ಯಾದಗಿರಿ: ರಾಜ್ಯದಲ್ಲಿ ನೆರೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶೀಘ್ರ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಎದುರು ಧರಣಿ ಸತ್ಯಾಗ್ರಹ ನಡೆಸಿದರು.
ಕೇಂದ್ರ ಸರ್ಕಾರ 5 ಸಾವಿರ ಕೋಟಿ ರೂ. ಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮರಿಗೌಡ ಪಾಟೀಲ ಹುಲ್ಕಲ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ 22 ಜಿಲ್ಲೆಗಳ 103 ತಾಲೂಕಗಳಲ್ಲಿ ನೆರೆ ಬಂದು ಬೆಳೆ ನಷ್ಟ, ವಿದ್ಯುತ್ ಸಂಪರ್ಕ ಕಡಿತವಾಗಿ ಜನರ ಬದುಕು ಕತ್ತಲೆಯಲ್ಲಿ ಕಳೆಯುವಂತಾಗಿದೆ. ನೆರೆ ಹಾನಿಯಿಂದ 88 ಜನರು ಜೀವ ಕಳೆದುಕೊಂಡಿದ್ದಾರೆ. 10 ಜನರು ನಾಪತ್ತೆಯಾಗಿದ್ದಾರೆ ಎಂದರು.
7.90 ಲಕ್ಷ ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಯಾಗಿದೆ. 2,37 ಲಕ್ಷ ಮನೆ ಹಾನಿ, 1.70 ಲಕ್ಷ ಮನೆಗಳು ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. 35,000 ಕಿಮೀ ರಸ್ತೆಗಳು, 2828 ಬ್ರಿಜ್ ಕಂ ಬ್ಯಾರೆಜ್‌ಗಳಿಗೆ ಹಾನಿಯಾಗಿದೆ. 57000 ಸಾವಿರ ವಿದ್ಯುತ್ ಕಂಬಗಳು ಮತ್ತು 14076 ವಿದ್ಯುತ್ ಪರಿವರ್ತಕಗಳು 3724 ವಿದ್ಯುತ್ ಲೈನ್‌ಗಳು ನಾಶವಾಗಿವೆ. ಸಾವಿರಕ್ಕಿಂತ ಅಧಿಕ ಕಾಫಿ ಎಸ್ಟೇಟ್‌ಗಳು ನಾಶವಾಗಿವೆ. ತ್ವರಿತಗತಿಯಲ್ಲಿ ಕಾಮಗಾರಿ ಕೈಗೊಳ್ಳಲು ಕೇಂದ್ರ ಸರ್ಕಾರ ಕೂಡಲೇ 5 ಸಾವಿರ ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ವಿಧಾನ ಪರಿಷತ್ತು ಮಾಜಿ ಸದಸ್ಯ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಮಾತನಾಡಿ, ರಾಜ್ಯದಲ್ಲಿ ಕಂಡು ಕೆಳರಿಯದ ಭೀಕರ ನೆರೆಯಿಂದಾಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಕೇಂದ್ರ ರಾಜ್ಯ ಸರ್ಕಾರ ಯಾವುದೇ ರೀತಿಯ ಪರಿಹಾರ ನೀಡದೇ ಕಾಲ ಕಳೆಯುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ನಿರ್ಮಲ್ ಸೀತಾರಾಮನ್ ಬಂದು ಪ್ರವಾಹ ಪರಿಸ್ಥಿತಿ ಅವಲೋಕಿಸಿದ್ದಾರೆ. ಅಲ್ಲದೇ ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡಿ ಹೋಗಿದ್ದಾರೆ. ಆದರೆ ಇಲ್ಲಿಯವರೆಗೆ ಪರಿಹಾರ ಹಣ ಘೊಷಣೆ ಮಾಡಿಲ್ಲ ಎಂದು ಆರೋಪಿಸಿದರು.
ಬಿಜೆಪಿ ದೇಶದ ಜನರಿಗೆ ಸುಳ್ಳು ಅಶ್ವಾಸನೆ ಕೊಟ್ಟು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದೆ. ಈಗ ಸುಳ್ಳು ಭರವಸೆ ಕೊಟ್ಟು ಕಾಲ ಕಳೆಯುತ್ತಿದೆ. ದೇಶಕ್ಕೆ ಬೇಕಾಗಿರುವುದು ಸಳ್ಳು ಅಶಾಸ್ವನೆಗಳಲ್ಲ. ಬೇಕಾಗಿರುವುದು ಬಲಿಷ್ಠವಾದ ಅರ್ಥ ವ್ಯವಸ್ಥೆ ರೂಪಿಸುವ ಯೋಜನೆಗಳು ಎಂದು ಹೇಳಿದರು.
ಶರಣಗೌಡ ಮಲಾØರ, ಬಾಷುಮೀಯಾ ವಡಿಗೇರಾ, ಶ್ರೀನಿವಾಸರೆಡ್ಡಿ ಕಂದಕೂರ, ಮಲ್ಲಣ್ಣ ದಾಸನಕೇರಿ, ಲಾಯಕ್ ಹುಸೇನ್ ಬಾದಲ್, ವಿಶ್ವನಾಥ ನೀಲಹಳ್ಳಿ, ಭೀಮರಾಯ ಠಾಣಗುಂದಿ, ಮಂಜೂಳ ಗೂಳಿ, ಮಾಣಿಕರೆಡ್ಡಿ ಕುರಕುಂದಾ, ಮಹಿಪಾಲರೆಡ್ಡಿ ಹತ್ತಿಕುಣಿ, ಜಿಪಂ ಮಾಜಿ ಅಧ್ಯಕ್ಷ ಬಸರೆಡ್ಡಿ ಮಾಲಿಪಾಟೀಲ, ಸಂಜಯ ಮುಂಡರಗಿ ಮಾತನಾಡಿದರು.
ಸುದರ್ಶನ ನಾಯಕ, ಚನ್ನಕೇಶವಗೌಡ ಬಾಣತಿಹಾಳ, ಶರಣಪ್ಪ ಕೂಲುರ, ಹಣಮಂತ ಅಚ್ಚೋಲಾ, ರಾಘವೇಂದ್ರ ಮಾನಸಗಲ್, ಭೀಮರೆಡ್ಡಿ ಚಟ್ಟನಳ್ಳಿ, ಶಿವರಾಜ ಸಾಹು, ಮರೆಪ್ಪ ಬಿಳ್ಹಾರ, ಲಕ್ಷ್ಮಣ ರಾಠೊಡ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.