Advertisement

ಕೊವಿಡ್‌ ವೈರಾಣುವಿನ ಉಗಮ ಸ್ಥಾನ ಎಂದು ಗುರುತಿಸಲ್ಪಟ್ಟ ವುಹಾನ್‌ ಮಾರ್ಕೆಟ್‌ ಈಗ ಹೇಗಿದೆ?

12:07 AM Apr 21, 2021 | Team Udayavani |

ಬೀಜಿಂಗ್‌: ಸುತ್ತಲೂ ಬ್ಯಾರಿಕೇಡ್‌ಗಳು… ಅಂಗಡಿಗಳು ಬಂದ್‌. ಯಾವುದೇ ನರಪಿಳ್ಳೆಯೂ ಸುಳಿಯದಂಥ ವಾತಾವರಣ… ಸಂಶೋಧಕರಿಗಷ್ಟೇ ಒಳ ಹೋಗಿ ಬರಲು ಅವಕಾಶ.. ಅದೂ ಚೀನ ಸರಕಾರದ ಅನುಮತಿಯೊಂದಿಗೆ… ಜನರಿಲ್ಲದೆ, ನಿರ್ವಹಣೆಯಿಲ್ಲದೆ ನಿಧಾನವಾಗಿ ಶಿಥಿಲಾವಸ್ಥೆಗೆ ಜಾರುತ್ತಿರುವ ಕಟ್ಟಡ!

Advertisement

ಇದು ಇಡೀ ಜಗತ್ತಿಗೇ ಕೊರೊನಾ ಎಂಬ ಮಹಾಮಾರಿಯನ್ನು ಪಸರಿಸಿದ ಕೊವಿಡ್‌-19 ಎಂಬ ಮಾರಕ ವೈರಾಣುವಿನ ಉಗಮ ಸ್ಥಾನ ಎಂದು ಗುರುತಿಸಲ್ಪಟ್ಟ ಚೀನದ ವುಹಾನ್‌ ನಗರದ ಮಾಂಸದ ಮಾರುಕಟ್ಟೆಯ ಇಂದಿನ ದುಃಸ್ಥಿತಿ. 2019ರ ಅಂತ್ಯದ ವೇಳೆಯಲ್ಲೇ ವುಹಾನ್‌ನಲ್ಲಿ ಕೊರೊನಾ ಪ್ರತ್ಯಕ್ಷವಾಗಿತ್ತು. ಇದರ ಮೂಲವನ್ನು ಕೆದಕಿದ ತಜ್ಞರು ಬೆರಳು ತೋರಿಸಿದ್ದೇ ಈ ಮಾರುಕಟ್ಟೆ ಕಡೆಗೆ. ಆಗಿನಿಂದ, ಈ ಮಾರುಕಟ್ಟೆ ಜಗತ್ತಿನಾದ್ಯಂತ ಕುಖ್ಯಾತಿ ಪಡೆಯಿತು. 2020ರ ಜ. 1ರಂದು ಇಡೀ ಮಾರುಕಟ್ಟೆಯನ್ನು ಸೀಲ್‌ಡೌನ್‌ ಮಾಡಲಾಯಿತು. ಅದಾಗಿ ವರ್ಷವೇ ಉರುಳಿದೆ. ಆಗಿನಿಂದ ಇಲ್ಲಿಯ ವರೆಗೂ ಮಾರುಕಟ್ಟೆ ಸಹಜ ಸ್ಥಿತಿಗೆ ಮರಳಿಲ್ಲ. ಈಗಲೂ ಇಡೀ ಮಾರುಕಟ್ಟೆ ಪ್ರದೇಶವನ್ನು ಬ್ಯಾರಿಕೇಡ್‌ಗಳಿಂದ ಮುಚ್ಚಲಾಗಿದೆ.

ಆಮದಿನಿಂದ ಇಂದಿನವರೆಗೂ ಈ ಮಾರುಕಟ್ಟೆಗೆ ತಜ್ಞರು ಬಿಟ್ಟರೆ ಮಿಕ್ಕವರ್ಯಾರೂ ಹೋಗುತ್ತಿಲ್ಲ. ಯಾವುದಾದರೂ ಅಧ್ಯಯನ ತಂಡವೊಂದು ಸಂಪೂರ್ಣ ಪಿಪಿಇ ಕಿಟ್‌ಗಳನ್ನು ಧರಿಸಿ ಇದರೊಳಗೆ ಹೋಗುವುದು ಸ್ಯಾಂಪಲ್‌ಗ‌ಳನ್ನು ತರುವುದು ಮಾಮೂಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next