ವಾಷಿಂಗ್ಟನ್ : ಕೋವಿಡ್ 19 ಸೋಂಕು ಚೀನಾದ ವುಹಾನ್ ನಿಂದ ಹರಡುವ ಒಂದು ತಿಂಗಳ ಮುಂಚೆಯೇ ಅಂದರೇ, 2019ರ ನವೆಂಬರ್ ನಲ್ಲಿಯೇ ಚೀನಾದ ವುಹಾನ್ ಇನ್ ಸ್ಟಿಟ್ಯೂಟ್ ಆಫ್ ವೈರಾಲಜಿ (ಡಬ್ಲ್ಯುಐವಿ) ಯ ಮೂವರು ಸಂಶೋಧಕರು ಹಾಸ್ಪಿಟಲ್ ಕೇರ್ ನನ್ನು ಕೋರಿದ್ದರು ಎಂಬ ಆಘಾತಕಾರಿ ಮಾಹಿತಿಯೊಂದನ್ನು ವಾಲ್ ಸ್ಟ್ರೀಟ್ ಜರ್ನಲ್ ಬಹಿರಂಗ ಪಡಿಸಿದೆ.
ಸೋಂಕು ಪೀಡಿತ ಒಟ್ಟು ಸಂಶೋಧಕರ ಸಂಖ್ಯೆ, ಅವರ ಆಸ್ಪತ್ರೆಯ ದಾಖಲೆಗಳನ್ನು ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಹಾಗೂ ಚೀನಾ ಸರ್ಕಾರ ಮುಚ್ಚಿ ಹಾಕಿದೆ ಎಂಬುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ : ಲಸಿಕೆ, ಆಕ್ಸಿಜನ್ ಲಭ್ಯತೆ ಬಗ್ಗೆ ರಾಜ್ಯ ಸರ್ಕಾರ ಶ್ವೇತ ಪತ್ರ ಹೊರಡಿಸಲಿ: ಸಿದ್ದರಾಮಯ್ಯ
ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್ 19 ನಿರ್ಣಯ ಸಮಿತಿಯ ಸಭೆಯ ಮುನ್ನಾದಿನ ವಾಲ್ ಸ್ಟ್ರೀಟ್ ಜರ್ನಲ್ ಈ ವರದಿ ಮಾಡಿದೆ.
Related Articles
ಕೋವಿಡ್ 19 ಸೋಂಕಿನ ಮೂಲವನ್ನು ತನಿಖೆ ಮಾಡುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ 19 ನಿರ್ಣಯ ಸಮಿತಿಯನ್ನು ರೂಪಿಸಿದ್ದು, ಮುಂದಿನ ದಿನಗಳಲ್ಲಿ ತನಿಖೆಯ ಮುಂದಿನ ಪ್ರಕ್ರಿಯೆಗಳ ಬಗ್ಗೆ ಚರ್ಚಿಸುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.
ಇನ್ನು, ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರರು ಜರ್ನಲ್ ನ ವರದಿಯ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ. ಆದರೇ, ಬೈಡೆನ್ ನೇತೃತ್ದ ಸರ್ಕಾರವು ಕೋವಿಡ್ 19 ಸಾಂಕ್ರಾಮಿಕ ರೋಗದ ಆರಂಭಿಕ ದಿನಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹೊಂದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಲಸಿಕೆಯ ಉತ್ಪಾದನಾ ಮಟ್ಟವನ್ನು ಹೆಚ್ಚಿಸಿ, ಹೀಗೆ ಆದರೇ ಎರಡು ವರ್ಷಗಳಾಗುತ್ತವೆ : ಕೇಜ್ರಿವಾಲ್
ಕೋವಿಡ್ ಸೋಂಕಿನ ಮೂಲವನ್ನು ತನಿಖೆ ಮಾಡುವುದಕ್ಕೆ ಅಮೆರಿಕಾ ಸರ್ಕಾರ ಕೂಡ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಇದು ರಾಜಕೀಯದಿಂದ ಮುಕ್ತವಾಗಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನು, ನಾವು SARS-CoV-2 ನ ಮೂಲದ ಬಗ್ಗೆ ನಡೆಯುತ್ತಿರುವ ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನವನ್ನು ಪೂರ್ವಾಗ್ರಹಿಸಿ ಆ ಬಗ್ಗೆ ಪ್ರತಿಕ್ರಿಯಿಸಲು ಮುಂದಾಗುವುದಿಲ್ಲ. ಅಧ್ಯಯನದ ಆಳ ಮತ್ತು ತಾಂತ್ರಿಕ ವಿಶ್ವಾಸಾರ್ಹತೆಯನ್ನು ಅಂತರರಾಷ್ಟ್ರೀಯ ತಜ್ಞರು ಸಂಪೂರ್ಣವಾಗಿ ಅಧ್ಯಯನ ಮಾಡಿದ ನಂತರ ನಾವು ಆ ಬಗ್ಗೆ ಪ್ರತಿಕ್ರಿಸಯಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಇನ್ನು, ಚೀನಾದ ಚೀನಾದ ವುಹಾನ್ ಇನ್ ಸ್ಟಿಟ್ಯೂಟ್ ಆಫ್ ವೈರಾಲಜಿ ಲ್ಯಾಬ್ ಸಂಶೋಧಕರ ಪರಿಚಯವಿರುವ ಹೆಸರು ಹೇಳಲು ಇಚ್ಛಿಸದ ಕೆಲವು ಪ್ರಸ್ತುತ ಮತ್ತು ಮಾಜಿ ಅಧಿಕಾರಿಗಳು ವರದಿಯ ಪೋಷಕ ಸಾಕ್ಷ್ಯಗಳ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದಾಗಿ ವಾಲ್ ಸ್ಟ್ರೀಟ್ ತಿಳಿಸಿದ್ದು, ‘ಹೆಚ್ಚಿನ ತನಿಖೆ ಅಗತ್ಯವಿದೆ ಎಂದು ವರದಿ ಮಾಡಿದೆ.
