Advertisement
ಗ್ರಾಮದ ಕುರಿ ಗಾಹಿ ಬಸವಲಿಂಗಪ್ಪ ಎಂಬುವವರು ತನ್ನ ಕುರಿಮರಿಗಳನ್ನು ಮೇಯಿಸಲು ಹೋಗಿದ್ದ ವೇಳೆ ನದಿ ದಡಕ್ಕೆ ಕುಳಿತು ಊಟ ಸೇವಿಸಿ ನೀರು ಕುಡಿಯಲು ನದಿಗೆ ಇಳಿದಿದ್ದ ಸಂದರ್ಭದಲ್ಲಿ 2 ಮೊಸಳೆಗಳು ದಾಳಿ ನಡೆಸಿ ಒಂದು ಕಾಲು ಮತ್ತು ಕೈ ತಿಂದಿದ್ದವು, ಘಟನೆಯಲ್ಲಿ ರಕ್ತ ಸ್ರಾವವಾಗಿದ್ದರಿಂದ ಕುರಿಗಾಹಿ ಮೃತಪಟ್ಟಿದ್ದ.
Related Articles
Advertisement
ಪೊಲೀಸರು, ಆರ್‌ಎಫ್‌ಓ ವರದಿ ಪ್ರಕಾರ ನೀರು ಕುಡಿಸಲು ತೆರಳಿದಾಗ ಘಟನೆ ನಡೆದಿರುವುದು ಗೊತ್ತಾಗಿದೆ. ನೀರಿನ ಹತ್ತಿರ ಹೋದಾಗ ಮೊಸಳೆ ದಾಳಿಯಾಗಿದೆ. ನೀರಿನಿಂದ ಆಚೆ ಬಂದು ದಾಳಿ ಮಾಡಿಲ್ಲ. ಇದು ಆಕಸ್ಮಿಕ ಅಪಘಾತ. ಎಲ್ಲರೂ ನೀರಿರುವ ಕಡೆ ಎಚ್ಚರಿಕೆಯಿಂದ ಇರಬೇಕು. ಅಗತ್ಯ ಕ್ರಮ ವಹಿಸಲು ನಿರ್ದೇಶಿಸಲಾಗಿದೆ ಎಂದು ಹೇಳಿ ಜಾರಿಕೊಂಡು, ಜಾಗೃತಿ ಮೂಡಿಸುವುದು ನಮ್ಮ ಇಲಾಖೆ ಕರ್ತವ್ಯವಾಗಿದೆ ಎಂದಿದ್ದರು.
5ಕ್ಕೂ ಹೆಚ್ಚು ಮೊಸಳೆಗಳಿರುವ ಭೀತಿ: ಗೂಡುರು ನದಿದಡದಲ್ಲಿ ಸುಮಾರು 5ಕ್ಕೂ ಹೆಚ್ಚು ಮೊಸಳೆಗಳಿವೆ ಎನ್ನಲಾಗಿದ್ದು, ಸುತ್ತಲಿನ ಗ್ರಾಮಸ್ಥರಲ್ಲಿ ಭೀತಿ ಎದುರಾಗಿದೆ. ಗ್ರಾಮಸ್ಥರು ದನ-ಕರು, ಕುರಿಗಳಿಗೆ ನೀರು ಕುಡಿಸುವುದಕ್ಕೂ ಭಯದ ವಾತಾವರಣ ನಿರ್ಮಾಣವಾಗಿದೆ. ಮೊಸಳೆಗಳ ಆತಂಕದಿಂದ ಗ್ರಾಮಸ್ಥರು ತಮ್ಮ ಕುರಿಗಳನ್ನು ಮೇಯಿಸಿಲು ತೆರಳದೇ ಮನೆ ಮುಂದೆ ಮೇಯಿಸುತ್ತಿದ್ದಾರೆ.
ಮೊಸಳೆ ಸೆರೆ ಹಿಡಿಯಲು ಆಗ್ರಹ: ನದಿ ದಡದಲ್ಲಿ ಮೊಸಳೆಗಳಿರುವುದು ನಿತ್ಯ ಕಣ್ಣಾರೆ ನೋಡುತ್ತಿದ್ದು, ಆತಂಕ ಸೃಷ್ಟಿಸಿದೆ. ಅನಾಹುತದಿಂದ ಈಗಾಗಲೇ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಇನ್ನು ಅಧಿಕಾರಿಗಳು ಹೆಚ್ಚಿನ ಅನಾಹುತಗಳಿಗೆ ಎಡೆ ಮಾಡದೇ ಮೊಸಳೆಗಳನ್ನು ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮೊಸಳೆ ದಾಳಿಗೆ ಬಲಿಯಾದ ಕುರಿಗಾಯಿ ಬಸಲಿಂಗಪ್ಪ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಮೃತ ಬಸಲಿಂಗಪ್ಪನ ಕುರಿಗಳೊಂದಿಗೆ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿ ಹೋರಾಟ ನಡೆಸಲಾಗುವುದು.•ಉಮೇಶ ಮುದ್ನಾಳ,
ಟೋಕ್ರೆ ಕೋಲಿ ಸಮಾಜದ ಜಿಲ್ಲಾಧ್ಯಕ್ಷ