Advertisement

25 ವರ್ಷದ ದುರಾಡಳಿತ ಕೊನೆಯಾಗಲಿ

03:38 PM Apr 22, 2019 | Naveen |

ಮಾನ್ವಿ: ಕಾಂಗ್ರೆಸ್‌ನಿಂದ 20 ವರ್ಷ ದಿ| ವೆಂಕಟೇಶ ನಾಯಕ, 5 ವರ್ಷ ಬಿ.ವಿ. ನಾಯಕ ಆಡಳಿತ ನಡೆಸಿದ್ದರೂ ರಾಯಚೂರು ಲೋಕಸಭೆ ಕ್ಷೇತ್ರ ಅಭಿವೃದ್ಧಿಯಿಂದ ವಂಚಿತಗೊಂಡಿದೆ. ಮತದಾರರು ಈ ಚುನಾವಣೆಯಲ್ಲಿ ಬಿ.ವಿ. ನಾಯಕರನ್ನು ಹೀನಾಯ ಸೋಲಿಸಿ ಪಾಠ ಕಲಿಸಬೇಕು ಎಂದು ಶಾಸಕ ಕೆ.ಶಿವನಗೌಡ ನಾಯಕ ಕರೆ ನೀಡಿದರು.

Advertisement

ತಾಲೂಕಿನ ಹಿರೇಕೊಟ್ನೆಕಲ್ ಗ್ರಾಮದಲ್ಲಿ ರಾಯಚೂರು ಲೋಕಸಭೆ ಕ್ಷೇತ್ರದ ಬಿಜೆಪಿ ರಾಜಾ ಅಮರೇಶ್ವರ ನಾಯಕ ಪರ ಮತಯಾಚಿಸಿ ಅವರು ಮಾತನಾಡಿದರು. ರಾಯಚೂರು ಲೋಕಸಭೆ ಕ್ಷೇತ್ರದಿಂದ ಗೆದ್ದ ನಂತರ ಕ್ಷೇತ್ರದ ಯಾವುದೇ ಒಂದು ಗ್ರಾಮಕ್ಕೆ ಭೇಟಿ ನೀಡಿಲ್ಲ. ಇನ್ನು ಅಭಿವೃದ್ಧಿ ಕಾರ್ಯಗಳಂತೂ ಮರೀಚಿಕೆಯಾಗಿವೆ ಎಂದರು.

ಈ ಬಾರಿ ಬಿಜೆಪಿಯ ರಾಜಾ ಅಮರೇಶ್ವರ ನಾಯಕ ಸಂಸದರಾಗಿ ಆಯ್ಕೆಯಾದರೆ ಜಿಲ್ಲೆಗೆ ಏಮ್ಸ್‌ ಮಂಜೂರು ಮಾಡಿಸಲಾಗುವುದು. ನದಿ ಜೋಡಣೆ ಯೋಜನೆ ಕಾರ್ಯಗತಗೊಳಿಸುವ ಜೊತೆಗೆ ನವಲಿ, ಕವಿತಾಳ ಬಳಿ ಜಲಾಶಯ ನಿರ್ಮಿಸಿ ಈ ಭಾಗದ ರೈತರಿಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವುದು ನಮ್ಮ ಧ್ಯೇಯವಾಗಿದೆ. ಆದ್ದರಿಂದ ಬಿಜೆಪಿಯ ಅಮರೇಶ್ವರ ನಾಯಕಗೆ ಮತ ನೀಡಿ ಗೆಲ್ಲಿಸಬೇಕೆಂದು ವಿನಂತಿಸಿದರು.

ಮಾಜಿ ಸಚಿವ ಹಾಗೂ ಶಾಸಕ ವಿ.ಸೋಮಣ್ಣ, ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ್, ಗಂಗಾಧರ ನಾಯಕ, ತ್ರಿವಿಕ್ರಮ ಜೋಶಿ, ಉಮೇಶ ಸಜ್ಜನ್‌, ಕೊಟ್ರೇಶಪ್ಪ ಕೋರಿ, ಬಿ.ಮಾನಪ್ಪ ನಾಯಕ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next