ನವದೆಹಲಿ: ಚೀನಾ ಮೂಲದ ಖ್ಯಾತ ಸ್ಮಾರ್ಟ್ ಪೋನ್ ತಯಾರಿಕಾ ಕಂಪನಿಯಾದ ಶವೋಮಿ ತನ್ನ ಹೊಸ ಆವೃತ್ತಿಯ ಎಂಐ 11 ಸ್ಮಾರ್ಟ್ ಪೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ತನ್ನ ಹಳೆಯ ಆವೃತ್ತಿಯ ಮೊಬೈಲ್ ಪೋನಿಗಿಂತ ಅತ್ಯುನ್ನತ ಸೌಲಭ್ಯಗಳನ್ನು ಹೊಂದುವ ಮೂಲಕ ತನ್ನ ಗ್ರಾಹಕರನ್ನು ತಲುಪಿದೆ. ಇದು ಸ್ನ್ಯಾಪ್ ಡ್ರ್ಯಾಗನ್ 888 ಅನ್ನು ಬಳಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸುವ ವಿಶ್ವದ ಮೊಟ್ಟ ಮೊದಲ ಫ್ಲ್ಯಾಗ್ ಶಿಪ್ ಸ್ಮಾರ್ಟ್ ಪೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸದ್ಯಕ್ಕೆ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಈ ಮೊಬೈಲ್ ಪೋನ್ ಭಾರತದಲ್ಲಿ ಯಾವಾಗ ಬಿಡುಗಡೆಗೊಳ್ಳಲಿದೆ ಎಂಬ ಕುರಿತಾಗಿ ಕಂಪನಿ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
ಶವೋಮಿ ಎಂ ಐ 11 ಸ್ಮಾರ್ಟ್ ಪೋನ್ ನ ವೈಶಿಷ್ಟ್ಯತೆಗಳೇನು?
ನೂತನ ಎಂಐ 11 ಸ್ಮಾರ್ಟ್ ಪೋನ್ ತ್ರಿವಳಿ ಕ್ಯಾಮರಾ ಸೌಲಭ್ಯವನ್ನು ಒಳಗೊಂಡಿದ್ದು, 6.81 ಇಂಚಿನ ಕ್ವಾಡ್ ಎಚ್ ಡಿ ಪ್ಲಸ್ ಅಮೋಡಿಲ್ ಡಿಸ್ ಪ್ಲೇ ಹೊಂದಿದೆ. ಇನ್ನು ಈ ಮೊಬೈಲ್ ಪೋನ್ ನಲ್ಲಿ 5ಜಿ ನೆಟ್ ವರ್ಕ್ ಸಪೋರ್ಟ್ ಆಗಲಿದ್ದು , ಇದರ ಜೊತೆಗೆ ವಯರ್ ಲೆಸ್ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನು ಇದು ಒಳಗೊಂಡಿದೆ.
Related Articles
ಇದನ್ನೂ ಓದಿ: ಜಮ್ಮು-ಕಾಶ್ಮೀರ: ಜಂಟಿ ಕಾರ್ಯಾಚರಣೆ, ಎನ್ ಕೌಂಟರ್ ನಲ್ಲಿ ಮೂವರು ಉಗ್ರರ ಹತ್ಯೆ
ಈ ಹೊಸ ಮೊಬೈಲ್ ಪೋನ್ 8 ಜಿಬಿ RAM ಹಾಗೂ 128 ಜಿ ಬಿ ಸ್ಟೋರೇಜ್ ಅನ್ನು ಒಳಗೊಂಡಿದ್ದು, ಚೀನಾದ ಮಾರುಕಟ್ಟೆಯಲ್ಲಿ 3999 ಯೂವಾನ್ ಬೆಲೆಯಲ್ಲಿ ಲಭ್ಯವಿದೆ. (ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 44,900 ರೂ.)ಹಾಗೂ 8 ಜಿಬಿ RAM ಹಾಗೂ 256 ಜಿಬಿ ಸ್ಟೋರೇಚ್ ಸಾಮರ್ಥ್ಯ ಹೊಂದಿರುವ ಮೊಬೈಲ್ ಪೋನ್ 4299 ಯೂವಾನ್ ಗೆ ಲಭ್ಯವಿದೆ. (ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 48,300 ರೂ.) 12 ಜಿಬಿ RAM ಹಾಗೂ 256 ಜಿಬಿ ಸ್ಟೋರೇಚ್ ಸಾಮರ್ಥ್ಯ ಹೊಂದಿರುವ ಮೊಬೈಲ್ ಪೋನ್ 4688 ಯುವಾನ್ ಬೆಲೆಗೆ ಲಭ್ಯವಿದೆ (ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 52,800 ರೂ.) ಎಂದು ವರದಿಯಾಗಿದೆ.
ಇನ್ನು ಸ್ಮಾರ್ಟ್ ಪೋನಿನ ಕ್ಯಾಮರಾ ವನ್ನು ಗಮನಿಸುವುದಾದಾರೆ ಇದು ಹಿಂಬದಿಯಲ್ಲಿ 108 ಮತ್ತು 13 ಹಾಗೂ 5 ಮೆಗಾಪಿಕ್ಸೆಲ್ ಕ್ಯಾಮರಾವನ್ನು ಒಳಗೊಂಡಿದೆ. ಇನ್ನು 20 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮರಾವನ್ನು ಒಳಗೊಂಡಿದೆ.
ಈ ಮೊಬೈಲ್ ಪೋನ್ MIUI 12 ಹಾಗೂ Android 11ಅನ್ನು ಒಳಗೊಂಡಿದ್ದು, 4600mAh ಹಾಗೂ 55W ವೈರ್ QC4+ ಮತ್ತು 50W ವೈರ್ ಲೆಸ್ ಚಾರ್ಜಿಂಗ್ ವ್ಯವಸ್ಥೆಯನ್ನು ಒಳಗೊಂಡಿದೆ.