Advertisement

ಡಬ್ಲ್ಯುಟಿಎ ಫೈನಲ್ಸ್‌: ಮೊದಲ ಪ್ರಶಸ್ತಿ ಜಯಿಸಿದ ಬಾರ್ಟಿ

10:01 AM Nov 04, 2019 | Sriram |

ಶೆಂಜೆನ್‌ (ಚೀನ): ವಿಶ್ವದ ನಂಬರ್‌ ವನ್‌ ಟೆನಿಸ್‌ ಆಟಗಾರ್ತಿ, ಆಸ್ಟ್ರೇಲಿಯದ ಆ್ಯಶ್ಲಿ ಬಾರ್ಟಿ ಮೊದಲ ಸಲ “ಡಬ್ಲ್ಯುಟಿಎ ಫೈನಲ್ಸ್‌’ ಕೂಟದ ಚಾಂಪಿಯನ್‌ ಆಗಿ ಮೂಡಿಬಂದಿದ್ದಾರೆ.

Advertisement

ರವಿವಾರ “ಶೆಂಜೆನ್‌ ಬೇ ನ್ಪೋರ್ಟ್ಸ್ ಸೆಂಟರ್‌’ನಲ್ಲಿ ನಡೆದ ಫೈನಲ್‌ನಲ್ಲಿ ಅವರು ಹಾಲಿ ಚಾಂಪಿಯನ್‌, ಉಕ್ರೇನಿನ ಎಲಿನಾ ಸ್ವಿಟೋಲಿನಾ ವಿರುದ್ಧ 6-4, 6-3 ನೇರ ಸೆಟ್‌ಗಳ ಜಯ ಸಾಧಿಸಿ “ಬಿಲ್ಲಿ ಜೀನ್‌ ಕಿಂಗ್‌ ಟ್ರೋಫಿ’ಯನ್ನು ತಮ್ಮದಾಗಿಸಿಕೊಂಡರು. ಒಂದು ಗಂಟೆ, 26 ನಿಮಿಷಗಳ ಕಾಲ ಇವರ ಹೋರಾಟ ಸಾಗಿತು.

ಈ ಗೆಲುವಿಗಾಗಿ ಆ್ಯಶ್ಲಿ ಬಾರ್ಟಿ 4.42 ಮಿಲಿಯನ್‌ ಡಾಲರ್‌ ಬಹುಮಾನವನ್ನು ತಮ್ಮದಾಗಿಸಿಕೊಂಡರು. ಇದು ಟೆನಿಸ್‌ ಕೂಟದ ಅತ್ಯಧಿಕ ಮೊತ್ತದ ಬಹುಮಾನವಾಗಿದೆ.

ವನಿತಾ ಡಬಲ್ಸ್‌ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಟೈಮಿಯಾ ಬಬೋಸ್‌ (ಹಂಗೇರಿ)-ಕ್ರಿಸ್ಟಿನಾ ಲಡೆನೋವಿಕ್‌ (ಫ್ರಾನ್ಸ್‌) ಯಶಸ್ವಿಯಾಗಿದ್ದಾರೆ. ಫೈನಲ್‌ನಲ್ಲಿ ಅವರು ಬಾಬೊìರಾ ಸ್ಟ್ರೈಕೋವಾ- ಶೀ ಸು ವೀ ವಿರುದ್ಧ 6-1, 6-3 ಅಂತರದ ಗೆಲುವು ಸಾಧಿಸಿದರು. ಫ್ರೆಂಚ್‌ ಓಪನ್‌ ಚಾಂಪಿಯನ್‌ ಕೂಡ ಆಗಿರುವ ಬಬೋಸ್‌-ಲಡೆನೋವಿಕ್‌ 2008ರ ಬಳಿಕ ಇಲ್ಲಿ ಟ್ರೋಫಿ ಉಳಿಸಿಕೊಂಡ ಮೊದಲ ಜೋಡಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next