Advertisement

ಯಾದಗಿರಿ; ಮತ್ತೆ 16 ಜನರಲ್ಲಿ ವಕ್ಕರಿಸಿದ ಸೋಂಕು

01:22 PM May 27, 2020 | sudhir |

ಯಾದಗಿರಿ: ಜಿಲ್ಲೆಗೆ ಕೋವಿಡ್ ನಂಜು ಎಡೆಬಿಡದೆ ಕಾಡುತ್ತಿದ್ದು ಬುಧವಾರ ಮತ್ತೆ 16 ಜನರಲ್ಲಿ ಸೋಂಕು ದೃಢವಾಗಿದೆ.

Advertisement

ಮಂಗಳವಾರ ದ ವರೆಗೆ 140 ಇದ್ದ ಸೋಂಕಿತರಲ್ಲಿ 9 ಜನ ಗುಣಮುಖವಾಗಿ ಬಿಡುಗಡೆಯಾಗಿದ್ದು ಕೊಂಚ ಧೈರ್ಯ ನೀಡಿತ್ತು, ಈ ಮಧ್ಯೆಯೇ ಮತ್ತೆ ಸೋಂಕು ಪತ್ತೆಯಾಗಿದೆ.

ವಿವಿಧ ಕ್ವಾರಂಟೈನ್ ಕೇಂದ್ರಗಳಲ್ಲಿದ್ದ 1 ವರ್ಷದ ಬಾಲಕಿ ಪಿ- 2304 ಸೇರಿದಂತೆ 5 ವರ್ಷದೊಳಗಿನ ಪಿ- 2296, ಪಿ- 2300, ಪಿ- 2302 ಸೇರಿದಂತೆ16 ಜನರು ಸೋಂಕಿಗೆ ತುತ್ತಾಗಿದ್ದು ಸೋಂಕಿತರ ಸಂಖ್ಯೆ 147 ಗೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿರುವ 147 ಜನರಿದ್ದು, ದ್ವಿತೀಯ ಸಂಪರ್ಕಕ್ಕೆ ಬಂದಿರುವ 954 ಜನರಿದ್ದಾರೆ.

ಹೊರ ರಾಜ್ಯದಿಂದ ಜಿಲ್ಲೆಗ ಆಗಮಿಸಿದ 14648 ಜನರನ್ನು 223 ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next