Advertisement

ಯಾದಗಿರಿ: 9602 ವರದಿ ಬಾಕಿ

06:31 AM Jun 03, 2020 | Team Udayavani |

ಯಾದಗಿರಿ: ನೋವೆಲ್‌ ಕೋವಿಡ್  ವೈರಸ್‌ ಪರೀಕ್ಷೆಗಾಗಿ ಜಿಲ್ಲೆಯಿಂದ ಕಳುಹಿಸಿದ ಮಾದರಿಗಳಲ್ಲಿ ಮಂಗಳವಾರ 5 ಪಾಸಿಟಿವ್‌ ಸೇರಿದಂತೆ ಜೂನ್‌ 2ರವರೆಗೆ ಒಟ್ಟು 290 ವರದಿ ಪಾಸಿಟಿವ್‌ ಬಂದಿವೆ.

Advertisement

ಮಂಗಳವಾರದ 611 ನೆಗೆಟಿವ್‌ ವರದಿ ಸೇರಿ ಈವರೆಗೆ 8074 ಮಾದರಿಗಳ ವರದಿ ನೆಗೆಟಿವ್‌ ಬಂದಿವೆ. 218 ಜನರ ಹೊಸ ಮಾದರಿ ಸೇರಿ 9602 ಜನರ ವರದಿ ಬರಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 765 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 2093 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಜಿಲ್ಲೆಯಲ್ಲಿ 5 ಕಂಟೇನ್ಮೆಂಟ್‌ ಝೋನ್‌ ರಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಹೊಸ ಜಿಲ್ಲಾಸ್ಪತ್ರೆಯಲ್ಲಿ 95 ಜನರನ್ನು ಪತ್ಯೇಕವಾಗಿರಿಸಲಾಗಿದೆ.

ಶಹಾಪುರ ಕೊರೊನಾ ಕೇರ್‌ ಸೆಂಟರ್‌ನಲ್ಲಿ 61 ಜನರನ್ನು, ಸುರಪುರ ಕೊರೊನಾ ಕೇರ್‌ ಸೆಂಟರ್‌ನಲ್ಲಿ 35 ಮತ್ತು ಏಕಲವ್ಯ ಕೋವಿಡ್  ಕೇರ್‌ ಸೆಂಟರ್‌ನಲ್ಲಿ 86 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ. ಜಿಲ್ಲೆಯ 71 ಇನ್‌ ಸ್ಟಿಟ್ಯೂಶನಲ್‌ ಕ್ವಾರಂಟೈನ್‌ ಸೆಂಟರ್ ಗಳಲ್ಲಿ ಒಟ್ಟು 3391 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next