Advertisement

ಜಮ್ಮು ವಾಯು ಪಡೆ ನಿಲ್ದಾಣದಲ್ಲಿ ಐದು ನಿಮಿಷದ ಅಂತರದಲ್ಲಿ ಎರಡು ಬಾರಿ ಸ್ಫೋಟ!

08:26 AM Jun 27, 2021 | Team Udayavani |

ಶ್ರೀನಗರ: ಜಮ್ಮುವಿನ ವಾಯಪಡೆ ನಿಲ್ದಾಣದಲ್ಲಿ ಐದು ನಿಮಿಷದ ಅಂತರದಲ್ಲಿ ಎರಡು ಬಾರಿ ಸ್ಫೋಟಗಳು ನಡೆದ ಘಟನೆ ತಡರಾತ್ರಿ ನಡೆದಿದೆ. ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ಇದುವರೆಗೂ ವರದಿಯಾಗಿಲ್ಲ.

Advertisement

ಇದನ್ನೂ ಓದಿ:ಕರ್ಪ್ಯೂ ಉಲ್ಲಂಘಿಸಿ ಮನೆಯಿಂದ ಹೊರಬಂದವರನ್ನು ಮಧ್ಯರಾತ್ರಿ ಠಾಣೆಗೆ ಕರೆತಂದ ಪೊಲೀಸರು‌

ವಾಯು ಪಡೆ ನಿಲ್ದಾಣದ ತೀವೃ ಭದ್ರತಾ ತಾಂತ್ರಿಕ ವಲಯದಲ್ಲಿ ಈ ಎರಡು ಸ್ಫೋಟಗಳು ನಡೆದಿದೆ. ರಾತ್ರಿ 1.50ರ ಸುಮಾರಿಗೆ ಈ ಸ್ಫೋಟ ನಡೆದಿದ್ದು, ಮೊದಲ ಸ್ಫೋಟ ಕಟ್ಟಡ ಛಾವಣಿಯನ್ನು ಸೀಳಿಸಿತ್ತು.

ಕೆಲವೇ ಕ್ಷಣದಲ್ಲಿ ಭದ್ರತಾ ಪಡೆಗಳು ಸ್ಥಳವನ್ನು ಸುತ್ತುವರಿದಿದ್ದಾರೆ. ಪೊಲೀಸರು ಮತ್ತು ವಿಧಿ ವಿಜ್ಞಾನ ತಂಡ ಸ್ಥಳಕ್ಕಾಗಮಿಸಿದೆ. ಸ್ಪೋಟಕ್ಕೆ ಕಾರಣಗಳೇನು ಎಂದು ಇದುವರೆಗೆ ವರದಿಯಾಗಿಲ್ಲ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next