ಬೀಜಿಂಗ್/ಹೊಸದಿಲ್ಲಿ: “ಚೀನದಲ್ಲಿ ಕೊರೊನಾದಿಂದಾಗಿ ಜನರಿಗೆ ಅನನು ಕೂಲವಾಗಿದೆ. ಅವರ ರಕ್ಷಣೆಗೆ ಏನು ಬೇಕೋ ಮಾಡಿ’, ಹೀಗೆಂದು ಹೇಳಿದ್ದು ಬೇರೆ ಯಾರೂ ಅಲ್ಲ! ಆ ದೇಶದ ಅಧ್ಯಕ್ಷ ಕ್ಸಿಜಿನ್‌ಪಿಂಗ್!
ಡ್ರ್ಯಾಗನ್ ರಾಷ್ಟ್ರದಲ್ಲಿ ಹಲವು ದಿನ ಗಳಿಂದ ಭಾರೀ ಪ್ರಮಾಣ ದಲ್ಲಿ ಸೋಂಕಿನ ಪರಿಸ್ಥಿತಿ ಬಿಗಡಾಯಿಸಿರುವ ಹಿನ್ನೆಲೆ ಯಲ್ಲಿ ಮೊದಲ ಬಾರಿಗೆ “ಜನಪರ’ ಹೇಳಿಕೆ ನೀಡಿದ್ದಾರೆ.
ಸೋಂಕಿನಿಂದ ಜನರನ್ನು ರಕ್ಷಿಸುವ ನಿಟ್ಟಿನಲ್ಲಿ, ಅದರಿಂದ ಉಂಟಾಗುವ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸಗಳು ಆರಂಭವಾಗಬೇಕಾಗಿದೆ. ಸುರಕ್ಷತೆ ಮತ್ತು ಆರೋಗ್ಯ ಕಾಪಾಡಿ ಕೊಳ್ಳುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಇನ್ನೊಂದೆಡೆ, ಆ ದೇಶದ ಝೆಜಿಯಾಂಗ್ ಎಂಬ ಪ್ರಾಂತ್ಯದಲ್ಲಿ ಪ್ರತಿ ದಿನ ಕನಿಷ್ಠವೆಂದರೂ 10 ಲಕ್ಷ ಕೇಸುಗಳು ದೃಢಪಡುತ್ತಿವೆ. ಜತೆಗೆ ಚೀನ ರಾಜಧಾನಿ ಬೀಜಿಂಗ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಇರುವ ಆಸ್ಪತ್ರೆಗಳಲ್ಲಿನ ಐಸಿಯು ಸೇರಿದಂತೆ ಹಲವು ವಿಭಾಗಗಳಲ್ಲಿ ಸೋಂಕು ಪೀಡಿತರು ತುಂಬಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬೀಜಿಂಗ್‌ನ ಆಸ್ಪತ್ರೆಯ ವೈದ್ಯ ಹೊವಾರ್ಡ್ ಬೆರ್ನೆಸ್ಟಿನ್ “ಮೂವತ್ತು ವರ್ಷಗಳ ನನ್ನ ಅನುಭವದಲ್ಲಿ ಇಂಥ ಸಂಕಷ್ಟ ನೋಡಿಲ್ಲ. ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಬರುತ್ತಿರುವವರು ಹಿರಿಯ ನಾಗರಿಕರು ಮತ್ತು ನ್ಯುಮೋನಿಯಾ ಪೀಡಿತರು’ ಎಂದು ಹೇಳಿದ್ದಾರೆ. ಇನ್ನೊಂದೆಡೆ ಹೊಸ ವರ್ಷದಲ್ಲಿ ಕೊರೊನಾ ಮಾಹಿತಿ ನೀಡುವುದನ್ನು ಸ್ಥಗಿತಗೊಳಿಸುವುದಾಗಿ ಯು.ಕೆ. ಸರಕಾರ ಹೇಳಿದೆ