ನೀಳ ದೇಹ, ಉದ್ದ ಕೂದಲು, ತೀಕ್ಷ್ಣ ಕಣ್ಣುಗಳು, ಎದುರಾಳಿಯನ್ನು ಹುರಿದು ಮುಕ್ಕುವ ನೋಟಗಳು, ಬಲಾಡ್ಯ ತೊಳು, ಸ್ಪಿಯರ್ ಎಂಬ ಫಿನಿಶಿಂಗ್ ಮೂವ್ . ಹೀಗೆ ಪ್ರಸಿದ್ದರಾಗಿ ಒಂದು ಕಾಲದಲ್ಲಿ ಅತೀ ಜನಪ್ರಿಯ ಡಬ್ಲ್ಯೂ ಡಬ್ಲ್ಯೂಇ ಪಟುವಾಗಿ ಮೆರೆದ ಎಡ್ಜ್ ಮತ್ತೆ ಡಬ್ಲ್ಯೂ ಡಬ್ಲ್ಯೂಇ ರಿಂಗ್ ಗೆ ಕಾಲಿಡಲಿದ್ದಾರೆ. ಹೌದು ಎನ್ನುತ್ತಿವೆ ಮೂಲಗಳು.
2011ರಲ್ಲಿ ಬೆನ್ನು ಹುರಿ ನೋವಿನ ಕಾರಣ ಮನೋರಂಜನಾ ಕುಸ್ತಿಗೆ ರಾಜೀನಾಮೆ ನೀಡಿದ್ದ ಎಡ್ಜ್ ಮರಳಿ ಬರುವ ಸೂಚನೆ ನೀಡಿದ್ದಾರೆ. ಸ್ಪಿಯರ್ ಸೂಪರ್ ಸ್ಟಾರ್ ಮತ್ತೆ ಡಬ್ಲ್ಯೂ ಡಬ್ಲ್ಯೂಇ ಇಂಡಸ್ಟ್ರಿಗೆ ಕಾಲಿರಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
2011ರ ರಸೆಲ್ ಮೇನಿಯಾದಲ್ಲಿ ವಿಶ್ವ ಹೆವಿವೈಟ್ ಚಾಂಪಿಯನ್ ಶಿಪ್ ಗೆದ್ದು ಅದರ ಮರುದಿನವೇ ರಾಜೀನಾಮೆ ನೀಡಿ ಜಗತ್ತಿಗೆ ಶಾಕ್ ನೀಡಿದ್ದರು. ರಾಜೀನಾಮೆ ಸಮಯದಲ್ಲಿ ಕೇವಲ 37 ವರ್ಷದವರಾಗಿದ್ದ ಎಡ್ಜ್ ಬೆನ್ನುಹುರಿ ಸಮಸ್ಯೆಯಿಂದ ರಿಂಗ್ ತೊರೆಯುವ ನಿರ್ಧಾರಕ್ಕೆ ಬಂದಿದ್ದರು.
ಕಳೆದ ಆಗಸ್ಟ್ ನಲ್ಲಿ ಸಮ್ಮರ್ ಸ್ಲಾಮ್ ವೇದಿಕೆಗೆ ಬಂದಿದ್ದ ಎಡ್ಜ್ ಸ್ಪರ್ಧಿ ಇಲಾಯಸ್ ಗೆ ಸ್ಪಿಯರ್ ಹಾಕಿ ಹೋಗಿದ್ದರು.
ಈಗ ಮತ್ತೆ ಎಡ್ಜ್ ಡಬ್ಲ್ಯೂ ಡಬ್ಲ್ಯೂಇ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎನ್ನುತ್ತಿವೆ ಮೂಲಗಳು. ಮುಂದಿನ ತಿಂಗಳು ನಡೆಯಲಿರುವ ರಾಯಲ್ ರಂಬಲ್ ನಲ್ಲಿ ಎಡ್ಜ್ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.