ಯಾದಗಿರಿ: ಜಿಲ್ಲೆಯಲ್ಲಿ ಪ್ರಸಕ್ತ ಪೂರ್ವ ಮುಂಗಾರಿನಲ್ಲಿಯೇ ಮಳೆ ಕೈಕೊಟ್ಟಿದ್ದರಿಂದ ಕಂಗಾಲಾಗಿದ್ದ ರೈತ ಸಮೂಹದಲ್ಲಿ ಕಳೆದೆರಡು ದಿನಗಳಿಂದ ಸುರಿದ ಮಳೆಯಿಂದ ಖುಷಿ ಮೂಡಿದೆ. ಸತತ ನೀರಿನ ಅಭಾವದಿಂದ ನೀರಾವರಿ ಪ್ರದೇಶದಲ್ಲಿಯೂ ರೈತರು ಬಿತ್ತನೆ ಮಾಡಿಲ್ಲ.
Advertisement
ಜಿಲ್ಲೆಯಲ್ಲಿ ಮಾರ್ಚ್‌ದಿಂದ ಮೇ ತಿಂಗಳ ಅಂತ್ಯದವರೆಗೆ ಮಳೆ ಸುರಿದಿದ್ದರೇ ರೈತರು ಬಿತ್ತನೆಗೆ ಭೂಮಿ ಸಿದ್ಧ ಮಾಡುತ್ತಿದ್ದರು, ಪೂರ್ವ ಮುಂಗಾರಿನಲ್ಲಿ 62 ಮಿ.ಮೀಟರ್ ವಾಡಿಕೆ ಮಳೆಯಾಗಬೇಕಿತ್ತು, ಆದರೆ ಕೇವಲ 34 ಮಿ.ಮೀಟರ್ ಮಳೆಯಾಗಿದೆ. ಈ ವೆರೆಗೆ ಜಿಲ್ಲೆಯ ವಾಡಿಕೆ ಮಳೆ 79 ಮಿ.ಮೀಟರ್‌ಗಳಲ್ಲಿ 51 ಮಿ.ಮೀಟರ್ ಸುರಿದಿದ್ದು, ಶೇ. 35ರಷ್ಟು ಮಳೆ ಕೊರತೆ ಎದುರಾಗಿದೆ.
Related Articles
Advertisement
ಎಲ್ಲೆಲ್ಲಿ ಎಷ್ಟು ಮಳೆ: ಜಿಲ್ಲೆಯ ಅವಿಭಜಿತ ತಾಲೂಕುಗಳಲ್ಲಿ ಮಳೆ ಪ್ರಮಾಣವನ್ನು ನೋಡುವುದಾದರೆ, ಶಹಾಪುರ ತಾಲೂಕಿನಲ್ಲಿ 86 ಮಿ.ಮೀಟರ್ ವಾಡಿಕೆ ಮಳೆಯಲ್ಲಿ ಈವರೆಗೆ 44 ಮಿ.ಮೀಟರ್ ಮಳೆ ಸುರಿರಿದ್ದು, ಶೇ. 49ರಷ್ಟು ಕೊರತೆಯುಂಟಾಗಿದೆ. ಸುರಪುರ ತಾಲೂಕಿನಲ್ಲಿ ವಾಡಿಕೆ ಮಳೆ 74 ಮಿ.ಮೀಟರ್‌ಗಳಲ್ಲಿ 60 ಮಿ.ಮೀಟರ್ ಸುರಿದಿದ್ದು, ಶೇ. 20 ಕೊರತೆಯುಂಟಾಗಿದೆ ಹಾಗೂ ಯಾದಗಿರಿಯಲ್ಲಿ 79 ಮಿ.ಮೀಟರ್ ವಾಡಿಕೆ ಮಳೆಯಲ್ಲಿ ಈವರೆಗೆ 49 ಮಿ.ಮೀಟರ್ ಮಳೆ ಸುರಿದು ಶೇ. 38 ಕೊರತೆಯಾಗಿದೆ.
ಎಲ್ಲೆಲ್ಲಿ ಎಷ್ಟು ಗುರಿ: ಶಹಾಪುರ ತಾಲೂಕಿನಲ್ಲಿ 62,962 ಹೆಕ್ಟೇರ್ ನೀರಾವರಿ, 71004 ಹೆಕ್ಟೇರ್ ಖುಷ್ಕಿ ಸೇರಿ ಒಟ್ಟು 1,33,966 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಸುರಪುರ ವ್ಯಾಪ್ತಿಯಲ್ಲಿ 73,405 ಹೆಕ್ಟೇರ್ ನೀರಾವರಿ, 51,321 ಹೆಕ್ಟೇರ್ ಖುಷ್ಕಿ ಸೇರಿ ಒಟ್ಟು 1,24,726 ಹೆಕ್ಟೇರ್ ಬಿತ್ತನೆ ಗುರಿಯಿದೆ. ಯಾದಗಿರಿಯಲ್ಲಿ 24,034 ಹೆಕ್ಟೇರ್ ನೀರಾವರಿ ಹಾಗೂ 71,122 ಹೆಕ್ಟೇರ್ ಖುಷ್ಕಿ ಸೇರಿದಂತೆ ಒಟ್ಟು 95,156 ಹೆಕ್ಟೇರ್‌ಗಳಲ್ಲಿ ಬಿತ್ತನೆ ಮಾಡುವ ಗುರಿಯಿದೆ.