Advertisement
ರವಿವಾರ ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ತರಳಬಾಳು ಜಗದ್ಗುರು ಶಾಖಾಮಠ ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಮ್ಮಿಕೊಂಡಿರುವ ಮತ್ತೆ ಕಲ್ಯಾಣ ಕಾರ್ಯಕ್ರಮ ನಿಮಿತ್ತ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
Related Articles
Advertisement
ನಂತರ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಸಮಕಾಲಿನ ಸಂದರ್ಭದಲ್ಲಿ ಶರಣರ ಪ್ರಸ್ತುತತೆ ಕುರಿತು ಬೆಳಗಾವಿ ಕಿತ್ತೂರ ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯದ ಕುಲಸಚಿವ ಡಾ| ರಂಗರಾಜ ವನದುರ್ಗ ಅವರಿಂದ ಉಪನ್ಯಾಸ, ಶರಣರ ಚಿಂತನೆಗಳು ಕುರಿತ ವಿಷಯ ಮೇಲೆ ಹಳಿಯಾಳದ ವಿಜಯ ಸಂದೇಶ ವಾರಪತ್ರಿಕೆಯ ಸಂಪಾದಕಿ ಸುಮಂಗಲಾ ಚಂದ್ರಕಾಂತ ಅಂಗಡಿ ಉಪನ್ಯಾಸ ನೀಡಲಿದ್ದಾರೆ. ಕಾರಣ ಜಿಲ್ಲೆಯ ಸಮಸ್ತ ಜನತೆ ಭಾಗವಹಿಸಬೇಕೆಂದು ಮನವಿ ಮಾಡಿದರು.
ಮಾಜಿ ಶಾಸಕ ಡಾ| ವೀರಬಸವಂತರೆಡ್ಡಿ ಮುದ್ನಾಳ ಮಾತನಾಡಿ, ಮತ್ತೆ ಕಲ್ಯಾಣ ಕಾರ್ಯಕ್ರಮದ ಜವಾಬ್ದಾರಿಯನ್ನು ನಾವೆಲ್ಲರೂ ತೆಗೆದುಕೊಂಡು ಎಲ್ಲರ ವಿಶ್ವಾಸ ಪಡೆದು ಸಾಮೂಹಿಕವಾಗಿ ಯಶಸ್ವಿಗೆ ಕೆಲಸ ಮಾಡಬೇಕು ಎಂದು ಹೇಳಿದರು.
ವಿಧಾನ ಪರಿಷತ ಮಾಜಿ ಸದಸ್ಯ ಚನ್ನಾರೆಡ್ಡಿ ಪಾಟೀಲ ತುನ್ನೂರು, ಮೌಲಾಲಿ ಅನಪೂರ, ಸ್ವಾಗತ ಸಮಿತಿ ಜಿಲ್ಲಾಧ್ಯಕ್ಷ ಸೋಮಶೇಖರ ಮಣ್ಣೂರ ಮಾತನಾಡಿದರು. ವೇದಿಕೆ ಮೇಲೆ ಡಾ| ಭಗವಂತ ಅನವಾರ, ಹನುಮಾನ ದಾಸ ಮುಂದಡಾ, ವೀರಣ್ಣ ರ್ಯಾಕಾ, ಗುಲಾಂ ಮಹಿಬೂಬ ಇದ್ದರು.
ಸಭೆಯಲ್ಲಿ ಶಾಂತಕುಮಾರ ಮಾಳಿಕೇರಿ, ಚನ್ನಪ್ಪಗೌಡ ಮೋಸಂಬಿ, ಶ್ರೀನಿವಾಸರೆಡ್ಡಿ ಪಾಟೀಲ ಚನ್ನೂರ, ಮುನಿಯಪ್ಪ ಭಾವಿಕಟ್ಟಿ, ವಿಶ್ವನಾಥರೆಡ್ಡಿ ಗೊಂದಡಗಿ, ವಿಶ್ವನಾಥ ಶಿರವಾರ, ಕೊಟ್ರೆಶ್ವರ ಸ್ವಾಮೀಜಿ, ಸಿದ್ದಣ್ಣ ಬಾಡದ್, ಇಂದೂಧರ ಸಿನ್ನೂರ, ಮರೆಪ್ಪ ಚಟ್ರೇಕರ್, ಮಹಾದೇವಪ್ಪ ಹೊಟ್ಟಿ, ವೆಂಕಣ್ಣ ಅಲೆಮನಿ, ಬಸಣ್ಣಗೌಡ ಕನ್ನೆಕೋಳುರ, ಸಿದ್ದಪಗೌಡ ರೋಟ್ನಡಗಿ, ಶೇಖರ ರ್ಯಾಖಾ, ಯಾಮರೆಡ್ಡಿ ಮುಂಡಾಸ್, ಡಾ| ಮರೆಪ್ಪ ವಡಿಗೇರಿ, ರಾಚಯ್ಯಸ್ವಾಮಿ ವಡಗೇರಿ, ತಿಪ್ಪಾರೆಡ್ಡಿ ಮಾಧ್ವಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.