ಮಂಬೈ: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಮೊದಲೆರಡು ಆವೃತ್ತಿಯಲ್ಲಿ ಫೈನಲ್ ತಲುಪಿದ್ದ ಭಾರತ ತಂಡವು ಈ ಬಾರಿ ಸಂಕಷ್ಟದಲ್ಲಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ 28 ರನ್ ಗಳ ಸೋಲನುಭವಿಸಿದ ರೋಹಿತ್ ಶರ್ಮಾ ಪಡೆಯು ಸದ್ಯ ಡಬ್ಲ್ಯೂಟಿಸಿ ರ್ಯಾಂಕಿಂಗ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
ಎರಡು ಬಾರಿಯ ರನ್ನರ್ ಅಪ್ ಭಾರತ ಸದ್ಯ ಡಬ್ಲ್ಯೂಟಿಸಿ ರ್ಯಾಂಕಿಂಗ್ ಪಟ್ಟಿಯಲ್ಲಿ ಬಾಂಗ್ಲಾದೇಶಕ್ಕಿಂತ ಕೆಳಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಟೆಸ್ಟ್‌ಗಳ ಸರಣಿಯಲ್ಲಿ ಡ್ರಾ ಸಾಧಿಸಿದ ನಂತರ, ಪಾಕಿಸ್ತಾನದ ವಿರುದ್ಧ ವಿಜಯಶಾಲಿಯಾದ ನಂತರ ಆಸ್ಟ್ರೇಲಿಯಾ ಅವರನ್ನು ಹಿಂದಿಕ್ಕುವವರೆಗೆ ಭಾರತ ಸಂಕ್ಷಿಪ್ತವಾಗಿ ಮುನ್ನಡೆ ಸಾಧಿಸಿತು. ಸದ್ಯ ಆಸ್ಟ್ರೇಲಿಯಾವು 55 ಶೇಕಡಾ ಅಂಕಗಳೊಂದಿಗೆ ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ಭಾರತವು 43.33% ನೊಂದಿಗೆ ಐದನೇ ಸ್ಥಾನಕ್ಕೆ ಇಳಿದಿದೆ.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಸ್ಥಾನ ಪಡೆಯಲು ಭಾರತ ಮುಂಬರುವ ಟೆಸ್ಟ್ ಸರಣಿಯನ್ನು ಗೆಲ್ಲುವತ್ತ ಗಮನ ಹರಿಸಬೇಕು. ಡಬ್ಲ್ಯೂಟಿಎಸ್ ನಲ್ಲಿ ಗೆಲುವಿಗೆ 12 ಅಂಕಗಳು, ಡ್ರಾಕ್ಕಾಗಿ 4 ಮತ್ತು ಟೈಗಾಗಿ 6 ಅಂಕಗಳನ್ನು ನೀಡಲಾಗುತ್ತಿದೆ. ಈ ಆವೃತ್ತಿಯಲ್ಲಿ ಭಾರತ ತಂಡವು ಐದು ಟೆಸ್ಟ್ ಗಳನ್ನು ಆಡಿದ ಭಾರತ, ಎರಡರಲ್ಲಿ ಗೆದ್ದಿದೆ, ಎರಡರಲ್ಲಿ ಸೋತಿದೆ ಮತ್ತು ಒಂದು ಡ್ರಾ ಸಾಧಿಸಿದೆ. ಶ್ರೇಯಾಂಕದಲ್ಲಿ ಮೇಲೇರಲು, ಮುಂಬರುವ ಪಂದ್ಯಗಳಲ್ಲಿ ಭಾರತ ಹೆಚ್ಚಿನ ಗೆಲುವು ಸಾಧಿಸಬೇಕಿದೆ.