Advertisement
ಪ್ರಸ್ತುತ ಜಿಲ್ಲೆಯಲ್ಲಿ 84, 577 ಕುಟುಂಬಗಳು 1,73, 487 ಉದ್ಯೋಗ ಚೀಟಿ ಹೊಂದಿದ್ದು, 1,27, 231 ಕಾರ್ಮಿಕರಿದ್ದಾರೆ. ಕಾಮಗಾರಿ ಈಗಷ್ಟೇ ವರ್ಷಾರಂಭವಾಗಿದ್ದು, ಕಾಮಗಾರಿಗಳು ಹಂತ ಹಂತವಾಗಿ ಆರಂಭಗೊಳ್ಳುತ್ತಿರುವ ಮಧ್ಯೆಯೇ ಕೊರೊನಾ ಕಾರ್ಮಿಕರ ಜೀವನಕ್ಕೆ ಹೊಡೆತ ಕೊಟ್ಟಿದೆ. ಜಿಲ್ಲೆಯಲ್ಲಿ 123 ಗ್ರಾಪಂಗಳಲ್ಲಿ 80ಕ್ಕೂ ಹೆಚ್ಚು ಗ್ರಾಪಂಗಳ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಕಾಮಗಾರಿ ನಡೆಯುತ್ತಿದೆ. ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಸಾಮೂಹಿಕ ಕಾಮಗಾರಿ ನಿರ್ವಹಣೆ ವೇಳೆಯೂ ಅಗತ್ಯ ಎಚ್ಚರಿಕೆಗಳನ್ನು ವಹಿಸಲಾಗುತ್ತಿದೆ.
ಸದ್ಯ ಜಿಲ್ಲೆಯ ವಡಗೇರಾ ವ್ಯಾಪ್ತಿಯಲ್ಲಿ 27 ಕಾರ್ಮಿಕರು ಹಿಂತಿರುಗಿದ್ದು, ಎಲ್ಲರಿಗೂ ಉದ್ಯೋಗ ಕಾರ್ಡ್ ಮಾಡಿಸಲಾಗಿದೆ. ಕೆಲಸಕ್ಕೆ ಅರ್ಜಿ ಹಾಕಿರುವ ಜನರಿಗೆ ಕೆಲಸ ನೀಡಿ ಸಂಕಷ್ಟದ ಸಮಯಕ್ಕೆ ಖಾತ್ರಿ ನೆರವಾದಂತಾಗಿದೆ.
Related Articles
ಜಿಲ್ಲೆಯ ಶಹಾಪುರ ತಾಲೂಕಿನ ನಾಗನಟಗಿ ಗ್ರಾಪಂ ವ್ಯಾಪ್ತಿಯ ಬಾಣತಿಹಾಳ ಗ್ರಾಮಸ್ಥರು ಉದ್ಯೋಗ ಖಾತ್ರಿಯನ್ನೇ ಅವಲಂಭಿಸಿದ್ದಾರೆ. ಗ್ರಾಮದ ಜನರಿಗೆ ಒಟ್ಟು 100 ಎಕರೆ ಮಾತ್ರ ಕೃಷಿ ಭೂಮಿಯಿದ್ದು, ಗ್ರಾಮೀಣ ಉದ್ಯೋಗ ಖಾತ್ರಿಯೇ ಇವರ ಜೀವನಕ್ಕೆ ಆಸರೆಯಾಗಿದೆ.
Advertisement
ಮುನ್ನೆಚ್ಚರಿಕೆ ಕ್ರಮ ಪರಿಶೀಲನೆಉದ್ಯೋಗ ಖಾತ್ರಿಗೂ ಕೊರೊನಾ ಆತಂಕ ಸೃಷ್ಟಿಯಾಗಿದೆ. ಸಂಕಷ್ಟದ ಪರಿಸ್ಥಿತಿಯಲ್ಲಿ ಕಾರ್ಮಿಕರ ಜೀವನೋಪಾಯಕ್ಕೆ ತೊಂದರೆಯಾಗದಂತೆ ಕೆಲಸಗಳನ್ನು ಆರಂಭಿಸಲಾಗಿದೆ. ಕಾರ್ಮಿಕರ ಆರೋಗ್ಯದ ಕಾಳಜಿವಹಿಸಿ ನೋಡಲ್ ಅಧಿಕಾರಿಯಾಗಿರುವ ಜಿಪಂ ಉಪಕಾರ್ಯದರ್ಶಿ ಸ್ವತಃ ಕಾಮಗಾರಿ ಸ್ಥಳಗಳಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಪರಿಶೀಲಿಸಿ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ. ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಕೂಲಿ ಕಾರ್ಮಿಕರಿಗೆ ಲಾಭವಾಗಲೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಾಳಜಿ ವಹಿಸಬೇಕು. ಕೂಲಿ
ಕಾರ್ಮಿಕರು ಸಂಕಷ್ಟ ಎದುರಿಸುತ್ತಿರುವ ಪ್ರಸ್ತುತ ದಿನಗಳಲ್ಲಿ ಕನಿಷ್ಠ 2-3 ತಿಂಗಳಾದರೂ ಕೆಲಸ ನೀಡಿ ಅನುಕೂಲ ಕಲ್ಪಿಸಬೇಕು.
ಶರಣಗೌಡ ಗೋಗಲ್,
ರೈತ ಕೃಷಿ ಕಾರ್ಮಿಕ
ಸಂಘದ ಜಿಲ್ಲಾಧ್ಯಕ್ಷ ಅನೀಲ ಬಸೂದೆ