Advertisement

ಮತ್ತೆ ಕಲ್ಯಾಣ ಯಾತ್ರೆ ಕಾರ್ಯಕ್ರಮ

01:06 PM Aug 17, 2019 | Naveen |

ಯಾದಗಿರಿ: ನಾಡಿನ ಹಿರಿಯ ಮಠಾಧಿಧೀಶರಾದ ಸಾಣೇಹಳ್ಳಿ ಶ್ರೀ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಬಸವಾದಿ ಶರಣರ ವಿಚಾರಗಳನ್ನು ಜನತೆಗೆ ತಲುಪಿಸುವ ಮೂಲಕ ಸಮಾಜದಲ್ಲಿ ಸಮಾನತೆ, ಸಾಮರಸ್ಯ ಮೂಡಿಸುವ ಪರಿಕಲ್ಪನೆ ಹಿನ್ನೆಲೆಯಲ್ಲಿ ಮತ್ತೆ ಕಲ್ಯಾಣ ಯಾತ್ರೆ ಕೈಗೊಂಡಿದ್ದಾರೆ. ಅದು ನಗರಕ್ಕೆ ಆಗಷ್ಟ 18ರಂದು ಬೆಳಗ್ಗೆ ಆಗಮಿಸಲಿದೆ ಎಂದು ಕಾರ್ಯಕ್ರಮದ ಸಹಮತ ವೇದಿಕೆಯ ಜಿಲ್ಲೆಯ ನೇತೃತ್ವ ವಹಿಸಿಕೊಂಡಿರುವ ಗುರುಮಠಕಲ್ ಖಾಸಾ ಮಠದ ಪೀಠಾಧಿಪತಿ ಪೂಜ್ಯ ಶಾಂತವೀರ ಸ್ವಾಮೀಜಿ ತಿಳಿಸಿದರು.

Advertisement

ಶುಕ್ರವಾರ ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಣೇಹಳ್ಳಿ ಶ್ರೀಗಳು ರವಿವಾರ ಬೆಳಗ್ಗೆ 11:00 ಘಂಟೆಗೆ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಗರದ ಎಲ್ಲಾ ಕಾಲೇಜು ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ ನಡೆಸುವರು. ಕಾರ್ಯಕ್ರಮದಲ್ಲಿ ಕಲಬುರಗಿ ಪ್ರಾಧ್ಯಾಪಕಿ ಡಾ| ಮಿನಾಕ್ಷಿ ಬಾಳಿ ಹಾಗೂ ವಿಶ್ವಾರಾಧ್ಯ ಸತ್ಯಂಪೇಠ ಉಪಸ್ಥಿತರಿರುವರು.

ಸಂಜೆ 4:00 ಘಂಟೆಗೆ ನಗರದ ಹಳೆ ಪ್ರವಾಸಿ ಮಂದಿರದಿಂದ ಶ್ರೀಗಳೊಂದಿಗೆ ಎಲ್ಲಾ ಸಮಾಜದ ಮುಖಂಡರು ಹಾಗೂ ಜನರೊಂದಿಗೆ ಬಸವೇಶ್ವರ ಕಲ್ಯಾಣ ಮಂಟಪದವರೆಗೆ ಸಾಮರಸ್ಯ ನಡಿಗೆ ನಡೆಸಲಾಗುವುದು ಎಂದು ತಿಳಿಸಿದರು.

ಸಂಜೆ 5:00 ಘಂಟೆಗೆ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕ ಸಮಾವೇಶ ಕಾರ್ಯಕ್ರಮ ಜರುಗವುದು. ಸಮಾರಂಭದ ನೇತೃತ್ವವನ್ನು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯರು ವಹಿಸಿ ಆಶೀರ್ವಚನ ನೀಡಲಿದ್ದಾರೆ. ಅನುಭಾವ ಚಿಂತನೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ| ರಂಗರಾಜ ವನದುರ್ಗ ಸಮಕಾಲಿನ ಸಂದರ್ಭದಲ್ಲಿ ಶರಣರ ಪ್ರಸ್ತುತತೆ ಕುರಿತು ಮಾತನಾಡಲಿದ್ದಾರೆ.

ಶರಣೆ ಸುಮಂಗಲಾ ಚಂದ್ರಕಾಂತ ಅಂಗಡಿ ಶರಣರ ಚಿಂತನೆಗಳು ವಿಷಯದ ಬಗ್ಗೆ ಉಪನ್ಯಾಸ ನೀಡುವರು, ಸಮಾರಂಭದ ಅಧ್ಯಕ್ಷತೆಯನ್ನು ಗುರುಮಠಕಲ್ ಖಾಸಾ ಮಠದ ಪೀಠಾಧಿಪತಿ ಶಾಂತವೀರ ಸ್ವಾಮೀಜಿ ವಹಿಸುವರು, ರಾತ್ರಿ 8:00 ಘಂಟೆಗೆ ಶಿವಸಂಚಾರ ಸಾಣೇಹಳ್ಳಿ ಕಲಾವಿದರಿಂದ ಮೋಳಿಗೆ ಮಾರಯ್ಯ ನಾಟಕ ಪ್ರದರ್ಶನ ಮಾಡಲಿದ್ದಾರೆ ಎಂದು ತಿಳಿಸಿದರು.

Advertisement

ಮಾಜಿ ಶಾಸಕ ಡಾ| ವೀರಬಸವಂತರೆಡ್ಡಿ ಮುದ್ನಾಳ, ಚನ್ನಾರೆಡ್ಡಿ ಪಾಟೀಲ ತುನ್ನೂರ, ಸೋಮಶೇಖರ ಮಣ್ಣೂರ, ವೀರಣ್ಣ ರ್ಯಾಕಾ, ಇಂದೂದರ್‌ ಸಿನ್ನೂರ, ವಿಶ್ವನಾಥರೆಡ್ಡಿ ಗೊಂದೆಡಗಿ, ತಿಪ್ಪಾರೆಡ್ಡಿ ಮಾದ್ವಾರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next