Advertisement

ಯಾದಗಿರಿ: 2000 ಗಡಿ ದಾಟಿದ ಕೋವಿಡ್

10:19 AM Jul 28, 2020 | Suhan S |

ಯಾದಗಿರಿ: ಜಿಲ್ಲೆಯಲ್ಲಿ ಮಹಾಮಾರಿ ಕೋವಿಡ್ ಅಟ್ಟಹಾಸ ಮುಂದುವರಿದಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಎರಡು ಸಾವಿರದ ಗಡಿ ದಾಟಿ 2052ಕ್ಕೆ ತಲುಪಿದೆ. ಸೋಮವಾರ ಮತ್ತೆ 64 ಜನರಿಗೆ ಸೋಂಕು ದೃಢವಾಗಿದೆ.

Advertisement

ಸುರಪುರ ತಾಲೂಕಿನ ರಂಗಂಪೇಟ್‌ ಬಡೆಬಜಾರ್‌ನ 7 ವರ್ಷದ ಬಾಲಕ ಪಿ-105443 ಸೇರಿದಂತೆ ಒಂಬತ್ತು ಜನ ಐಎಲ್‌ಐ ಲಕ್ಷಣವಿರುವ ಜನರು ಸೋಂಕಿಗೆ ತುತ್ತಾಗಿದ್ದಾರೆ. ಇನ್ನುಳಿದಂತೆ ಸೋಂಕು ದೃಢಪಟ್ಟಿರುವ 55 ಜನರ ಸಂಪರ್ಕ ಪತ್ತೆಯಾಗಿಲ್ಲ. ಯಾದಗಿರಿ ನಗರ ಮತ್ತು ಗ್ರಾಮೀಣ ಶಹಾಪುರ ಹಾಗೂ ಸುರಪುರ ತಾಲೂಕಿನ ವಿವಿಧ ಗ್ರಾಮಗಳ ಜನರಿಗೆ ಸೋಂಕು ಹರಡಿದ್ದು 40 ಪುರುಷರು, 24 ಮಹಿಳೆಯರು ಕೊರೊನಾಗೆ ತುತ್ತಾಗಿದ್ದಾರೆ.

ಸೋಮವಾರ 353 ಜನರ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಿದೆ. 230 ಜನರ ವರದಿ ನೆಗೆಟಿವ್‌ ಬಂದಿವೆ. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 3791 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 5505 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಜಿಲ್ಲೆಯಲ್ಲಿ 167 ಕಂಟೈನ್ಮೆಂಟ್‌ ಝೋನ್‌ಗಳನ್ನು ರಚಿಸಲಾಗಿದೆ.

ಹೊಸ ಜಿಲ್ಲಾಸ್ಪತ್ರೆಯಲ್ಲಿ 195 ಜನರನ್ನು ಪತ್ಯೇಕವಾಗಿರಿಸಲಾಗಿದೆ. ಶಹಾಪುರ 63, ಸುರಪುರ 92 ಜನ ಹಾಗೂ ಬಂದಳ್ಳಿ ಏಕಲವ್ಯ ಕೋವಿಡ್ ಕೇರ್‌ ಸೆಂಟರ್‌ ನಲ್ಲಿ 109 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ ಎಂದು ಪ್ರಭಾರಿ ಅಪರ ಜಿಲ್ಲಾ ಧಿಕಾರಿ ಶಂಕರಗೌಡ ಎಸ್‌. ಸೋಮನಾಳ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next