Advertisement

ಸಾಮಾಜಿಕ ನ್ಯಾಯ ನೀಡಿದ ಕಾಂಗ್ರೆಸ್‌ ಬೆಂಬಲಿಸಿ: ನಾಯಕ

03:51 PM Apr 14, 2019 | Naveen |

ನಾರಾಯಣಪುರ: ಹೈ.ಕ. ಭಾಗದ ಸಮಗ್ರ ಅಭಿವೃದ್ಧಿಗೆ ಹಾಗೂ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಒದಗಿಸುವ ಮಹತ್ವದ 371ನೇ(ಜೆ) ಕಲಂ ಜಾರಿಗೆ ತಂದ ಕೀರ್ತಿ ಕಾಂಗ್ರೆಸ್‌ ಪಕ್ಷಕ್ಕೆ ಸಲ್ಲುತ್ತದೆ. ಇಂತಹ ಕೊಡುಗೆ ನೀಡಿದ ಕಾಂಗ್ರೆಸ್‌ ಪಕ್ಷಕ್ಕೆ ನಿಮ್ಮ ಬೆಂಬಲ ಇರಲಿ ಎಂದು ರಾಯಚೂರು ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ ಅಭ್ಯರ್ಥಿ ಬಿ.ವಿ. ನಾಯಕ ಹೇಳಿದರು.

Advertisement

ಇಲ್ಲಿನ ಕೆಬಿಜೆಎನ್‌ಎಲ್‌ ಕ್ಯಾಂಪ್‌ ಪ್ರದೇಶದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ರೈತರು, ಬಡವರು, ಹಿಂದುಳಿದವರ ಪರವಾಗಿರುವ ಕಾಂಗ್ರೆಸ್‌ ಪಕ್ಷ ಸಾಮಾಜಿಕ ನ್ಯಾಯ ಒದಗಿಸಿದೆ. ಕಳೆದ ಐದು ವರ್ಷದ ಹಿಂದೆ ಅಧಿಕಾರಕ್ಕೆ ಬಂದ ಬಿಜೆಪಿಯ ನಾಯಕರು ಬರೀ ಸುಳ್ಳಿನ ಕಂತೆ ಜನರ ಮುಂದಿಟ್ಟು ಮೋಸ ಮಾಡಿದ್ದಾರೆ. ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಾಗಿ ಹೇಳಿದ ಪ್ರಧಾನಿ ರಾಫೇಲ್‌ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.

ಉದ್ಯಮಿಗಳ ಸಾಲ ಮನ್ನಾ ಮಾಡುವ ಕೇಂದ್ರ ಸರಕಾರ ಬಡ ರೈತರ ಸಾಲ ಮನ್ನಾ ಮಾಡುವಲ್ಲಿ ವಿಫಲವಾಗಿದೆ. ಬಡವರ ಪರ ಕಿಂಚಿತ್ತೂ ಕಾಳಜಿ ಇಲ್ಲದ ಜನ ವಿರೋಧಿ ಬಿಜೆಪಿ ತಿರಸ್ಕರಸಿ ಕಾಂಗ್ರೆಸಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಹಲವು ದಶಕಗಳಿಂದ ಕಾಂಗ್ರೆಸ್‌ ಪಕ್ಷ ದೊಡ್ಡ ದೊಡ್ಡ ನೀರಾವರಿ, ರೈಲು, ವಿಮಾನ ಸೇರಿ ಕೈಗಾರಿಕೆ, ತಂತ್ರಜ್ಞಾನದ ಅನೇಕ ಯೋಜನೆ ಜಾರಿಗೆ ತಂದು ದೇಶಕ್ಕೆ ಮಹತ್ವದ ಕೊಡುಗೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಐದು ವರ್ಷಗಳಿಂದ ಬರೀ ಸುಳ್ಳನ್ನೇ ಹೇಳುತ್ತ ಬಡವರಿಗೆ ಅನ್ಯಾಯ ಮಾಡಿದ್ದಾರೆ. ಕಾಂಗ್ರೆಸ್‌ ಪಕ್ಷ ಏನೂ ಮಾಡಿಲ್ಲ ಎನ್ನುತ್ತಾರೆ. ಬರೀ ಮೋದಿ.. ಮೋದಿ ಎಂದರೆ ದೇಶವು ಎಂದಿಗೂ ಉದ್ಧಾರವಾಗುವುದಿಲ್ಲ. ಕಳೆದ ಐದು ವರ್ಷದ ಹಿಂದೆ ಮೋದಿ ಮೇಲೆ ಭರವಸೆ ಇಟ್ಟು ಗೆಲ್ಲಿಸಿದ್ದ ದೇಶದ ಜನರಿಗೆ ಈಗ
ಗೊತ್ತಾಗಿದೆ. ಬರೀ ಮಾತಿನ ಮನುಷ್ಯ ಅಭಿವೃದ್ಧಿಪರ ಕೆಲಸ ಕಾರ್ಯ ಮಾಡುವ ವ್ಯಕ್ತಿ ಅಲ್ಲ ಎಂದು ಹೇಳಿದರು.

ಯಾದಗಿರಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮರೀಗೌಡ ಹುಲಕಲ್‌ ಮಾತನಾಡಿ, ಬಿಜೆಪಿ ಎಂದಿಗೂ ಸತ್ಯ ಹೇಳುವುದಿಲ್ಲ. ಬರೀ ಸುಳ್ಳನ್ನೇ ಹೇಳುತ್ತ ಜನರಿಗೆ ಮೋಸ ಮಾಡುತ್ತಿದೆ. ಕಾಂಗ್ರೆಸ್‌ ಪಕ್ಷ ಅನ್ನಭಾಗ್ಯ, ರೈತರ ಸಾಲಮನ್ನಾ, ಬಡವರಿಗೆ ಸಾಕಷ್ಟು ಯೋಜನೆ ಜಾರಿಗೆ ತಂದು ಜನಪರ ಆಡಳಿತ ನೀಡಿದೆ. ಪ್ರಸ್ತುತ ಸಮ್ಮಿಶ್ರ ಸರಕಾರ ಅನೇಕ ಯೋಜನೆ ಜಾರಿಗೊಳಿಸುವತ್ತ ಹೆಜ್ಜೆ ಇಟ್ಟಿದೆ. ಈ
ನಿಟ್ಟಿನಲ್ಲಿ ಮೈತ್ರಿ ಅಭ್ಯರ್ಥಿ ಬಿ.ವಿ. ನಾಯಕ ಅವರನ್ನು ಬಹುಮತದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

Advertisement

ವಿಧಾನ ಪರಿಷತ್ತ್ ಸದಸ್ಯ ಬಸವರಾಜ ಪಾಟೀಲ ಇಟಗಿ, ಯಾದಗಿರಿ ಜಿಪಂ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ, ಲಿಂಗಸುಗೂರು ಜೆಡಿಎಸ್‌ ಮುಖಂಡ ಸಿದ್ದು ಬಂಡಿ, ಮುಖಂಡರಾದ ತಿಪ್ಪಣ್ಣ ಜಂಜಿನಗಡ್ಡಿ, ರಾಜಾ ವೇಣುಗೋಪಾಲ ನಾಯಕ, ಹಣಮಗೌಡ ಮರಕಲ್‌, ವೆಂಕೋಬ ಸಾಹುಕಾರ. ಸೂಲಪ್ಪ ಕಮತಗಿ, ಶಾಂತಗೌಡ ಚನ್ನಪಟ್ಟಣ, ಹಣಮಂತರಾಯಗೌಡ ಕಕ್ಕೇರಿ, ರಾಜಾ ರಾಮಪ್ಪನಾಯಕ (ಜೆಜಿ), ಖಲೀಲ್‌ ಅಹ್ಮದ್‌, ಲಿಂಗರಾಜ ಬಾಚಿಮಟ್ಟಿ, ನಿಂಗಣ್ಣ ಬಾದ್ಯಾಪುರ, ಹನೀಫ್‌ ಮಾಸ್ಟರ್‌, ಶಂಕರ ಚವ್ವಾಣ, ಗ್ರಾಪಂ ಅಧ್ಯಕ್ಷ ದೀರಪ್ಪ ರಾಠೊಡ, ಗ್ರಾಪಂ ಉಪಾಧ್ಯಕ್ಷೆ
ಬಸಮ್ಮ ಹುಲಿಕೇರಿ, ಎ.ಜಿ. ಕುಂಬಾರ, ಸೋಮನಗೌಡ, ಲಕ್ಷ್ಮೀ ನಾರಾಯಣ,  ಮುನಾಯಕ, ಶಾಂತಪ್ಪ ಮೇಸ್ತಕ, ಹಣಮೇಶ ಕುಲಕರ್ಣಿ, ನಾಗರಾಜ ಜೋಗೂರು, ಅಮರೇಶ ಕೋಳೂರು,
ಉಮರ್‌ ಚೌದ್ರಿ, ಕೆ.ಪಿ.ಮನೋಹರ, ಲಕ್ಶ್ಮಣ ಗೌಂಡಿ ಇದ್ದರು.
ಯಮನಪ್ಪ ಜಂಜಿಗಡ್ಡಿ ಸ್ವಾಗತಿಸಿದರು. ಚಿದಂಬರ ಕುಲಕರ್ಣಿ ನಿರೂಪಿಸಿದರು. ಲಕ್ಕಪ್ಪ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next