Advertisement
ಗುರುಮಠಕಲ್ ನಗರದ ಶ್ರೀ ಆಂಜನೇಯ ದೇವಸ್ಥಾನ ಜಾತ್ರೆ ನಿಮಿತ್ತ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವ್ಯಕ್ತಿಯ ವ್ಯಕ್ತಿತ್ವ ರೂಪಿಸುವ ಸಾಧನ ಕ್ರೀಡೆ. ಸೋಲು-ಗೆಲುವು, ನೋವು ನಲಿವುಗಳ ನಡುವೆಯೂ ಪರಸ್ಪರ ಸಹಕಾರದಿಂದ ಕ್ರೀಡೆ ಸಹಾಯಕವಾಗಿದೆ. ಸಮಯ ಪರಿಪಾಲನೆ ಜೊತೆಗೆ ಸಮರ್ಪಕ ದಿಟ್ಟ ನಿರ್ಧಾರ ಕೈಗೊಳ್ಳುವ ಕಲೆ ಕ್ರೀಡೆಯಿಂದ ಕರಗತವಾಗುತ್ತದೆ ಎಂದರು.
Related Articles

ಇತ್ತೀಚಿನ ದಿನಮಾನಗಳಲ್ಲಿ ಕಬಡ್ಡಿಯಂತಹ ಪಕ್ಕಾ ದೇಶಿ ಕ್ರೀಡೆ ಆಡುವುದು ತೀರಾ ಕಡಿಮೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಆಟಗಳಿಂದ ಮಾನಸಿಕ ಮತ್ತು ದೈಹಿಕ ಸದೃಢತೆ ಹೊಂದಬಹುದು ಎಂದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಅರಕೇರಾ ಸಿದ್ಧಾರೂಢ ಮಠದ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಜೆಡಿಎಸ್ ಬ್ಲಾಕ್ ಅಧ್ಯಕ್ಷ ಶರಣು ಅವುಂಟಿ, ವೈದ್ಯಾಧಿಕಾರಿ ಶಿವಪ್ರಸಾದ ಮೈತ್ರಿ, ನರಸಿರೆಡ್ಡಿ ಗಡ್ಡೆಸೂಗೂರ್, ಆಂಜನೇಯ ದೇವಸ್ಥಾನ ಕಮಿಟಿ ಅಧ್ಯಕ್ಷ ಯಂಕಪ್ಪ ಮನ್ನೆ, ಅಶೋಕ ಸಂಜನೋಳ್ ಇದ್ದರು.