ಯಾದಗಿರಿ: ಕಾಲುವೆಗೆ ನೀರು ಹರಿಸುವುದುಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆಒತ್ತಾಯಿಸಿ ರೈತ ಕೃಷಿ ಕಾರ್ಮಿಕರ ಸಂಘಟನೆನೇತೃತ್ವದಲ್ಲಿ ರೈತರು ಖಾನಾಪೂರ ಸನ್ನತಿ ಏತನೀರಾವರಿ ಕಚೇರಿ ಎದುರು ಪ್ರತಿಭಟನೆ ನಡೆಸಿಕಾರ್ಯ ನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.
ಆರ್‌ಕೆಎಸ್ ಜಿಲ್ಲಾಧ್ಯಕ್ಷ ಶರಣಗೌಡ ಗೂಗಲ್‌ಮಾತನಾಡಿ, ರೈತರ ಬೆಳೆಗಳಿಗೆ ಅಗತ್ಯವಿರುವಸಮಯದಲ್ಲಿ ನೀರು ಹರಿಸಬೇಕು, ಕಾಲುವೆಗೆನೀರು ಹರಿಸಿ ಪುಣ್ಯ ಕಟ್ಟಿಕೊಳ್ಳಿ, ಅರ್ಧಕ್ಕೆ ನಿಂತಿರುವಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು,ಒಡೆದು ಹೋದ ಕಾಲುವೆ ದುರಸ್ತಿಗೊಳಿಸಬೇಕು, ಹೂಳು ತುಂಬಿರುವ ಕಸ ಸ್ವತ್ಛಗೊಳಿಸಬೇಕು,ಭೂಮಿ ಕಳೆದುಕೊಂಡಿರುವ ರೈತರಿಗೆ ಭೂಪರಿಹಾರ ಒದಗಿಸುವಂತೆ ಆಗ್ರಹಿಸಿದರು.
ಭೀಮಾ ಏತ ನೀರಾವರಿ ಯೋಜನೆಯಡಿವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಬರುವ ರೈತರುಪ್ರಸ್ತುತ ಸಾವಿರಾರು ಎಕರೆಯಲ್ಲಿ ಶೇಂಗಾ ಬಿತ್ತನೆಮಾಡಿದ್ದು ಈಗ ರೈತರಿಗೆ ನೀರಿನ ಅವಶ್ಯಕತೆಇದೆ.
ಹಾಗಾಗಿ ಬಿತ್ತನೆ ಮಾಡಿದ ಶೇಂಗಾ ರಾಶಿಮುಗಿಯುವವರೆಗೂ ನೀರು ಸರಬರಾಜು ಮಾಡುವಂತೆ ಒತ್ತಾಯಿಸಿದರು. ಭೂಮಿ ಕಳೆದುಕೊಂಡ ರೈತರಿಗೆ ಈ ಕೂಡಲೇಭೂ ಪರಿಹಾರ ನಿಗದಿ ಪಡಿಸಬೇಕು, ಅಲ್ಲಲ್ಲಿ ಅರ್ಧಕ್ಕೆ ನಿಂತಿರುವ ಕಾಲುವೆ ಕಾಮಗಾರಿ ಪೂರ್ಣಗೊಳಿಸಬೇಕು, ಯಾದಗಿರಿ ತಾಲೂಕಿನ ಹೆಡಗಿಮದ್ರಿ ಗ್ರಾಮದ ಕಡೆಗೆ ಹೋದ ಲ್ಯಾಟ್ರಲ್‌ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಅದನ್ನೂಕೂಡಲೇ ಪೂರ್ಣಗೊಳಿಸಬೇಕು, ಮುಂದಿನ ದಿನಗಳಲ್ಲಿ ಮುಂಗಾರು ಹಂತದಲ್ಲಿಯೇ ನಾರಾಯಣಪುರ ಎಡ ಮತ್ತು ಬಲ ದಂಡೆಕಾಲುವೆಗೆ ಯಾವ ಸಮಯದಲ್ಲಿ ನೀರು ಹರಿಸಲಾಗುತ್ತದೆಯೋ ಅದೇ ರೀತಿ ಅದೇ ಸಮಯದಲ್ಲಿ ರೈತರ ಜಮೀನುಗಳಿಗೆ ನೀರುಹರಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ಜಿಲ್ಲಾ ಸಹ ಕಾರ್ಯದರ್ಶಿ ಜಮಾಲ್‌ಸಾಬ್, ಆಂಜನೇಯ, ಸಾಬಣ್ಣ, ಹಣಮಂತ,ಮಲ್ಲಪ್ಪ, ಸಿದ್ದಪ್ಪ, ಸೂರಪ್ಪ, ಜ್ಞಾನಪ್ಪ ಸೇರಿದಂತೆಹಲವಾರು ರೈತರು ಇದ್ದರು.