Advertisement

ಕಾನ್ಸ್‌ಟೇಬಲ್‌ ಸೋಂಕಿನ ಮೂಲವೇ ಗೊತ್ತಿಲ್ಲ

12:11 PM Jun 06, 2020 | Naveen |

ಯಾದಗಿರಿ: ಜಿಲ್ಲೆಯಲ್ಲಿ ಶುಕ್ರವಾರ ಕೋವಿಡ್ ಮಹಾನ್ಪೋಟ ಸಂಭವಿಸಿದ್ದು, ಬರೋಬ್ಬರಿ 74 ಜನರಲ್ಲಿ ಸೋಂಕು ದೃಡವಾಗಿದೆ. ಜಿಲ್ಲೆಯಲ್ಲಿ ಈವರೆಗೆ 299 ಇದ್ದ ಸೋಂಕಿತರ ಸಂಖ್ಯೆ 373ಗೆ ಏರಿಕೆಯಾಗಿದೆ. ಗುರುವಾರ ಒಬ್ಬ ಸೋಂಕಿತರು ಪತ್ತೆಯಾಗದಿದ್ದರಿಂದ ಜನರಲ್ಲಿ ಸ್ವಲ್ಪ ನೆಮ್ಮದಿ ತಂದಿತ್ತು, ಇದೀಗ ಒಮ್ಮೆ 10 ವರ್ಷದೊಳಗಿನ 4 ಮಕ್ಕಳು 5 ವರ್ಷದ ಬಾಲಕಿ ಪಿ-4396, ಇಬ್ಬರು 8 ವರ್ಷದ ಬಾಲಕಿಯರಾದ ಪಿ- 4407 ಮತ್ತು ಪಿ- 4447 ಹಾಗು 6 ವರ್ಷದ ಬಾಲಕ 4452 ಸೇರಿದಂತೆ 14 ಜನ ಅಪ್ರಾಪ್ತ ವಯಸ್ಕರು ಸೋಂಕಿಗೆ ತುತ್ತಾಗಿದ್ದಾರೆ.

Advertisement

ಇನ್ನೊಂದೆಡೆ ಸೋಂಕು ಸಮುದಾಯಕ್ಕೆ ವ್ಯಾಪಿಸುತ್ತಿದೆಯೇ ಎನ್ನುವ ಆತಂಕ ಎದುರಾಗಿದ್ದು, 29 ವರ್ಷದ ಪುರುಷ ಸೋಂಕಿತ ಪಿ- 4446 ಗೆ ಸೋಂಕು ದೃಢವಾಗಿದ್ದು, ಈತ ಜಿಲ್ಲೆಯ ಶಹಾಪುರ ನಗರ ಠಾಣೆ ಕಾನ್ಸ್‌ಟೇಬಲ್‌ ಆಗಿದ್ದು, ಸೋಂಕಿನ ಮೂಲವೇ ಗೊತ್ತಾಗಿಲ್ಲ. ಯಾರ ಸಂಪರ್ಕದಿಂದ ಸೋಂಕು ತಗುಲಿದೆ ಎನ್ನುವುದನ್ನು ಪತ್ತೆ ಹಚ್ಚಲಾಗುತ್ತಿದೆ. ಸದ್ಯ ಹೋಂ ಕ್ವಾರಂಟೈನ್‌ನಲ್ಲಿರುವ ಮಾಹಿತಿ ಲಭ್ಯವಾಗಿದೆ. ಒಂದಂಕಿಗೆ ಇಳಿದಿದ್ದ ಸೋಂಕಿತರ ಸಂಖ್ಯೆ ಏಕಾಏಕಿ 74ಕ್ಕೆ ಏರಿಯಾಗಿದ್ದು, ಇನ್ನೂ 6 ಸಾವಿರಕ್ಕೂ ಹೆಚ್ಚು ಜನರ ವರದಿ ಬರುವುದು ಬಾಕಿ ಇದೆ. ಇನ್ನು ಎಷ್ಟು ಜನರಲ್ಲಿ ಮಹಾಮಾರಿ ಪತ್ತೆಯಾಗಲಿದೆಯೋ ಎನ್ನುವ ಭಯ ಆವರಿಸಿದೆ.

ಸರ್ಕಾರದ ಮಾರ್ಗಸೂಚಿಗನುಗುಣವಾಗಿ ಜಿಲ್ಲಾಡಳಿತ ಜಿಲ್ಲೆಯ 200ಕ್ಕೂ ಹೆಚ್ಚಿನ ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಗಳಲ್ಲಿದ್ದ 10 ಸಾವಿರಕ್ಕೂ ಹೆಚ್ಚು ಜನರನ್ನು ಹೋಂ ಕ್ವಾರಂಟೈನ್‌ಗೆ ಕಳುಹಿಸಿದೆ. ಇತ್ತೀಚೆಗಷ್ಟೇ ಮಹಾರಾಷ್ಟ್ರದಿಂದ ರೈಲು ಮೂಲಕ ಆಗಮಿಸುತ್ತಿರುವ ವಲಸಿಗರನ್ನು 35 ಸಾಂಸ್ಥಿಕ ಕ್ವಾರಂಟೈನ್‌ಗಳಲ್ಲಿ 1173 ಜನರನ್ನು ಇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next