Advertisement

168 ಅಭ್ಯರ್ಥಿಗಳು ವಿವಿಧ ಕಂಪನಿಗಳಿಗೆ ಉದ್ಯೋಗಕ್ಕೆ ಆಯ್ಕೆ

11:26 AM Jun 27, 2019 | Naveen |

ಯಾದಗಿರಿ: ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ವಿವಿಧ ಕಂಪನಿಗಳ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ ಸುಮಾರು 550 ರಷ್ಟು ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗವಹಿಸಿ ಹಲವು ಕಂಪನಿಗಳಲ್ಲಿ ಉದ್ಯೋಗಕ್ಕಾಗಿ ತಮ್ಮ ಸ್ವವಿವರಗಳನ್ನು ಸಲ್ಲಿಸಿ ಸಂದರ್ಶನಲ್ಲಿ ಭಾಗವಹಿಸಿದ್ದರು.

Advertisement

ಹಿಂದುಳಿದ ಭಾಗದಲ್ಲಿ ನಿರುದ್ಯೋಗಿಗಗಳಿಗೆ ಅನುಕೂಲವಾಗಲು ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಸ್ಥಳೀಯ ಹಾಗೂ ಬೇರೆ ಕಡೆ ಕೆಲಸ ಮಾಡುವ ಅವಕಶಾವೂ ಸಿಕ್ಕಿದೆ. ಮೇಳದಲ್ಲಿ ಭಾಗವಹಿಸಿದ್ದ ಅಭ್ಯರ್ಥಿಗಳಲ್ಲಿ ಸುಮಾರು 168 ಜನರು ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ ಎಂದು ಉದ್ಯೋಗಾಧಿಕಾರಿ ಭಾರತಿ ಮಾಹಿತಿ ನೀಡಿದ್ದಾರೆ.

ಉದ್ಯೋಗ ಮೇಳದಲ್ಲಿ ಬೆಂಗಳೂರಿನ ಜಿ4ಎಸ್‌ ಸೆಕ್ಯೂರ್‌ ಸಲ್ಯೂಶನ್ಸ್‌ ಪ್ರೈ.ಲಿ, ಬೆಂಗಳೂರಿನ ಗ್ರಾಮೀಣ ಕೂಟ ಫೈನಾನ್ಸಿಯಲ್ ಸರ್ವೀಸಸ್‌ ಪ್ರೈ.ಲಿ, ಪ್ರಕೃತಿ ಚೇತನಾ ಜನ ಕಲ್ಯಾಣ ಅಭಿವೃದ್ಧಿ ಸಂಸ್ಥೆ, ಹೈದ್ರಾಬಾದನ ಮೆಟ್ರೊ ಮೀಡಿಯಾ ಫಾರ್ಮಾ ಪ್ರೈ.ಲಿ, ಧಾರವಾಡದ ಕನೆಕ್ಟ್ ಸಂಸ್ಥೆ ಸೇರಿದಂತೆ ನಿರುದ್ಯೋಗಿ ಯುವಕ ಹಾಗೂ ಯುವತಿಯರಿಗೆ 2 ತಿಂಗಳು ಉಚಿತ ಕೌಶ್ಯಲ ತರಬೇತಿ ನೀಡಿ ಉದ್ಯೋಗ ಅವಕಾಶಗಳನ್ನು ದೊರಕಿಸಿಕೊಡುವ ಯಾದಗಿರಿಯ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರವೂ ಉದ್ಯೋಗ ಮೇಳದಲ್ಲಿ ಭಾಗವಹಿತ್ತು.

ಹಲವೆಡೆ ಸಂದರ್ಶನ ನೀಡಿದ ಬಳಿಕ ಅಭ್ಯರ್ಥಿಗಳು ತಮಗೆ ಸೂಕ್ತ ಎನಿಸಿದ ಕಂಪನಿಯನ್ನು ಆಯ್ಕೆ ಮಾಡಿಕೊಂಡಿದ್ದು ಕಂಡು ಬಂತು. ಒಟ್ಟಿನಲ್ಲಿ ಹಿಂದುಳಿದ ಭಾಗದ ನಿರುದ್ಯೋಗಿಗಳಿಗೆ ಇಂದು ನಡೆಯ ಉದ್ಯೋಗ ಮೇಳ ದುಡಿಯುವ ಯುವಕರ ಕೈಗೆ ಉದ್ಯೋಗ ದೊರಕಿಸಿ ಕೊಡುವಲ್ಲಿ ಯಶಸ್ವಿಯಾಯಿತು.

ಬೆಂಗಳೂರಿನ ಯಸ್‌ ಸೆಂಟರ್‌ನ ಉಪ ವ್ಯವಸ್ಥಾಪಕ ಭುವನೇಶ್ವರ್‌, ಜೆಡಿಇ ಪ್ರಭು, ಕೌನ್ಸಲರ್‌ ರವಿಕುಮಾರ್‌ ಇತರರಿದ್ದರು.

Advertisement

ಜಿಲ್ಲಾಧಿಕಾರಿಗಳಿಂಧ ವೀಕ್ಷಣೆ: ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳವನ್ನು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಅವರು ವೀಕ್ಷಿಸಿದರು. ಜಿಲ್ಲೆಯ ಅಭ್ಯರ್ಥಿಗಳು ಇಂಗ್ಲಿಷ್‌ ಮತ್ತು ಕೌಶಲ ಹೊಂದಿದರೆ ನಿರಾತಂಕವಾಗಿ ಉದ್ಯೋಗ ಪಡೆಯಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕೊಡಿಸಲು ಬೇಕಾಗುವ ಅನುದಾನ, ಮೂಲಸೌಕರ್ಯ ಕುರಿತಂತೆ ಕ್ರಿಯಾಯೋಜನೆ ಸಿದ್ಧಪಡಿಸಿ ಸಲ್ಲಿಸುವಂತೆ ಜಿಲ್ಲಾ ಉದ್ಯೋಗಾಧಿಕಾರಿಗಳಿಗೆ ಸೂಚಿಸಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಕಷ್ಟದ ಮಾತಾಗಿದೆ. ಹಲವು ಪರೀಕ್ಷೆಗಳು ಬರೆದರೂ ಕೆಲವು ಅಂಕಗಳಲ್ಲಿಯೇ ಎಡವುತ್ತಿದ್ದು, ನಮ್ಮ ಭಾಗದಲ್ಲಿ ಸೂಕ್ತ ಮಾರ್ಗದರ್ಶನ ನೀಡುವವರ ಕೊರೆತೆ ತುಂಬಾಯಿದೆ. ಯುವಕರು ಉದ್ಯೋಗ ಗಿಟ್ಟಿಸಿಕೊಳ್ಳುವುದಕ್ಕೆ ಸಹಕಾರಿಯಾಗಲು ಯಾವ ವಿಧಾನಗಳನ್ನು ಅನುಸರಿಸಬೇಕು ಎಂದು ತಿಳಿಸುವವರು ಇಲ್ಲ. ಬೆಂಗಳೂರಿನಂತ ನಗರಗಳಿಗೆ ಸಂದರ್ಶನಕ್ಕೆ ತೆರಳಿದರೆ ನಮ್ಮ ಭಾಗದವರ ಪ್ರತಿಭೆಗೆ ಅವಕಾಶಗಳು ಸಿಗುತ್ತಿಲ್ಲ.
ಪ್ರವೀಣ
ಸಂದರ್ಶನಕ್ಕೆ ಹಾಜರಾದ ಅಭ್ಯರ್ಥಿ.

Advertisement

Udayavani is now on Telegram. Click here to join our channel and stay updated with the latest news.

Next