Advertisement
ಲೋಕಸಭೆ ಚುನಾವಣೆ ಬಹಿರಂಗ ಪ್ರಚಾರಕ್ಕೆ ಕೇವಲ 2 ದಿನಗಳು ಉಳಿದಿರುವಾಗ ಗುರುವಾರ ಮಧ್ಯರಾತ್ರಿ ಶಾಸಕ ನಾಗನಗೌಡ ಕಂದಕೂರ ಅವರ ಯಾದಗಿರಿ ಮನೆಗೆ ಅಪರೂಪದ ಅತಿಥಿ ಕಲಬುರಗಿ ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಭೇಟಿ ನೀಡಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಮನವೊಲಿಸಲು ಕಾಂಗ್ರೆಸ್ ಪಕ್ಷದ ಹಲವರು ಪ್ರಯತ್ನಪಟ್ಟರೂ ಕಂದಕೂರ ಹಟ ಬಿಟ್ಟಿರಲಿಲ್ಲ. ಸ್ವತಃ ಖರ್ಗೆ ಅವರ ಪುತ್ರ, ಸಮಾಜ ಕಲ್ಯಾಣ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಮನವೊಲಿಸಲು ಯತ್ನಿಸಿದ್ದರು. ಎಲ್ಲರ ಪ್ರಯತ್ನ ಫಲಿಸದ ಕಾರಣ ಸ್ವತಃ ಖರ್ಗೆ ಅವರೇ ಕಂದಕೂರ ಅವರ ಮನೆಗೆ ಭೇಟಿ ನೀಡಿ ಮೈತ್ರಿ ಧರ್ಮದ ಪಾಲನೆ ಮಾಡಿ ತಮ್ಮನ್ನು ಬೆಂಬಲಿಸುವಂತೆ ಕೋರಿದರು. ಈ ಹಿಂದೆಯೇ ಜೆಡಿಎಸ್ ಹೈಕಮಾಂಡ್ ಮೈತ್ರಿ ಧರ್ಮ ಪಾಲಿಸುವಂತೆ ಹೇಳಿತ್ತು. ಆದರೂ,
ಖರ್ಗೆ ಅವರು ತಮ್ಮ ಮನೆಗೆ ಬಂದು ತಮ್ಮನ್ನು ಬೆಂಬಲಿಸಲು ಕೇಳುವವರೆಗೂ ಪ್ರಚಾರಕ್ಕೆ ತೆರಳಲ್ಲ ಎಂದು ಕಂದಕೂರ ಹೇಳಿದ್ದರು ಎನ್ನಲಾಗಿದೆ.
Related Articles
ಮಲ್ಲಿಕಾರ್ಜುನ ಖರ್ಗೆ 1972ರಲ್ಲಿ ಮೊದಲ ಬಾರಿಗೆ ಗುರುಮಠಕಲ್ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬಳಿಕ ಸತತ 8 ಬಾರಿ ದಾಖಲೆ ಗೆಲುವು ಸಾಧಿ ಸಿ ಸೋಲಿಲ್ಲದ ಸರದಾರ ಎನ್ನುವ ಖ್ಯಾತಿಗೆ ಪಾತ್ರವಾಗಿದ್ದು, ಇಲ್ಲಿಂದ ರಾಜಕೀಯ ಆರಂಭಿಸಿದ ಖರ್ಗೆ ಕಲಬುರಗಿ ಕ್ಷೇತ್ರದಿಂದ ಲೋಕಸಭೆಗೆ 2 ಬಾರಿ ಆಯ್ಕೆಯಾಗಿ ರಾಷ್ಟ್ರ
ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಾಯಕ. 2008ರಲ್ಲಿ ಗುರುಮಠಕಲ್ ಸಾಮಾನ್ಯ ಕ್ಷೇತ್ರವಾಗಿದ್ದರಿಂದ ಕಬ್ಬಲಿಗ ಸಮುದಾಯದ ನಾಯಕ ಬಾಬುರಾವ ಚಿಂಚನಸೂರ ಅವರು ಸ್ಪರ್ಧಿಸಿದ್ದರು. ಅವರು ಸತತ 2 ಬಾರಿ ಶಾಸಕರಾಗಿ,
ಸಚಿವರಾಗಿದ್ದರು. ಸ್ಥಳೀಯರಾದ ನಾಗನಗೌಡ ಕಂದಕೂರ 2 ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿ ಸಿ ಸೋತು 2018ರಲ್ಲಿ 3ನೇ ಬಾರಿಗೆ 24 ಸಾವಿರ ಮತಗಳ ಅಂತರದಿಂದ ದಾಖಲೆ ಗೆಲುವು
ಸಾಧಿಸಿ ಕಾಂಗ್ರೆಸ್ ಕೋಟೆ ಛಿದ್ರಗೊಳಿಸಿದ್ದರು.
