Advertisement

ಯಾದಗಿರಿಯಲ್ಲಿ 28 ಬಸ್‌ಗಳ ಸಂಚಾರ: ದೊರೆಯದ ಸ್ಪಂದನೆ

12:49 PM May 20, 2020 | Naveen |

ಯಾದಗಿರಿ: ಗಡಿ ಜಿಲ್ಲೆಯಲ್ಲಿ ಮಂಗಳವಾರ ಒಟ್ಟು 28 ಬಸ್‌ ಸಂಚಾರ ಆರಂಭವಾಗಿದ್ದು, ಮೊದಲ ದಿನ ಪ್ರಯಾಣಿಕರಿಂದ ಪ್ರಯಾಣಕ್ಕೆ ನಿರೀಕ್ಷಿತ ಸ್ಪಂದನೆ ದೊರೆಯದಿರುವುದು ಕಂಡು ಬಂತು. 50ಕ್ಕೂ ಹೆಚ್ಚು ದಿನಗಳಿಂದ ಸಾರಿಗೆ ಸಂಪರ್ಕ ಸಂಪೂರ್ಣ ಬಂದ್‌ ಆಗಿದ್ದರಿಂದ ಬಸ್‌ ನಿಲ್ದಾಣಗಳನ್ನು ಸೋಮವಾರ ಸಂಜೆಯೇ ಸ್ವತ್ಛಗೊಳಿಸಲಾಗಿತ್ತು.

Advertisement

ಪ್ರಯಾಣಿಕರು ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರದಲ್ಲಿ ಅಧಿಕಾರಿಗಳು ಕಾಳಜಿ ವಹಿಸಿದ್ದು, ಕಡ್ಡಾಯವಾಗಿ ಮಾಸ್ಕ್ ಧರಿಸುವ ಫಲಕ ಅಳವಡಿಸಿದ್ದಾರೆ. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಯಾದಗಿರಿ ವಿಭಾಗದ ಬಸ್‌ಗಳು ರವಿವಾರ ಹೊರತುಪಡಿಸಿ ಪ್ರಥಮ ಹಂತದಲ್ಲಿ 100 ಬಸ್‌ (ಶೇ.30ರಷ್ಟು) ಕಾರ್ಯಾಚರಣೆ ಮಾಡಲಿವೆ. ಹಂತ ಹಂತವಾಗಿ ಹೆಚ್ಚಿನ ಸಾರಿಗೆ ಬಸ್‌ಗಳನ್ನು ಪುನಾರಂಭಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ನಿತ್ಯ ಬೆಳಗ್ಗೆ 7:00ರಿಂದ ಸಂಜೆ 7:00ರ ವರೆಗೆ ಅಥವಾ ನಿಗದಿತ ಸ್ಥಳ ತಲುಪುವವರೆಗೆ ಬಸ್‌ಗಳು ಕಾರ್ಯಾಚರಣೆ ಮಾಡಲಿವೆ. ಮೊದಲ ದಿನವಾದ ಮಂಗಳವಾರ ಸಂಜೆ 5:30ಕ್ಕೆ ಕೊನೆ ಬಸ್‌ ಜಿಲ್ಲಾ ವ್ಯಾಪ್ತಿಯಲ್ಲಿಯೇ ಸಂಚರಿಸಿದೆ. ಒಟ್ಟು 28 ಬಸ್‌ಗಳು ಜಿಲ್ಲೆಯಲ್ಲಿ ಕಾರ್ಯಾಚರಣೆ ಮಾಡಿವೆ. ಜಿಲ್ಲಾ ಕೇಂದ್ರದಿಂದ ಶಹಾಪುರ, ಸುರಪುರ, ಗುರುಮಠಕಲ್‌, ಕಲಬುರಗಿ, ಸೇಡಂಗೆ ಸಂಚಾರ ಆರಂಭಿಸಲಾಗಿತ್ತು. ಇನ್ನು ರಾಯಚೂರು, ವಿಜಯಪುರ, ಹುಬ್ಬಳ್ಳಿ, ದಾವಣಗೆರೆ, ಧಾರವಾಡದ ವರೆಗೆ ಬಸ್‌ ಸಂಚಾರ ಬುಧವಾರ ಆರಂಭವಾಗುವ ಸಾಧ್ಯತೆಗಳಿವೆ.ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್‌ ವ್ಯವಸ್ಥೆ ಮಾಡಲಾಗುತ್ತಿದೆ. ಒಂದು ವೇಳೆ ಪ್ರಯಾಣಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾದರೆ ಅಂತರ ಜಿಲ್ಲಾ ಪ್ರಯಾಣ ಅನುಮಾನ ಎನ್ನಲಾಗುತ್ತಿದೆ.ರಾಜ್ಯ ರಾಜಧಾನಿ ಬೆಂಗಳೂರಿಗೆ ಮೇ 20ರಿಂದ ಯಾದಗಿರಿ, ಶಹಾಪುರ ಹಾಗೂ ಸುರಪುರದಿಂದ ಬೆಳಗ್ಗೆ 7:00ರಿಂದ ಬಸ್‌ ಸಂಚಾರ ಆರಂಭವಾಗಲಿದ್ದು, ಅಂತರ ಜಿಲ್ಲೆಗೆ ಪ್ರಯಾಣಿಸುವ ಜನರ ಬೇಡಿಕೆ ಮೇಲೆ ಸಂಚಾರ ನಿರ್ಧಾರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next