Advertisement

ಅಬ್ಬೆತುಮಕೂರು ಜಾತ್ರೆಗೆ ಭರದ ಸಿದ್ಧತೆ

06:31 PM Feb 26, 2020 | Naveen |

ಯಾದಗಿರಿ: ತಾಲೂಕಿನ ಸುಕ್ಷೇತ್ರ ಅಬ್ಬೆತುಮಕೂರಿನಲ್ಲಿ ಫೆ.28ರಂದು ನೆರವೇರಲಿರುವ ವಿಶ್ವಾರಾಧ್ಯರ ರಥೋತ್ಸವದ ಸಿದ್ಧತೆಗಳನ್ನು ಮಠದ ಪೀಠಾಧಿಪತಿ ಡಾ| ಗಂಗಾಧರ ಮಹಾಸ್ವಾಮಿಗಳ ನೇತೃತ್ವದಲ್ಲಿ ಭರದಿಂದ ಸಾಗಿ ಅಂತಿಮ ಹಂತದಲ್ಲಿವೆ ಎಂದು ಡಾ| ಸುಭಾಶ್ಚಂದ್ರ ಕೌಲಗಿ ತಿಳಿಸಿದ್ದಾರೆ.

Advertisement

ವಿಶ್ವಾರಾಧ್ಯರ ಪುರಾಣ ಈಗಾಗಲೇ ಪ್ರಾರಂಭವಾಗಿದೆ. ಮಲ್ಲಿಕಾರ್ಜುನ ಶಾಸ್ತ್ರಿ ಐನಾಪುರ ಅವರ ಸಾಹಿತ್ಯ ಸೇವೆಯೊಂದಿಗೆ ಶ್ರೀ ವಿಶ್ವರಾಧ್ಯರ ಪುರಾಣ 11 ದಿನಗಳ ಕಾಲ ನಡೆಯಲಿದೆ. ಮಠಕ್ಕೆ ಸುಣ್ಣ ಬಣ್ಣ ಹಚ್ಚುವ ಕಾರ್ಯ ಪೂರ್ಣಗೊಂಡಿದೆ. ಜಾತ್ರೆಗಾಗಿ ಬೃಹತ್‌ ಪೆಂಡಾಲ್‌ ಹಾಕುವ ಕಾರ್ಯ ಕೊನೆ ಹಂತದಲ್ಲಿದೆ. ದಾಸೋಹ ಕಾರ್ಯಕ್ಕಾಗಿ ವಿವಿಧ ಬಗೆಯ ದವಸ ಧಾನ್ಯಗಳನ್ನು ಸ್ವತ್ಛಗೊಳಿಸುವ ಕಾರ್ಯ ನಡೆಯುತ್ತಿದೆ. ಮಠದ ಭಕ್ತರು ಜಾತ್ರೆ ಪೂರ್ವ ಸಿದ್ಧತೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಫೆ. 28ರಂದು ಬೆಳಗ್ಗೆ 10:30ಕ್ಕೆ ಪುರಾಣ ಮಹಾ ಮಂಗಲವಾಗಿದೆ. ಅಂದು ಮಧ್ಯಾಹ್ನ 12:30ಕ್ಕೆ ಅಬ್ಬೆ ತುಮಕೂರಿನ ಪಿಠಾಧಿಪತಿ ಡಾ| ಗಂಗಾಧರ ಮಹಾಸ್ವಾಮಿಗಳ ತುಲಾಭಾರ ನಡೆಯಲಿದೆ.

ಸಂಜೆ 6:30ಕ್ಕೆ ಶ್ರೀ ವಿಶ್ವರಾಧ್ಯರ ಭವ್ಯ ರಥೋತ್ಸವ ಸಂಭ್ರಮದಿಂದ ನಡೆಯಲಿದೆ ಎಂದು ಮಾಹಿತಿ ನೀಡಿದರು. ರಾತ್ರಿ 8:00ಕ್ಕೆ ಮಾನವ ಧರ್ಮ ಸಮಾವೇಶ ನಡೆಯಲಿದ್ದು, ಅಬ್ಬೆತುಮಕುರು ಸಿದ್ಧಿ ಪುರುಷ ಶ್ರೀ ವಿಶ್ವಾರಾಧ್ಯರು ಚಲನಚಿತ್ರದ ಚಿತ್ರ ಬಿಡುಗಡೆ ಸಮಾರಂಭವನ್ನು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅಧ್ಯಕ್ಷತೆ ವಹಿಸುವರು.

ಸಮಾವೇಶದಲ್ಲಿ ನಾಡಿನ ಹರ ಗುರು ಚರಮೂರ್ತಿಗಳು, ರಾಜಕೀಯ ಮುತ್ಸದ್ಧಿಗಳು, ಕವಿ ಸಾಹಿತಿಗಳು ಭಾಗವಹಿಸುವರು. ತರುವಾಯ ಖ್ಯಾತ ಚಲನಚಿತ್ರ ನಟ-ನಟಿಯರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next