Advertisement

ಒಂದಿಂಚು ಜಾಗಕ್ಕೂ ಚೀನ ಯುದ್ಧಕ್ಕೆ ಸಿದ್ಧ

06:00 AM Mar 21, 2018 | |

ಬೀಜಿಂಗ್‌: ಚೀನ ತನ್ನ ಒಂದಿಂಚು ಜಾಗವನ್ನೂ ಬಿಡದು. ತನ್ನ ಭೂಭಾಗವನ್ನು ವಶಪಡಿಸಿಕೊಳ್ಳಲು ವಿಶ್ವದ ಯಾವುದೇ ದೇಶದೊಂದಿಗೆ ರಕ್ತಪಾತಕ್ಕೂ ಸಿದ್ಧವಿದೆ ಎಂದು ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಹೇಳಿದ್ದಾರೆ. ಜೀವಿತಾವಧಿ ಯವರೆಗೆ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಮಾತನಾಡಿದ ಜಿನ್‌ಪಿಂಗ್‌, ಯಾವುದೇ ದೇಶವನ್ನು ಉಲ್ಲೇಖೀಸಲಿಲ್ಲ. ಭಾರತ ಸೇರಿದಂತೆ ಹಲವು ದೇಶಗಳೊಂದಿಗೆ ಚೀನ ಗಡಿ ವಿವಾದವನ್ನು ಹೊಂದಿದೆ. ಭಾರತದಲ್ಲಿ ಅರುಣಾಚಲ ಪ್ರದೇಶ ಹಾಗೂ ಡೋಕ್ಲಾಂ ವಿವಾದಗಳು ಆಗಾಗ್ಗೆ ಭುಗಿಲೇಳುತ್ತಲೇ ಇರುತ್ತವೆ. ದಕ್ಷಿಣ ಚೀನ ಸಮುದ್ರ ವಿಚಾರದಲ್ಲಿ ಜಪಾನ್‌, ವಿಯೆಟ್ನಾಂ, ಫಿಲಿಪ್ಪೀನ್ಸ್‌, ಮಲೇಷ್ಯಾ ಮತ್ತು ಇತರ ದೇಶಗಳೊಂದಿಗೆ ವಿವಾದವನ್ನು ಚೀನ ಹೊಂದಿದೆ.

Advertisement

ಸಾಮಾನ್ಯವಾಗಿ ಪ್ರತಿ ವರ್ಷವೂ ಸಂಸತ್‌ ಅಧಿವೇಶನ ಮುಗಿದ ಅನಂತರ ಸುದ್ದಿಗೋಷ್ಠಿ ನಡೆಸಲಾಗುತ್ತದೆ. ಆದರೆ ಇದೇ ಮೊದಲ ಬಾರಿಗೆ ಅಧ್ಯಕ್ಷರೇ ಮಾತನಾಡಿದ್ದು ವಿಶೇಷವಾಗಿದೆ. 170 ವರ್ಷಗಳ ಹಿಂದೆ ನಾವು ನಮ್ಮ ದೇಶವನ್ನು ಉಳಿಸಿಕೊಳ್ಳಲು ಹೋರಾಡಿದ್ದೇವೆ. ಚೀನದ ಪುನಶ್ಚೇತನಕ್ಕೆ ಈಗಿನ ಜನರು ಹಿಂದೆಂದಿಗಿಂತ ಹೆಚ್ಚು ಶಕ್ತರಾಗಿದ್ದಾರೆ. ನಮ್ಮ ದೇಶವನ್ನು ವಿಭಜಿ ಸಲು ಯಾರಿಂದಲೂ ಸಾಧ್ಯವಿಲ್ಲ. ದೇಶವನ್ನು ಒಡೆಯುವವರನ್ನು ಜನರು ಒಪ್ಪುವುದಿಲ್ಲ ಮತ್ತು ಅವರಿಗೆ ತಕ್ಕ ಶಿಕ್ಷೆ ನೀಡಿದ ಉದಾಹರಣೆಗಳು ಇತಿಹಾಸದಲ್ಲಿವೆ ಎಂದು ಜಿನ್‌ಪಿಂಗ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next