇ, ಊರಿನಲ್ಲಿ ಇರದ ಸಮಯ ನೋಡಿ ಕಾಮಗಾರಿ ನಿರ್ವಹಿಸಿದ್ದಾರೆ ಎನ್ನಲಾಗಿದೆ.

ಕಾಮಗಾರಿಯು ಹೈದ್ರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದ್ದು, ರಸ್ತೆಯನ್ನು ದಾಟಿ ತಮ್ಮ ಹೊಲದೊಳಗೆ ಅತಿಕ್ರಮಿಸಿರುವುದರಿಂದ ದೂರು ಸಲ್ಲಿಸಿದ್ದಾಗಿ ಉಮೇಶ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next