Advertisement
ಖರ್ಗೆಗೆ ಅನಿವಾರ್ಯವಾಯಿತೇ?: ಹಿಂದಿನಿಂದಲೂ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಗುರುಮಠಕಲ್ ವಿಧಾನಸಭೆ ಕ್ಷೇತ್ರದಿಂದ ಹೆಚ್ಚಿನ ಲೀಡ್ ಬರುತ್ತಿತ್ತು. ಈ ಹಿಂದೆ 2008 ಮತ್ತು 2013ರಲ್ಲಿಗುರುಮಠಕಲ್ದಿಂದ ಆರಿಸಿ ಬಂದಿದ್ದ ಬಾಬುರಾವ ಚಿಂಚನಸೂರ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಗುರುವಿನ ಎದುರು ತೊಡೆ ತಟ್ಟಿ
ಸೋಲಿಸಲು ಪಣತೊಟ್ಟಿರುವುದು ಖರ್ಗೆ ಅವರಿಗೆ ಎಲ್ಲೊ ಒಂದು ಕಡೆ ಕೆಟ್ಟದ್ದಾಗಿ ಕಾಡುತ್ತಿತ್ತು. ಇದೀಗ ಗುರುಮಠಕಲ್‌ನಲ್ಲಿ ಜೆಡಿಎಸ್ ಶಾಸಕರು ಆರಿಸಿ ಬಂದಿದ್ದು, ಕ್ಷೇತ್ರದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದಾರೆ. ಮೇಲಾಗಿ ಮೈತ್ರಿ ಒಪ್ಪಂದವೂ ಪಾಲನೆ ಮಾಡಬೇಕಿರುವುದರಿಂದ ಕಾಂಗ್ರೆಸ್, ಜೆಡಿಎಸ್ ನಾಯಕರು
ಒಂದುಗೂಡುವುದು ಅನಿವಾರ್ಯವಾಗಿದೆ. ಅದೇನೆ ಇರಲಿ ತನ್ನ ಹಳೆ ನೆನಪುಗಳನ್ನೆಲ್ಲ ಸದ್ಯಕ್ಕೆ ಬದಿಗಿಟ್ಟು ಖರ್ಗೆ ಪರ ಪ್ರಚಾರಕ್ಕೆ ಕಂದಕೂರ ಕೂಡ ಒಪ್ಪಿದ್ದಾರೆ. ಚಿಂಚನಸೂರ ಬಿಗಿ ಹಿಡಿತ
ಈ ಹಿಂದೆ ಗುರುಮಠಕಲ್‌ದಿಂದ 2 ಬಾರಿ ಶಾಸಕರಾಗಿ ಆರಿಸಿ ಹೋಗಿದ್ದ ವರ್ಣರಂಜಿತ ರಾಜಕಾರಣಿ ಬಾಬುರಾವ ಚಿಂಚನಸೂರ ಕ್ಷೇತ್ರದಲ್ಲಿ ಉತ್ತಮ ಸಂಪರ್ಕ ಹೊಂದಿದ್ದಾರೆ. 10 ವರ್ಷಗಳವರೆಗೆ ಕ್ಷೇತ್ರವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ ಚಿಂಚನಸೂರ ತಮ್ಮದೇ ನೆಟ್‌ವರ್ಕ್
ಹೊಂದಿದ್ದಾರೆ. ಅದಲ್ಲದೇ ಮತದಾರರನ್ನು ಸೆಳೆಯುವ ಕಲೆ ಕರಗತ ಮಾಡಿಕೊಂಡಿದ್ದಾರೆ. ಅದೇನೊ ಬಾಬುರಾವ ಚಿಂಚನಸೂರ ಸೋತ ಮೇಲೂ ಕ್ಷೇತ್ರದ ಜನ ಇನ್ನೂ ಅವರನ್ನು ಮರೆತಿಲ್ಲ. ಸದ್ಯ ಬಿಜೆಪಿಯಲ್ಲಿರುವ ಚಿಂಚನಸೂರ ಮೇಲಿನ ಅನುಕಂಪದ ಜತೆಗೆ ಬಿಜೆಪಿ ಅಲೆಯೂ ಜಾಧವ್‌ಗೆ ಸಾಥ್ ನೀಡಲಿದೆ ಎನ್ನಲಾಗುತ್ತಿದೆ. 1972ರಿಂದ 35 ವರ್ಷದ ಮೊದಲ ಅಧ್ಯಾಯ. 10
