ಚೀನಾ ಮೂಲದ ಶಿಯೋಮಿ ತನ್ನ ಎಂಐ 11 ಸೀರೀಸ್ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ಡೇಟ್ ಫಿಕ್ಸ್ ಮಾಡಿದೆ. ಶೀಘ್ರದಲ್ಲೇ ಎಂಐ 11ಎಕ್ಸ್ ಹಾಗೂ ಎಂಐ 11ಎಕ್ಸ್ ಪ್ರೊ ಸ್ಮಾರ್ಟ್ ಫೋನ್‍ಗಳು ಭಾರತೀಯರ ಕೈಗೆ ಎಟುಕಲಿವೆ.
ಈಗಾಗಲೇ ಚೀನಾದಲ್ಲಿ ಎಂಐ 11 ಸೀರೀಸ್ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಇದೀಗ ಇದೇ ಏಪ್ರಿಲ್ 23 ರಂದು ಭಾರತೀಯ ಮಾರುಕಟ್ಟೆಗೆ ಈ ಫೋನ್‍ಗಳು ಲಗ್ಗೆ ಇಡಲಿವೆ ಎಂದು ಶಿಯೋಮಿ ಅಧಿಕೃತವಾಗಿ ತಿಳಿಸಿದೆ.
ಎಂಐ 11 ಸೀರೀಸ್ ವಿಶೇಷತೆ ಏನು ?
ಎಂಐ 11 ಅಲ್ಟ್ರಾ ಸ್ಮಾರ್ಟ್‌ಫೋನ್ 6.8 ಇಂಚ್ ಕರ್ವ್ಡ್ ಒಎಲ್ಇಡಿ ಡಿಸ್‌ಪ್ಲೇ ಹೊಂದಿದೆ. ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 888 ಪ್ರೊಸೆರ್, 5000 ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಇರಲಿದೆ. ಈ ಬ್ಯಾಟರಿ ನಿಮಗೆ 67 ವ್ಯಾಟ್ ತಂತಿ ಸಹಿತ ಚಾರ್ಜಿಂಗ್ ಹಾಗೂ 10 ವ್ಯಾಟ್ ರಿವರ್ಸ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ.
ಈ ಸ್ಮಾರ್ಟ್‌ಫೋನ್ ನಿಮಗೆ ಐಪಿ68 ಧೂಳು ನಿರೋಧಕ ಹಾಗೂ ವಾಟರ್ ರೆಜಿಸ್ಟೆನ್ಸ್ ರೂಪದಲ್ಲಿ ಸಿಗಲಿದೆ. ಎಂಐ11 ಸ್ಮಾರ್ಟ್‌ಫೋನಿನಲ್ಲಿ 50 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಹಾಗೂ 48 ಮೆಗಾಪಿಕ್ಸೆಲ್ ವೈಡ್ ಆಂಗಲ್ ಶೂಟರ್ ಹಾಗೂ ಪೆರಿಸ್ಕೋಪಿಕ್ ಟೆಲಿಫೋಟೋ ಲೆನ್ಸ್‌ನ 50 ಮೆಗಾ ಪಿಕ್ಸೆಲ್ ಕ್ಯಾಮೆರಾಗಳ ಸೆಟ್‌ಅಪ್ ಇರುವ ಸಾಧ್ಯತೆ ಇದೆ.
ಎಂಐ 11 ಎಕ್ಸ್ ಸ್ಮಾರ್ಟ್ ಫೋನ್, 8ಜಿಬಿ RAM + 128 ಜಿಬಿ ಇಂಟರ್ನಲ್ ಸ್ಟೋರೆಜ್ ಸಾಮರ್ಥ್ಯ ಹೊಂದಿದೆ. ಅದೇ ರೀತಿ ಎಂಐ ಎಕ್ಸ್ ಪ್ರೊ ಸ್ಮಾರ್ಟ್ ಫೋನ್ 8 ಜಿಬಿ RAM + 256 ಜಿಬಿ ಇಂಟರ್ನಲ್ ಸ್ಟೋರೆಜ್ ಸಾಮರ್ಥ್ಯ ಒಳಗೊಂಡಿದೆ.