ಯಾದಗಿರಿ: ಎರೆಹುಳು ರೈತನ ಮಿತ್ರ. ರೈತನಂತೆ ಭೂಮಿಯಲ್ಲಿ ನಿರಂತರ ಕೆಲಸ ಮಾಡುವ ಜೀವಿ. ಮಣ್ಣಿನ ಫಲವತ್ತತೆ ಕಾಪಾಡುವಲ್ಲಿ ಎರೆಹುಳು ಪ್ರಮುಖ ಪಾತ್ರವಹಿಸುತ್ತದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಭೆ„ ಹೇಳಿದರು.
ತಾಪಂ ಸಾಮರ್ಥ್ಯಸೌಧದಲ್ಲಿ ಯಾದಗಿರಿ ಮತ್ತು ಗುರುಮಠಕಲ್ ತಾಪಂ ವತಿಯಿಂದ ಆ.15ರಂದು ಆರಂಭಗೊಳ್ಳುವ ರೈತ ಬಂಧು ಹಾಗೂ ಪೌಷ್ಟಿಕ ಕೈತೋಟ ಅಭಿಯಾನದ ಕುರಿತು ನರೇಗಾ ತಾಲೂಕು ಅನುಷ್ಠಾನಾ ಧಿಕಾರಿ, ಪಿಡಿಒ, ತಾಂತ್ರಿಕ ಸಹಾಯಕರಿಗಾಗಿ ಹಮ್ಮಿಕೊಂಡ ತರಬೇತಿಯಲ್ಲಿ ಮಾತನಾಡಿದರು.
ಕೃಷಿಯಲ್ಲಿ ಹೆಚ್ಚು ಇಳುವರಿ ಪಡೆಯಲು ಎರೆಹುಳು ಗೊಬ್ಬರ ತಯಾರಿಕೆಗೆ ರೈತರಲ್ಲಿ ಉತ್ತೇಜನ ನೀಡಲು ಜಿಲ್ಲಾದ್ಯಂತ ಆ.15ರಿಂದ ಅ.15ರ ರೈತ ಬಂಧು ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಶೇ.60 ಕೃಷಿ ಸಂಬಂ ಧಿತ ಚಟುವಟಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸಿದ್ದು, ರೈತ ಬಂಧು ಅಭಿಯಾನವು ರೈತರಲ್ಲಿ ಉತ್ಪಾದನೆ ವೆಚ್ಚ ಕಡಿಮೆಗೊಳಿಸಿ ಆರ್ಥಿಕ ಸದೃಢರನ್ನಾಗಿ ಮಾಡಿ ಮಳೆಗಾಲದಲ್ಲಿ ನಿರಂತರ ಉದ್ಯೋಗ ನೀಡುವ ಗುರಿ ಹೊಂದಿದೆ.
ರಾಸಾಯನಿಕ ಗೊಬ್ಬರ ಬಳಕೆಯಿಂದಾಗುವ ಸಾಧಕ ಬಾಧಕಗಳ ಕುರಿತು ರೈತರಲ್ಲಿ ಅರಿವು ಮೂಡಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ರೈತರು ಎರೆಹುಳು ಗೊಬ್ಬರ ತಯಾರಿಕೆ ಉತ್ತೇಜಿಸುವ ದೃಷ್ಟಿಯಿಂದ ಮಹಾತ್ಮಾ ಗಾಂರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರೈತ ಬಂಧು ಅಭಿಯಾನ ನಡೆಯುತ್ತಿದ್ದು ಅಭಿಯಾನದಡಿ ಪ್ರತಿ ಗ್ರಾಪಂಗೆ ಕನಿಷ್ಠ 25 ಎರೆಹುಳು ತೊಟ್ಟಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
75ನೇ ಸ್ವಾತಂತ್ರ್ಯೋತ್ಸವದ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಆ.15ರಂದು ತಾಲೂಕು ಹಾಗೂ ಗ್ರಾಪಂಗಳಲ್ಲಿ ಸ್ಥಳೀಯ ಜನಪ್ರತಿನಿಧಿಗಳ ನೇತೃತ್ವದಲ್ಲಿ ರೈತ ಬಂಧು ಅಭಿಯಾನಕ್ಕೆ ಎಲ್ಲಾ ಗಾಪಂಗಳಲ್ಲಿ ಚಾಲನೆ ನೀಡಬೇಕು ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಕೃಷಿ ಇಲಾಖೆಯ ವಿಷಯ ತಜ್ಞ ಗಣಪತಿ ಮಾತನಾಡಿದರು. ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಚಂದ್ರಶೇಖರ ಪವಾರ, ರಾಮಚಂದ್ರ ಬಸೂದೆ, ಆರ್‌ಎಫ್‌ಒ ಸೋಮರಾಯ, ತಾಲೂಕು ಆರೋಗ್ಯಾಧಿಕಾರಿ ಡಾ| ಹಣಮಂತರಡ್ಡಿ, ಅಭಿಯಾನ ಅನುಷ್ಠಾನದ ತಾಲೂಕು ಅಧಿಕಾರಿ, ನರೇಗಾ ಯೋಜನೆಯ ವಿಷಯ ನಿರ್ವಾಹಕರು ಹಾಗೂ ವಿವಿಧ ಸಿಬ್ಬಂದಿ ಇದ್ದರು.