Advertisement

ಪ.ಬಂಗಾಳ ಬಿಜೆಪಿ ನಾಯಕ ಸುವೇಂದು ಅಧಿಕಾರಿ ತಂದೆ, ಸಹೋದರನಿಗೂ ವೈ ಪ್ಲಸ್ ಭದ್ರತೆ

04:00 PM May 22, 2021 | Team Udayavani |

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಸಹೋದರ ಮತ್ತು ತಂದೆಗೂ ಕೇಂದ್ರ ಸರ್ಕಾರ ವೈ ಪ್ಲಸ್ ಭದ್ರತೆ ನೀಡಿದೆ. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಎಲ್ಲಾ 77 ಶಾಸಕರಿಗೆ ಕೇಂದ್ರ ಸರ್ಕಾರ ಭದ್ರತೆ ನೀಡಿದ ಒಂದು ದಿನದ ಬಳಿಕ ಸುವೇಂದು ಅಧಿಕಾರಿ ಕುಟುಂಬಕ್ಕೂ ಭದ್ರತೆ ನೀಡಿದೆ.

Advertisement

ಸುವೇಂದು ಅಧಿಕಾರಿಯವರ ತಂದೆ ಸಿಸಿರ್ ಅಧಿಕಾರಿ ಮತ್ತು ಸಹೋದರ ದಿಬ್ಯೇಂದು ಅಧಿಕಾರಿ ಇಬ್ಬರೂ ಸಂಸದರಾಗಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸುವೇಂದು ಅಧಿಕಾರಿಯವರು 1200 ಮತಗಳ ಅಂತರದಿಂದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿದ್ದರು.

ಮಮತಾ ಬ್ಯಾನರ್ಜಿ ಅವರ ಆಪ್ತರಾಗಿದ್ದ ಸುವೇಂದು ಅಧಿಕಾರಿಯವರು ಬಿಜೆಪಿ ಸೇರಿ ಅವರ ವಿರುದ್ಧವೇ ಸ್ಪರ್ಧಿಸಿದ್ದರು. ಆದರೆ ಸಿಸಿರ್ ಅಧಿಕಾರಿ ಮತ್ತು ದಿಬ್ಯೇಂದು ಅಧಿಕಾರಿ ಈಗಲೂ ಟಿಎಂಸಿ ಪಕ್ಷದಲ್ಲಿದ್ದಾರೆ. ಇದೀಗ ಮೂವರಿಗೂ ಸಿಆರ್ ಪಿಎಫ್ ಅಡಿಯಲ್ಲಿ ವೈ ಪ್ಲಸ್ ಭದ್ರತೆ ನೀಡಲಾಗಿದೆ. ಇದರಲ್ಲಿ ವೈಯಕ್ತಿಕ ರಕ್ಷಣಾಧಿಕಾರಿ, ಹನ್ನೊಂದು ಮಂದಿ ಕಮಾಂಡೋಗಳನ್ನೊಳಗೊಂಡ ಶಸ್ತ್ರಸಜ್ಜಿತ ಪೊಲೀಸರು ಇರುತ್ತಾರೆ

Advertisement

Udayavani is now on Telegram. Click here to join our channel and stay updated with the latest news.

Next