Advertisement

ತಪ್ಪು ಮತ ನಿಮ್ಮ ಮಕ್ಕಳನ್ನು ಚಾಯ್‌ವಾಲಾರನ್ನಾಗಿಸುತ್ತದೆ: ಸಿಧು

08:42 AM May 01, 2019 | Team Udayavani |

ಹೊಸದಿಲ್ಲಿ : ಪ್ರಧಾನಿ ದನರೇಂದ್ರ ಮೋದಿ ಅವರವಿರುದ್ಧ ವಾಗ್‌ದಾಳಿ ಮುಂದುವರೆಸಿರುವ ಪಂಜಾಬ್‌ ಸಚಿವ, ಕಾಂಗ್ರೆಸ್‌ ನಾಯಕ ನವ್‌ಜೋತ್‌ ಸಿಂಗ್‌ ಸಿಧು ತಪ್ಪು ಮತ ನಿಮ್ಮ ಮಕ್ಕಳನ್ನು ಚಾಯ್‌ವಾಲಾರನ್ನಾಗಿಸುತ್ತದೆ ಎಂದು ಟ್ವೀಟ್‌ ಮಾಡಿದ್ದಾರೆ.

Advertisement

ಎಂದಿನಂತೆ ಪ್ರಧಾನಿ ಮೋದಿ ವಿರುದ್ಧಸೋಮವಾರ ಪೋಸ್ಟ್‌ ಮಾಡಿರುವ ಸಿಧು, ತಪ್ಪು ಮತ ಎನ್ನುವುದು ನಿಮ್ಮ ಮಕ್ಕಳನ್ನು ಚಾಯ್‌ವಾಲಾ, ಪಕೋಡಾವಾಲಾ ಮತ್ತು ಚೌಕೀದಾರ್‌ನನ್ನಾಗಿಸುತ್ತದೆ. ಪಶ್ಚಾತಾಪ ಮತ್ತು ದುರಸ್ತಿ ಮಾಡುವ ಬದಲು ತಡೆಯಿರಿ ಮತ್ತು ತಯಾರಾಗಿರಿ ಎಂದು ಬರೆದಿದ್ದಾರೆ.

ಸಿಧು ಟ್ವೀಟ್‌ಗೆ ಬಿಜೆಪಿ ಪ್ರತಿಕ್ರಿಯೆ ನೀಡಿದ್ದು ವಂಶಪರಂಪರೆಯ ಆಳ್ವಿಕೆಯಿರುವ ಕಾಂಗ್ರೆಸ್‌ ಸಾಮಾನ್ಯ ವ್ಯಕ್ತಿಗಳಿಗೆ ಸಂಬಂಧಿಸಿದ್ದಲ್ಲ ಎಂದು ತಿರುಗೇಟು ನೀಡಿದೆ.

ಇದು ಕಾಂಗ್ರೆಸ್‌ ಪಕ್ಷಕ್ಕೆ ಜನಸಾಮಾನ್ಯರ ಬಗ್ಗೆ ಇರುವ ತಿರಸ್ಕಾರ ಭಾವವನ್ನು ತೋರುತ್ತದೆ.ಸಿಧು ದೇಶದ ಪ್ರಧಾನಿಗೆ ಮಾತ್ರವಲ್ಲ, ಚೌಕೀದಾರ್‌, ಚಾಯ್‌ವಾಲಾ ಮತ್ತು ಪಕೋಡ ಮಾರುವ ಲಕ್ಷಾಂತರ ಜನರಿಗೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ವಕ್ತಾರರು ಕಿಡಿ ಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next