ಮಾರ್ಚ್ ನಲ್ಲಿ ಯುನೈಟೆಡ್ ಸ್ಟೇಟ್ಸ್, ನಾರ್ವೆ, ಕೆನಡಾ, ಬ್ರಿಟನ್ ಮತ್ತು ಇತರ ದೇಶಗಳು ವಿಶ್ವ ಆರೋಗ್ಯ ಸಂಸ್ಥೆ ನೇತೃತ್ವದ ಕೋವಿಡ್ 19 ಮೂಲದ ಅಧ್ಯಯನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದವು.
ಅಮೆರಿಕಾ ಈ ವಿಷಯದಲ್ಲಿ ಕುತಂತ್ರ ಮಾಡುತ್ತಿದೆ : ಚೀನಾ
ಈ ಬಗ್ಗೆ ಪ್ರತಿಕ್ರಿಯಿಸಿದ ಚೀನಾದ ವಿದೇಶಾಂಗ ಸಚಿವಾಲಯ, ಫೆಬ್ರವರಿಯಲ್ಲಿ ವೈರಾಲಜಿ ಸಂಸ್ಥೆಗೆ ಭೇಟಿ ನೀಡಿದ ಡಬ್ಲ್ಯು ಎಚ್ ಒ ನೇತೃತ್ವದ ತಂಡವು ಲ್ಯಾಬ್ ನಿಂದ ಸೋಂಕು ಹರಡಿರುವುದಕ್ಕೆ ಸಂಭವ ತೀರಾ ಕಡಿಮೆ ಇದೆ ಎಂದು ಹೇಳಿತ್ತು. ಆದರೇ, “ಯುಎಸ್ ಲ್ಯಾಬ್ ನಿಂದಲೇ ಸೋಂಕು ಹರಡಿದೆ ಎಂಬ ವಿಚಾರವನ್ನು ಪರೋಕ್ಷವಾಗಿ ಪ್ರಚೋದಿಸುತ್ತಿದೆ”. “ಇದು ನಿಜವಾಗಿಯೂ ಮೂಲವನ್ನು ಪತ್ತೆಹಚ್ಚುವ ಬಗ್ಗೆಯೇ ಅಥವಾ ಗಮನವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನವೇ ?” ಅಮೆರಿಕಾ ಈ ಬಗ್ಗೆ ಕುತಂತ್ರ ಮಾಡುತ್ತಿದೆ ಎಂದು ಹೇಳಿದೆ
ಒಟ್ಟಿನಲ್ಲಿ, ಕೋವಿಡ್ 19 ಸೋಂಕಿನ ಮೂಲದ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಈಗ ದೊಡ್ಡ ಚರ್ಚೆಯಾಗುತ್ತಿದ್ದು, ಅಮೆರಿಕಾ ಹಾಗೂ ಚೀನಾದ ಆಂತರಿಕ ವೈಮನಸ್ಸು ಈ ವಿಚಾರದಲ್ಲಿ ಎದ್ದು ಕಾಣುತ್ತಿದೆ. ಸದ್ಯ, ವಿಶ್ವ ಆರೋಗ್ಯ ಸಂಸ್ಥೆಯ ನೇತೃತ್ವದಲ್ಲಿ ಕೋವಿಡ್ ಸೋಂಕಿನ ಮೂಲವನ್ನು ಪತ್ತೆ ಹಚ್ಚಲು ತನಿಖಾ ತಂಡ ರಚನೆಯಾಗಿದ್ದು, ಪತ್ತೆ ಕಾರ್ಯದಲ್ಲಿ ತೊಡಗಿದೆ.
ಇದನ್ನೂ ಓದಿ : ಮೇ.25ರಿಂದ ಜೂ.7ರವರೆಗೆ ಉಡುಪಿ ಜಿಲ್ಲೆಯಲ್ಲಿ ಯಾವುದೇ ಮದುವೆ ಕಾರ್ಯಕ್ರಮಕ್ಕೆ ಅವಕಾಶವಿಲ್ಲ