Advertisement

ವುಹಾನ್‌ ಮಾರುಕಟ್ಟೆ ಮೇಲೆ ಅನುಮಾನದ ಹುತ್ತ

12:54 PM May 09, 2020 | sudhir |

ಮಣಿಪಾಲ: ಕೋವಿಡ್ ವೈರಸ್‌ ಹರಡುವಲ್ಲಿ ಚೀನದ ವುಹಾನ್‌ ನಗರದ ಸಗಟು ಮಾರುಕಟ್ಟೆಯ ಪಾತ್ರ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ. ವೈರಸ್‌ ಹರಡುವಲ್ಲಿ ಈ ಮಾರುಕಟ್ಟೆ ಪ್ರಮುಖ ಪಾತ್ರ ವಹಿಸಿರುವ ಸಾಧ್ಯತೆ ಇದೆ. ವೈರಸ್‌ ಹರಡಲು ಮಾರುಕಟ್ಟೆ ಮೂಲವೇ ಕಾರಣವಾಗಿರಬಹುದು. ಈ ಕುರಿತಂತೆ ಹೆಚ್ಚಿನ ಸಂಶೋಧನೆಗಳು ನಡೆಯಬೇಕಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

Advertisement

ಕಳೆದ ಜನವರಿಯಲ್ಲಿ ವುಹಾನ್‌ನಲ್ಲಿ ಕೋವಿಡ್ ಪ್ರಕರಣ ಹೆಚ್ಚಾದ ಕಾರಣ ಚೀನ ಸರಕಾರ ಆ ಮಾರುಕಟ್ಟೆಯನ್ನು ಮುಚ್ಚುವ‌ ಮೂಲಕ ವೈರಸ್‌ ಹರಡುವ ವೇಗಕ್ಕೆ ಕಡಿವಾಣ ಹಾಕಿತ್ತು. ವನ್ಯಜೀವಿ ಮಾಂಸ ಮಾರಾಟ ಮತ್ತು ಖರೀದಿಯನ್ನು ತಾತ್ಕಾಲಿಕವಾಗಿ ನಿಷೇಧಿಸಿತ್ತು. ಈ ಹಿನ್ನೆಲೆಯಲ್ಲಿ ಕೋವಿಡ್ ವೈರಸ್‌ ಹರಡುವಿಕೆ ಹಿನ್ನೆಲೆಯಲ್ಲಿ ಚೀನದ ಈ ಮಾರುಕಟ್ಟೆಯ ಪಾತ್ರವಿದೆಯೆಂಬ ಆರೋಪಕ್ಕೆ ಇದೀಗ ಜೀವ ಬಂದಿದೆ. ವಿಶ್ವ ಆರೋಗ್ಯ ಸಂಸ್ಥೆಯೇ ಇಂಥದೊಂದು ಅನುಮಾನ ವ್ಯಕ್ತಪಡಿಸಿರುವುದು ಆ ವಾದಕ್ಕೆ ಪುಷ್ಟಿ ಸಿಕ್ಕಂತಾಗಿದೆ.

ಜೀವಂತ ಪ್ರಾಣಿಗಳಿಂದ ಅಥವಾ ವ್ಯಾಪಾರಿಗಳು, ಅಂಗಡಿಗಳವರಿಂದ ವೈರಸ್‌ ಬಂದ ಕುರಿತು ಯಾವುದೇ ನಿಖರ ಮಾಹಿತಿ ಇಲ್ಲ ಎಂದು ವಿಶ್ವ ಸಂಸ್ಥೆ ಹೇಳಿದೆ. ಈ ಹಿಂದೆ ಕೋವಿಡ್ ವೈರಸ್‌ ವುಹಾನ್‌ನ ಪ್ರಯೋಗಾಲಯದಿಂದಲೇ ಹರಡಿದೆ ಎಂಬುದಕ್ಕೆ ಮಹತ್ವದ ಪುರಾವೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಹಲವು ಬಾರಿ ಪುನರುಚ್ಚರಿಸಿದ್ದರು. ಆದರೆ ತಮ್ಮ ಅರೋಪಕ್ಕೆ ಸರಿಯಾಗಿ ವಿಶ್ವಸಂಸ್ಥೆಗೆ ಅವರು ಸಾಕ್ಷಿ ನೀಡಲು ವಿಫ‌ಲರಾಗಿದ್ದರು.

ವುಹಾನ್‌ನಲ್ಲಿರುವ ಈ ಮಾಂಸ ಮಾರುಕಟ್ಟೆಯಲ್ಲಿ ಮುಳ್ಳುಹಂದಿಗಳು ಮತ್ತು ಜಿಂಕೆಗಳಂತಹ ಕಾಡು ಪ್ರಾಣಿಗಳನ್ನು ಆಹಾರ ಮತ್ತು ಔಷಧಕ್ಕಾಗಿ ಮಾರಲಾಗುತ್ತಿತ್ತು. ಈ ವೆಟ್‌ ಮಾರ್ಕೆಟ್‌ಗಳಲ್ಲಿ ಪ್ರಾಣಿಗಳನ್ನೂ ತರಕಾರಿಗಳು, ಧಾನ್ಯ ಹಾಗೂ ಇತರೆ‌ ಗೃಹೋಪಯೋಗಿ ಉತ್ಪನ್ನಗಳೊಂದಿಗೆ ಮಾರಲಾಗುತ್ತದೆ. ಜೀವಂತ ಪ್ರಾಣಿಗಳನ್ನು ಮಾರುವುದೇ ಇಲ್ಲಿಯ ವಿಶೇಷವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next