Advertisement

ಲಾಸ್ಟ್ ರೈಡ್: ನಿವೃತ್ತಿ ಘೋಷಿಸಿದ WWE ಲೆಜೆಂಡ್ ಅಂಡರ್ ಟೇಕರ್

05:10 PM Jun 22, 2020 | keerthan |

ನ್ಯೂಯಾರ್ಕ್: ಡಬ್ಲ್ಯು ಡಬ್ಲ್ಯುಇ ಕುಸ್ತಿಪಟು, ದಿ ಡೆಡ್ಲಿಮ್ಯಾನ್ ಎಂದೇ ಪ್ರಸಿದ್ದರಾಗಿದ್ದ ಅಂಡರ್ ಟೇಕರ್ ತನ್ನ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.

Advertisement

52 ವರ್ಷದ ಅಂಡರ್ ಟೇಕರ್ ತಮ್ಮ 30 ವರ್ಷದಗಳ ಸುದೀರ್ಘ ರಿಂಗ್ ಒಳಗಿನ ಕುಸ್ತಿ ಪಯಣಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದು, ದಿ ಲಾಸ್ಟ್ ರೈಡ್ ಶೋನಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ.

1965 ಮಾರ್ಚ್ 24ರಂದು ಅಮೇರಿಕಾದ ಟೆಕ್ಸಾಸ್ ನ ಹ್ಯೂಸ್ಟನ್ ನಲ್ಲಿ ಅಂಡರ್ ಟೇಕರ್ ಜನಿಸಿದ್ದರು. ಇವರ ಮೂಲ ಹೆಸರು ಮಾರ್ಕ್ ವಿಲಿಯಂ ಕ್ಯಾಲವೆ. ಡಬ್ಲ್ಯು ಡಬ್ಲ್ಯುಇ ರಿಂಗ್ ಗೆ ಕಾಲಿಟ್ಟ ನಂತರ ಅಂಡರ್ ಟೇಕರ್ ಆದರು. ಡಬ್ಲ್ಯು ಡಬ್ಲ್ಯುಇ ನ ಅತೀ ಜನಪ್ರಿಯ ಪಟುಗಳಲ್ಲಿ ಅಂಡರ್ ಟೇಕರ್ ಓರ್ವರು.

6.10 ಅಡಿ ಉದ್ದದ ಅಂಡರ್ ಟೇಕರ್ ಆಜಾನುಬಾಹು. 1990ರಲ್ಲಿಸರ್ವೈವರ್ ಸೀರೀಸ್ ಮೂಲಕ WWE ಗೆ ಕಾಲಿಟ್ಟರು. (ಆಗ WWF ಎಂದಾಗಿತ್ತು). ಮೂರು ಬಾರಿ ಹೆವಿವೈಟ್ ಚಾಂಪಿಯನ್, ನಾಲ್ಕು ಬಾರಿ ಡಬ್ಲ್ಯು ಡಬ್ಲ್ಯು ಇ ಚಾಂಪಿಯನ್, ಒಂದು ಬಾರಿ ಹಾರ್ಡ್ ಕೋರ್ ಚಾಂಪಿಯನ್ ಶಿಪ್ ಜಯಿಸಿದ್ದ ಅಂಡರ್ ಟೇಕರ್ 2007ರಲ್ಲಿ ರಾಯಲ್ ರಂಬಲ್ ಗೆದ್ದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next