Advertisement
ನಿಷೇಧಾಜ್ಞೆ ಅವ ಧಿಯಲ್ಲಿ ಜಿಲ್ಲಾದ್ಯಂತ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ದಿನಬಳಕೆ ವಸ್ತುಗಳಾದ ಹಾಲು, ಹಣ್ಣು, ತರಕಾರಿ, ಪೆಟ್ರೋಲ್ ಪಂಪ್ ಹಾಗೂ ಇನ್ನಿತರ ಅವಶ್ಯಕ ಅಂಗಡಿಗಳು ಅಲ್ಲದೇ ಕೃಷಿ ಹಾಗೂ ತೋಟಗಾರಿಕೆಗೆ ಸಂಬಂಧಿಸಿದ ರಸಗೊಬ್ಬರ, ಯಂತ್ರೋಪಕರಣ, ಬಿಡಿಭಾಗದ ಅಂಗಡಿಗಳು ತೆರೆದಿರುತ್ತವೆ. ಬ್ಯಾಂಕ್, ಅಂಚೆ ಕಚೇರಿ, ಬಿಎಸ್‌ಎನ್‌ಎಲ್ ಕಚೇರಿ ಕಾರ್ಯನಿರ್ವಹಣೆ, ಆಸ್ಪತ್ರೆ, ಔಷ ಧಿ, ಪಶು ಆಸ್ಪತ್ರೆ, ಇತ್ಯಾದಿ ತುರ್ತು ಸೇವೆಗಳಿಗೆ ಆದೇಶ ಅನ್ವಯವಾಗಲ್ಲ. ಯಾವುದೇ ಸಭೆ, ಸಮಾರಂಭ, ಜಾತ್ರೆ, ಸಂತೆಗೆ ನಿರ್ಬಂಧಿ ಸಲಾಗಿದೆ. ಎಲ್ಲ ತರಹದ ಆಹಾರ ಧಾನ್ಯಗಳ ಸಂಸ್ಕರಣ ಘಟಕ, ಕಾರ್ಖಾನೆಗಳಿಗೆ ಆದೇಶ ಅನ್ವಯವಾಗುವುದಿಲ್ಲ.ಬಾರ್, ರೆಸ್ಟೋರೆಂಟ್, ಲಿಕ್ಕರ್ ಔಟ್ ಲೆಟ್, ಹೋಟೆಲ್, ಬಟ್ಟೆ ಅಂಗಡಿ, ಬಂಗಾರದ ಅಂಗಡಿ ಹಾಗೂ ಖಾನಾವಾಳಿ, ಪಾನ್ ಶಾಪ್, ಟೀ ಸ್ಟಾಲ್‌ಗಳನ್ನು ತೆರೆಯುವುದನ್ನು ನಿಷೇಧಿಸಲಾಗಿದ್ದು ಕೇವಲ (ಪಾರ್ಸಲ್ ಮತ್ತು ಹೋಂ ಡೆಲಿವರಿಗೆ ಅವಕಾಶವಿದೆ). ಆಟೋ, ಟ್ಯಾಕ್ಸಿ, ಖಾಸಗಿ ವಾಹನ ಸಂಚಾರಕ್ಕೆ ಅಗತ್ಯ ಮತ್ತು ತುರ್ತು ಪರಿಸ್ಥಿತಿ ಹೊರತುಪಡಿಸಿ ಉಳಿದ ವೇಳೆ ನಿರ್ಬಂಧಿಸಲಾಗಿದೆ.
Advertisement
ಯಾದಗಿರಿ ಒಂದು ವಾರ ಲಾಕ್‌ಡೌನ್ ಘೋಷಣೆ
11:39 AM Jul 15, 2020 | Suhan S |
Advertisement
Udayavani is now on Telegram. Click here to join our channel and stay updated with the latest news.