Advertisement

ಛಲದಿಂದ ಮುನ್ನಡೆದರೆ ಯಶಸ್ಸು

03:39 PM Sep 16, 2019 | Naveen |

ಯಾದಗಿರಿ: ವಿದ್ಯಾರ್ಥಿ ಜೀವನ ಅತ್ಯಂತ ಪ್ರಮುಖವಾದ ಘಟ್ಟವಾಗಿದ್ದು, ಛಲದಿಂದ ಮುನ್ನಡೆದರೆ ಜೀವನದಲ್ಲಿ ಯಶಸ್ಸು ಸಾಧ್ಯವಾಗುತ್ತದೆ ಎಂದು ಸುರಪುರ ಖಜಾನಾಧಿಕಾರಿ ಮೋನಪ್ಪ ಶಿರವಾಳ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

Advertisement

ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳ ಎನ್‌ಎಸ್‌ಎಸ್‌ ಘಟಕ ಮತ್ತು ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಧಕರ ಜೀವನದಲ್ಲಿ ಕಷ್ಟಗಳು ಸಾಮಾನ್ಯವಾಗಿ ಬರುತ್ತವೆ. ಹಾಗಾಗಿ ಧೈರ್ಯದಿಂದ ಸಮಸ್ಯೆಯನ್ನು ಮೆಟ್ಟಿನಿಲ್ಲುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಂದ್ರಕಾಂತ ಜಿ. ಹಿಳ್ಳಿ ಮಾತನಾಡಿ, ವಿದ್ಯಾರ್ಥಿಗಳು ವಿಷಯ ಮನದಟ್ಟು ಆಗುವಂತೆ ನಿರಂತರ ವ್ಯಾಸಾಂಗದಲ್ಲಿ ತೊಡಗಿಸಿಕೊಳ್ಳಬೇಕು. ವಿಷಯ ಅರ್ಥವಾಗದ ಸಂದರ್ಭದಲ್ಲಿ ಉಪನ್ಯಾಸಕರಿಂದ ಸೂಕ್ತ ವಿವರಣೆ ಪಡೆದು ಉತ್ತಮ ಸಾಧಕರಾಗಬೇಕು ಎಂದರು.

ಸಮಾಜದಲ್ಲಿ ಶಿಕ್ಷಕ ವೃತ್ತಿ ಶೇಷ್ಠವಾದದ್ದು, ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಶಿಕ್ಷಕರ ಕ್ರಿಯಾತ್ಮಕ ಪಾತ್ರ ವಹಿಸಿಸುತ್ತಾರೆ. ಅದಕ್ಕಾಗಿ ವರ್ಗಕೋಣೆಯಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಬೇಕು ಎಂದರು. ಪ್ರಭಾರಿ ಪ್ರಾಚಾರ್ಯ ಗಣಪತಿ ಪೂಜಾರಿ, ವರದಿಗಾರ ಲಕ್ಷ್ಮೀಕಾಂತ ಕುಲಕರ್ಣಿ ಮಾತನಾಡಿದರು.

Advertisement

ಕಾಲೇಜು ಸುಧಾರಣಾ ಸಮಿತಿ ಉಪಾಧ್ಯಕ್ಷ ಅನಿಲ ಗುರೂಜಿ, ಎನ್‌ಎಸ್‌ಎಸ್‌ ಅಧಿಕಾರಿ ನೆಹರು ಮೈಲಿ, ಸಾಂಸ್ಕೃತಿಕ ಚಟುವಟಿಕೆಗಳ ಸಲಹೆಗಾರ ಭೀಮಶಪ್ಪ, ಉಪನ್ಯಾಸಕ ನಂದಕಿಶೋರ, ನಾಗಪ್ಪ, ಯಲ್ಲಪ್ಪ, ಪವನ, ಮಲ್ಲಿಕಾರ್ಜುನರಡ್ಡಿ, ನಾಮದೇವ ವಾಟ್ಕರ, ಶೈಲಜಾ, ಜ್ಯೋತಿ ಪಾಟೀಲ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next