Advertisement
ತಂಡವು ಜಿಲ್ಲಾಧಿಕಾರಿ ಸಲಹೆ ಹಾಗೂ ಮಾರ್ಗದರ್ಶನದೊಂದಿಗೆ ಜಿಲ್ಲೆಯ ವಿವಿಧ ಭತ್ತದ ತಾಕುಗಳಿಗೆ ಭೇಟಿ ನೀಡಿ, ಮೂರು ತಾಲೂಕಿನ ವಿವಿಧ ಭತ್ತದ ಬೆಳೆಯ ತಾಕುಗಳನ್ನು ವೀಕ್ಷಿಸಲಾಯಿತು.
Related Articles
Advertisement
ಇಲ್ಲವಾದಲ್ಲಿ ಮತ್ತೆ ಸಸಿಗಳನ್ನು ತಯಾರಿಸಿ ಭತ್ತದ ಬೆಳೆ ಬೆಳೆಯಬಹುದು. ಇದರಿಂದ ಹಂಗಾಮು ಒಂದು ತಿಂಗಳು ಮುಂದುವರೆದರೂ ಶೇ. 85ರಿಂದ 90ರಷ್ಟು ಇಳುವರಿ ಪಡೆಯಲು ಅವಕಾಶವಿದೆ ಎಂದು ತಿಳಿಸಿದರು.
ಮುಂದಿನ ಕೆಲ ದಿನಗಳಲ್ಲಿ ಕೃಷಿ ವಿಜ್ಞಾನ ಕೇಂದ್ರದಿಂದ ನೇರವಾಗಿ ಬಿತ್ತನೆ ಮಾಡಲು ಸಾಧ್ಯವಿರುವ ಡ್ರಮ್ ಸೀಡರ್ ಬಳಕೆ ಪ್ರಾತ್ಯಕ್ಷಿಕೆಗಳನ್ನು ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಕೈಗೊಳ್ಳಲು ಸಹ ತಂಡವು ಸಲಹೆ ನೀಡಿದೆ. ಒಟ್ಟಾರೆ ಭತ್ತ ಹಾನಿಯಾಗಿರುವ ಪ್ರದೇಶದಲ್ಲಿ ಭತ್ತವನ್ನೆ ಬೆಳೆಯಲು ಇಚ್ಚಿಸುವ ರೈತರಿಗೆ ಇನ್ನೂ ಕಾಲಾವಕಾಶವಿದ್ದು, ಸಸಿಗಳ ಅಥವಾ ಬೀಜದ ವ್ಯವಸ್ಥೆಯನ್ನು ಮಾಡಿಕೊಂಡು ಭತ್ತದ ಬೆಳೆಯನ್ನು ಪುನಃ ನಾಟಿ ಮಾಡಬಹುದೆಂದು ತಂಡವು ಸಲಹೆ ನೀಡಿದೆ.
ಒಟ್ಟು ಮೂರು ತಾಲ್ಲೂಕಿನಲ್ಲಿ 12 ಗ್ರಾಮಗಳಿಗೆ ತಂಡ ಭೇಟಿ ನೀಡಿ, ರೈತರೊಂದಿಗೂ ಚರ್ಚೆ ನಡೆಸಿತು. ಸಮೀಕ್ಷೆಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ಡಾ| ಉಮೇಶ ಬಾರಿಕರ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಡಾ| ಹೊನ್ನಳ್ಳಿ, ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್, ಶಹಾಪುರ ಮತ್ತು ಸುರಪುರ, ವಡಗೇರಾ ಹಾಗೂ ಕಕ್ಕೇರಾ ಸಹಾಯಕ ಕೃಷಿ ನಿರ್ದೇಶಕರು ಕೃಷಿ ಅಧಿಕಾರಿಗಳು ಅಲ್ಲದೇ ಆತ್ಮ ಯೋಜನೆ ತಂತ್ರಜ್ಞಾನ ವ್ಯವಸ್ಥಾಪಕರು ಸಹ ಭಾಗವಹಿಸಿದ್ದರು.