ವರ್ಷ ಬಾಬುರಾವ ಯೋಗ್ಯ ಎಂದು ಕರೆದುಕೊಂಡು ಬಂದು ಗೆಲ್ಲಿಸಿದ್ದು ಹಾಗೂ ಪ್ರಿಯಾಂಕ್ ಖರ್ಗೆ ಕೆಲಸ ಕಾರ್ಯಗಳಿಗೆ
ಅಡ್ಡಿಪಡಿಸಿರುವುದು ಮೂರು ವಿಷಯಗಳ ಕುರಿತು ನೋವು ಹೇಳಿಕೊಂಡಿದ್ದೇನೆ. ಕುಮಾರಸ್ವಾಮಿ ಅವರು ಚ್ಯುತಿ ಬಾರದಂತೆ
ಮೈತ್ರಿ ಧರ್ಮ ಪಾಲಿಸಲು ಹೇಳಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವವರು ಮನೆಗೆ ಬಂದು ಸಹಾಯ ಕೇಳಬೇಕಿತ್ತು. ನಾನೊಬ್ಬ ಶಾಸಕ. ಬೇರೆ ಯಾರ್ಯಾರನ್ನೋ ಸಂಕರ್ಪ ಮಾಡಿದರೆ ನಾನೇನಾದರೂ ಖಾಲಿ ಕುಳಿತಿದ್ದೀನಾ? ಖರ್ಗೆ ಅವರು ಬಂದು
ಪ್ರಚಾರ ಮಾಡುವಂತೆ ಕೇಳಿಕೊಂಡಿದ್ದಾರೆ.ಶುಕ್ರವಾರದಿಂದಲೇ ಪ್ರಚಾರ ಆರಂಭಿಸುತ್ತೇವೆ.
ನಾಗನಗೌಡ ಕಂದಕೂರ,
ಗುರುಮಠಕಲ್ಲ ಜೆಡಿಎಸ್ ಶಾಸಕ ರಾಜ್ಯದಲ್ಲಿ ಜಾತ್ಯತೀತವಾಗಿ ಒಂದಾಗಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಮೈತ್ರಿ ಮಾಡಿಕೊಳ್ಳಲಾಗಿದೆ. ಅಭ್ಯರ್ಥಿ ಪರ ಪ್ರಚಾರ ಮಾಡಲು ಹೈಕಮಾಂಡ್ ಸೂಚನೆಯೂ ಬಂದಿದೆ. ನಾಗನಗೌಡ ಅವರು ಮೊದಲಿನಿಂದಲೂ ಪ್ರಚಾರದ ತಯಾರಿ ಮಾಡಿಕೊಂಡಿದ್ದಾರೆ. ಈಗಾಗಲೇ ಎಲ್ಲ ಕಡೆ ಬೇಕಾದವರಿಗೆ ಸೂಚನೆ ಕೊಟ್ಟಿದ್ದಾರೆ. ನಾಳೆಯಿಂದ ಪ್ರಚಾರ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ. ಅದರಂತೆ ನಾವು ಬ್ಯಾನರ್‌ಗಳಲ್ಲಿ ಜೆಡಿಎಸ್ ಮುಖಂಡರ ಭಾವಚಿತ್ರ ಹಾಕಿದ್ದೇವೆ. ಎಲ್ಲವನ್ನು ಮಾಧ್ಯಮಗಳ ಮುಂದೆ ಹೇಳಲು ಆಗಲ್ಲ.
ಡಾ| ಮಲ್ಲಿಕಾರ್ಜುನ ಖರ್ಗೆ,
ಕಲಬುರಗಿ ಲೋಕಸಭೆ
ಮೈತ್ರಿ ಅಭ್ಯರ್ಥಿ ಪ್ರಚಾರ ಆರಂಭ
ಗುರುವಾರ ರಾತ್ರಿ ಖರ್ಗೆ ಅವರು ಮನೆಗೆ ಭೇಟಿ ನೀಡಿ, ಮೈತ್ರಿ ಧರ್ಮದಂತೆ ತಮ್ಮನ್ನು ಬೆಂಬಲಿಸುವಂತೆ ಕೋರಿದ್ದರಿಂದ ಶುಕ್ರವಾರ ಬೆಳಗ್ಗಿನಿಂದಲೇ ಜೆಡಿಎಸ್
ರಾಜ್ಯ ಯುವ ಉಪಾಧ್ಯಕ್ಷ ಶರಣಗೌಡ ಕಂದಕೂರ ಗುರುಮಠಕಲ್
ಮತಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆ ಆಯೋಜಿಸಿ ಮೈತ್ರಿ ಧರ್ಮದ
ಒಪ್ಪಂದದಂತೆ ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ. ಅನೀಲ ಬಸೂದೆ