ಯಾದಗಿರಿ: ಮನೆಯಲ್ಲಿ ಆಟವಾಡಿಕೊಂಡಿದ್ದ ಇಬ್ಬರು ಮಕ್ಕಳು ತಿಳಿಯದೆ ಕ್ರಿಮಿನಾಶಕ ಕುಡಿದ ಪರಿಣಾಮವಾಗಿ ಮೃತರಾಗಿರುವ ಘಟನೆ ವಡಗೇರ ತಾಲೂಕಿನ ಕೊಡಾಲ್ ಗ್ರಾಮದಲ್ಲಿ ನಡೆದಿದೆ.
ಖೈರುನ್ (2 ವರ್ಷ) ಹಾಗೂ ಅಪ್ಸಾನ (4 ತಿಂಗಳು) ಮೃತ ಮಕ್ಕಳು.
ತಾಯಿ ಅಡುಗೆ ಮಾಡುತ್ತಿದ್ದ ವೇಳೆ ಮಕ್ಕಳು ಮನೆಯಲ್ಲೇ ಕ್ರಿಮಿನಾಶಕ ಕುಡಿದಿದ್ದಾರೆ ಎನ್ನಲಾಗಿದೆ. ಅಸ್ವಸ್ಥರಾದ ಮಕ್ಕಳನ್ನು ಆಸ್ಪತ್ರೆಗೆ ಸೇರಿಸುವ ಮಾರ್ಗ ಮಧ್ಯಯೇ ಮೃರಾಗಿದ್ದಾರೆ.
ಮಕ್ಕಳು ವಿಷ ಸೇವಿಸಿದ್ದಾರೆ ಎಂದು ತಿಳಿದ ತಾಯಿ ಶಹೇನಾಜ್ ಕೂಡ ಭಯಬೀತರಾಗಿ ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದಾರೆ. ಸದ್ಯ ಶಹನಾಜ್ ಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗಂಡ ಜಮೀನು ಕೆಲಸಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.