Advertisement
ಶಹಾಪುರ ತಾಲೂಕಿನ ಕೊಳ್ಳೂರು ಸೇತುವೆ ಅಪಾಯಮಟ್ಟ ತಲುಪಿದ್ದು, ಸೇತುವೆ ಮೇಲೆ ನೀರು ಹರಿಯುತ್ತಿವೆ. ಜಿಲ್ಲಾಡಳಿತ ಸೇತುವೆ ಮೇಲೆ ವಾಹನ ಸಂಚಾರಕ್ಕೆ ನಿರ್ಬಂಧ ಮಾಡಿ ಡಿಸಿ ಡಾ.ಸುಶೀಲಾ ಬಿ ಆದೇಶ ಹೊರಡಿಸಿದ್ದಾರೆ.
Related Articles
Advertisement
ಯಾದಗಿರಿ ನಗರದ ಭೀಮಾ ನದಿ ತಟದಲ್ಲಿರುವ ವೀರಾಂಜನೇಯ ಹಾಗೂ ಕಂಗಳೇಶ್ವರ ದೇಗುಲ ಜಲಾವೃತಗೊಂಡಿದ್ದು, ನದಿ ದಡದಲ್ಲಿರುವ ಶಿವಲಿಂಗಕ್ಕೆ ಭೀಮಾ ನದಿ ನೀರು ತಗುಲಿದ್ದು ಜನರು ಶಿವಲಿಂಗ ನೋಡಲು ಯತ್ನಿಸುತ್ತಿದ್ದಾರೆ.
ಜಿಲ್ಲಾಡಳಿತ ಹೈ ಅಲರ್ಟ್ ಘೋಷಣೆ
ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 2.5 ಲಕ್ಷ ಕ್ಯೂಸೆಕ್ ನೀರು ಹರಿ ಬಿಡಲಾಗಿದ್ದು, ನದಿ ಪಾತ್ರದ ಪದೇಶಗಳಲ್ಲಿ ಜಿಲ್ಲಾಡಳಿತ ಮುಂಜಾಗ್ರತೆ ಕ್ರಮಕ್ಕಾಗಿ ಕಟ್ಟೆಚ್ಚರಿಕೆ ಘೋಷಿಸಿದ್ದು, ನದಿ ನೀರಿಗೆ ರೈತರು, ಜಾನುವಾರುಗಳು ಇಳಿಯದಂತೆ ನಿಗಾವಹಿಸುವಂತೆ ಗ್ರಾಮದ ಪಿಡಿಓ ಹಾಗೂ ಗಸ್ತು ಪೊಲೀಸರಿಗೆ ಜಿಲ್ಲಾಡಳಿತ ಸೂಚಿಸಿದೆ. ಶಹಾಪುರ ತಾಲೂಕಿನ ಕೊಳ್ಳೂರು ಗ್ರಾಮದ ಸೇತುವೆ ಮುಳುಗಡೆ ಸಾಧ್ಯತೆ ಇದ್ದು, ಪೊಲೀಸರು ವಾಹನ ಸಂಚಾರಕ್ಕೆ ತಡೆಹಿಡಿದಿದ್ದಾರೆ. ಕೊಳ್ಳೂರು ಸೇತುವೆ ಸ್ಥಳಕ್ಕೆ ಶಹಾಪುರ ತಹಶಿಲ್ದಾರ್ ಉಮಾಕಾಂತ ಹಳ್ಳಿ ಭೇಟಿ ನೀಡಿದರು.
ಕೃಷ್ಣಾ ನದಿಗೆ 2.5 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದ್ದು, ಈಗಾಗಲೇ ತಾಲೂಲು ಮಟ್ಟದ ಅಧಿಕಾರಿಗಳಿಗೆ ನಿಗಾ ವಹಿಸುವಂತೆ ಸೂಚಿಸಿದ್ದು, ಕೊಳ್ಳೂರು ಸೇತುವ ಹಾಗೂ ಯಾದಗಿರಿ ನಗರದ ಭೀಮಾ ನದಿಗೆ ಪೊಲೀಸರ ಬಂದೋಬಸ್ತ್ ನಿಯೋಜಿಸಲಾಗಿದೆ. ನದಿಗೆ ರೈತರು ಹಾಗೂ ಜಾನುವಾರುಗಳು ಇಳಿಯದಂತೆ ಗ್ರಾ.ಪಂ ಮಟ್ಟದ ಅಧಿಕಾರಿಗಳು ಎಚ್ಚರಿಕೆ ಕ್ರಮ ವಹಿಸಿದ್ದಾರೆ ಎಂದು ಡಿಸಿ ಹೇಳಿದ್ದಾರೆ.