ಸಿಡ್ನಿ: ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಿಮ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯವಾಗಿದೆ. ಈ ಡ್ರಾದೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ತಲುಪಲು ಆಸ್ಟ್ರೇಲಿಯಾ ತಂಡವು ಇನ್ನಷ್ಟು ಕಾಯಬೇಕಾಗಿದೆ.
ಆಸ್ಟ್ರೇಲಿಯಾವು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಕಾಯ್ದಿರಿಸಲು ಭಾರತ ವಿರುದ್ಧದ ಮುಂಬರುವ ಸರಣಿಯವರೆಗೂ ಭಾರತದ ವಿರುದ್ಧದ ಸರಣಿಗೆ ಕಾಯಬೇಕು.
ಆಸ್ಟ್ರೇಲಿಯವು ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಸಿಡ್ನಿ ಟೆಸ್ಟ್ ನ ನಂತರ ಆಸೀಸ್ ಶೇಕಡಾವಾರು ಅಂಕ 75.56% ಕ್ಕೆ ಇಳಿಯಿತು. ರೋಹಿತ್ ಶರ್ಮಾ ಅವರ ತಂಡವು 58.93 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ, ಶ್ರೀಲಂಕಾ ಕೂಡ 53.33% ನೊಂದಿಗೆ ಮೂರನೇ ಸ್ಥಾನದಲ್ಲಿದೆ.
ಇದನ್ನೂ ಓದಿ:ವಿಶ್ವದ ಅತಿ ಉದ್ದದ ನದಿ ವಿಹಾರ ನೌಕೆಗೆ ಚಾಲನೆ ನೀಡಲಿರುವ ಪ್ರಧಾನಿ
ಆಸ್ಟ್ರೇಲಿಯದಂತೆಯೇ, ದಕ್ಷಿಣ ಆಫ್ರಿಕಾ ಕೂಡ ತಮ್ಮ ಶೇಕಡಾವಾರು ಅಂಕವನ್ನು ಕಳೆದುಕೊಂಡಿದೆ. ದಕ್ಷಿಣ ಆಫ್ರಿಕಾ ತಂಡವು 48.72% ಅಂಕದೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಫೈನಲ್ ಗೂ ಮೊದಲು ವೆಸ್ಟ್ ಇಂಡೀಸ್ ವಿರುದ್ಧದ ತವರಿನಲ್ಲಿ ಸರಣಿಯನ್ನು ಆಡಲಿದೆ. ಕೆರಿಬಿಯನ್ ತಂಡದ ವಿರುದ್ಧ ಆ ಎರಡೂ ಟೆಸ್ಟ್‌ಗಳಲ್ಲಿ ಜಯಗಳಿಸಬೇಕಾಗಿದೆ. ಅಲ್ಲದೆ ದಕ್ಷಿಣ ಆಫ್ರಿಕಾದ ಅವಕಾಶಗಳು ಇತರ ತಂಡಗಳ ಮೇಲೆ ಅವಲಂಬಿತವಾಗಿದೆ.